ಅತಿಥಿ ಶಿಕ್ಷಕ ಎಸ್.ರಾಮಪ್ಪನವರಿಗೆ “ಜೀವನಜ್ಯೋತಿ” ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಕಂಪ್ಲಿ 05: ಕಂಪ್ಲಿ ತಾಲ್ಲೂಕಿನ ಎಮ್ಮಿಗನೂರು ಗ್ರಾಮದ ಸರ್ಕಾರಿ ಶತಮಾನ ಶಾಲೆಯ ಅತಿಥಿ ಶಿಕ್ಷಕರು,ಸಂಪನ್ಮೂಲಕ ವ್ಯಕ್ತಿಗಳು, ಸಮಾಜ ಸೇವಕಾರದ ಎಸ್. ರಾಮಪ್ಪನವರಿಗೆ “ಜೀವನಜ್ಯೋತಿ” ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಅತಿಥಿ ಶಿಕ್ಷಕ ಎಸ್.ರಾಮಪ್ಪನವರ ಸುಧೀರ್ಘ ವರ್ಷಗಳ ಶಿಕ್ಷಕ ವೃತ್ತಿ, ಸಮಾಜ ಸೇವೆಯನ್ನು ಗುರುತಿಸಿ ಬೆಂಗಳೂರಿನ ಕನಸು ಡಿಜಿಟಲ್ ಸಲ್ಯೂಷನ್ ಹಾಗೂ ಬೆಳಗಾವಿಯ ಅನ್ನಪೂರ್ಣೇಶ್ವರಿ ಹ್ಯುಮ್ಯಾನಿಟಿ ಮತ್ತು ಏಕಲವ್ಯ ಟ್ರಸ್ಟ್ ಸಹಯೋಗದಲ್ಲಿ ಬೆಂಗಳೂರಿನ ಕನ್ನಡ ಭವನದ ನಯನ ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ 2025ರ “ಜೀವನಜ್ಯೋತಿ” ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಈ ಸಂದರ್ಭದಲ್ಲಿ ಚಲಚಿತ್ರ ಮೇಕಪ್ ಕಲಾವಿದ ಯೋಗೀಶ್, ಮಹಾಂತೇಶ್ ಕಡಲಗಿ, ಲಾವಣ್ಯ, ಮೌನೇಶ್, ಮಹೇಶಗೌಡ ಸೇರಿದಂತೆ ಇತರರು ಇದ್ದರು.