ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಿ : ಬಿಎನ್ಪಿ

ಲೋಕದರ್ಶನ ವರದಿ

ಸಿಂದಗಿ : ಸಮಾಜದಲ್ಲಿ ಮಾನವಿಯ ಮೌಲ್ಯಗಳ ಕೊರತೆ ಹೆಚ್ಚು ಕಾಣುತ್ತಿದೆ. ಆದ್ದರಿಂದ ನಾಳಿನ ಪ್ರಜೆಗಳಾದ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವುದ ಅತ್ಯವಶ್ಯಕ ಎಂದು ಸ್ಥಳಿಯ ಸಿ.ಎಂ.ಮನಗೂಳಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಪ್ರಾಧ್ಯಾಪಕ, ಜಿಲ್ಲಾ ಕನರ್ಾಟಕ ಜಾನಪದ ಪರಿಷತ್ ಅಧ್ಯಕ್ಷ ಬಿ.ಎನ್.ಪಾಟೀಲ ಇಬ್ರಾಹಿಂಪೂರ ಹೇಳಿದರು.

ಗುರುವಾರ ಪಟ್ಟಣದ ವಿದ್ಯಾಚೇತನ ಹಿರಿಯ ಪ್ರಾಥಮಿಕಶಾಲೆ ಸಭಾಭವನದಲ್ಲಿ ಕ್ರಿಯೇಟಿವ್ ಕಿಡ್ಸ್ ಹೋಮ್ ಹಮ್ಮಿಕೊಂಡ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಕ್ಕಳನ್ನು ಹೆತ್ತರೆ ಸಾಲದು ಅವರ ಬದುಕು ರೂಪಿಸಬೇಕು. ಅವರಿಗೆ ಪೌಷ್ಠಿಕ ಆಹಾರ, ಮೌಲ್ಯಾಧಾರಿತ ಶಿಕ್ಷಣ, ತಂದೆ-ತಾಯಿ, ಗುರು-ಹಿರಿಯರ ಪ್ರೀತಿ ಮಾರ್ಗದರ್ಶನ ನೀಡಿ ಅವರ  ಸರ್ವತೋಮುಖ ಬೆಳವಣಿಗೆಗೆ ಎಲ್ಲರೂ ಕೈ ಜೋಡಿಸಿ ಎಂದರು.

ಕ್ರಿಯೇಟಿವ್ ಕಿಡ್ಸ್ ಹೋಮ್ನ ವಿದ್ಯಾಥರ್ಿಗಳು ಮಹಾಪುರುಷರ, ಸ್ವತಂತ್ರಹೋರಾಟಗಾರರ, ಕ್ರೀಡಾಪಟುಗಳ ಸೇರಿದಂತೆ ವಿವಿಧ ಪಾತ್ರಗಳ ವೇಷತೊಟ್ಟು ಪಾತ್ರ ನಿರ್ವಹಿಸುವ ಮೂಲಕ ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಿದರು.

ಮುಖ್ಯಗುರುಮಾತೆ ಜ್ಯೋತಿ ರಮೇಶ ಪೂಜಾರ ಮಾತನಾಡಿ, ಮಕ್ಕಳಿಗೆ ಅವರದೆಯಾದ ಹಕ್ಕುಗಳಿವೆ ಅವುಗಳನ್ನು ಮಕ್ಕಳು ಅನುಭವಿಸಲು ನಾವು ಮಾರ್ಗದರ್ಶನ ನೀಡುವುದು ಅತ್ಯವಶ್ಯಕ ಎಂದರು.

ಮೇರಿ ಮಿಸ್, ಜಾರ್ಜ ಡಿಸೋಜಾ, ದಾನಮ್ಮ ಗಣಾಚಾರಿ, ಮೈನುದ್ದಿನ ದೇವಿಕೇರಿ, ರಾಜು ಹಿರೇಕುರಬರ, ಸುಧಾ ಹಿರೇಮಠ, ಯಶೋಧಾ ಕುಂಬಾರ, ವಿಜಯಲಕ್ಷ್ಮಿ ಶಹಾಪೂರ, ಆಶ್ವಿನಿ ಲೋಣಿ, ಸಾಧನಾ ಇಮಡೆ, ಮಂಗಳಾ ಬಮ್ಮಣ್ಣಿ, ವಿಜಯಲಕ್ಷ್ಮಿ ಮಠಪತಿ, ಭಾಗ್ಯಶ್ರೀ ಬಡಿಗೇರ, ಶರಣು ಗೋಜರ್ಿ, ಶ್ರೀಶೈಲ ಹೂಗಾರ, ಸುಲ್ತಾನಬಿ, ರೇಣುಕಾ ಕುಂಬಾರ ಸೇರಿದಂತೆ ವಿದ್ಯಾಥರ್ಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.