ಲೋಕದರ್ಶನ ವರದಿ
ಬೆಳಗಾವಿ 11: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಟ್ರಸ್ಟಿಗಳಾದ ಗೌರವಾನ್ವಿತ ಡಿ.ಸುರೇಂದ್ರಕುಮಾರ್ರವರು ಬೆಳಗಾವಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಳಗಾವಿ-01 ಜಿಲ್ಲಾಕಛೇರಿಗೆ ಭೇಟಿ ನೀಡಿ ಯೋಜನೆಯ ಕಾರ್ಯಕರ್ತರ ಕಾರ್ಯ ವೈಖರಿ ಬಗ್ಗೆ ಮಾತನಾಡುತ್ತಾ ಪರಮ ಪೂಜ್ಯಖಾವಂದರು. ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಹೇಮಾವತಿ. ವೀ. ಹೆಗ್ಗಡೆಯವರ ಗ್ರಾಮಾಭಿವೃದ್ಧಿ ಕನಸನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಾರ್ಯಕ್ರಮಗಳನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿ ಕಾರ್ಯಕರ್ತರು ಕರ್ತವ್ಯ ನಿರ್ವಹಿಸಿದ್ದು ಫಲಾನುಭವಿಗಳಿಗೆ ಯೋಜನೆಯ ಕಾರ್ಯಕ್ರಮಗಳನ್ನು ಉತ್ತಮವಾಗಿ ತಲುಪಿದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಎಲ್ಲಾ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿದರು.
ಇದೇ ಸಂದರ್ಭದಲ್ಲಿ ಕನರ್ಾಟಕ ಸಕರ್ಾರದಿಂದ ಕನರ್ಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ಗೌರವಾನ್ವಿತರಿಗೆ ಬೆಳಗಾವಿ ಜಿಲ್ಲೆ ಎಲ್ಲಾ ಕಾರ್ಯಕರ್ತರು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಬೆಳಗಾವಿ-01 ಜಿಲ್ಲಾ ನಿದರ್ೇಶಕರಾದ ಶೀನಪ್ಪ ಮೂಲ್ಯ, ಪ್ರಸನ್ನಕುಮಾರ, ಪುಷ್ಪರಾಜ, ಜಿವಂದರ್, ಗುಣಪಾಲ್ಜೈನ್, ಮಹಾವೀರ, ಪದ್ಮರಾಜಕರಡಿ, ಜಿಲ್ಲಾಯೋಜನಾಧಿಕಾರಿ, ತಾಲೂಕಾ ಯೋಜನಾಧಿಕಾರಿ ಹಾಗೂ ಎಲ್ಲಾ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.