ಸಹಾಯ ಮಾಡುವ ಕೈಗಳು ನಮಿಸುವ ಕೈಗಳಿಗಿಂತ ಶ್ರೇಷ್ಠ: ಡಾ.ವಜ್ರಕುಮಾರ

ಲೋಕದರ್ಶನವರದಿ

ಧಾರವಾಡ06; ಕಷ್ಟದಲ್ಲಿರುವರಿಗಾಗಿ ಸಹಾಯ ಮಾಡುವ ಕೈಗಳು ನಮಿಸುವ ಕೈಗಳಿಗಿಂತ ಶ್ರೇಷ್ಠವಾದವು. ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ಸಮಾಜ, ಪರಿಸರ ನೈತಿಕತೆ ಬಗ್ಗೆ ತಿಳುವಳಿಕೆ ನೀಡಬೇಕು. ಆಗ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಪ್ರವೃತ್ತಿ ಬೆಳೆಯುತ್ತದೆ ಎಂದು ಜನತಾ ಶಿಕ್ಷಣ ಸಮಿತಿಯ ಕಾರ್ಯದಶರ್ಿಗಳಾದ ಡಾ. ನ. ವಜ್ರಕುಮಾರರವರು ಧಾರವಾಡದ ಮಾಳಾಪುರ ಅಯ್ಯನವರ ಓಣಿಯಲ್ಲಿ ಸಿಲಿಂಡರ್ ಸ್ಪೋಟದಿಂದ ಗಾಯಗೊಂಡ ಗಂಗಾಧರ ಸಾಲಿಮಠ ಇವರಿಗೆ ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆಗಳ ವಿದ್ಯಾಥರ್ಿಗಳು ಹಾಗೂ ಆಡಳಿತ ಮಂಡಳಿ ನೀಡಿದ ಆಥರ್ಿಕ ನೆರವನ್ನು ನೀಡುತ್ತ ಮಾತನಾಡುತ್ತಿದ್ದರು. ಜೆ.ಎಸ್.ಎಸ್ ಆಡಳಿತ ಮಂಡಳಿ ಸದಾ ನಿನ್ನೋಂದಿಗೆ ಯಾವುದೇ ಕಾರಣಕ್ಕೂ ಧೃತಿಗೆಡಬೇಡ ಎಂದು ಹೇಳಿದರು.

ಪರಸ್ಪರರಿಗೆ ಸಹಾಯ ಮಾಡುವದರಿಂದ ದೊರೆಯುವ ಆತ್ಮ ಸಂತೋಷ ಬೇರೆ ಯಾವುದರಿಂದಲು ದೊರೆಯಲು ಸಾಧ್ಯವಿಲ್ಲ ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆಗಳ ಮಕ್ಕಳು ಈ ರೀತಿ ಆಥರ್ಿಕ ಸಹಾಯ ಮಾಡಿರುವದನ್ನು ನೋಡಿದರೆ. ನೊಂದವರ ಕಣ್ಣಿರೊರೆಸುವ ಜನ ಇದ್ದಾರೆ ಎಂಬುದು ಧೃಡಪಡುತ್ತದೆ ಎಂದು ಜೆ.ಎಸ್.ಎಸ್ ನ ವಿತ್ತಾಧಿಕಾರಿ ಡಾ. ಅಜಿತ ಪ್ರಸಾದ ಹೇಳಿದರು.

   ಜೆ.ಎಸ್.ಎಸ್ ನ ಐ.ಟಿ.ಐ ನಲ್ಲಿ ಅಧ್ಯಯನ ಮಾಡುತ್ತಿರುವ ಗಂಗಾಧರ ಸಾಲಿಮಠ ಇತನ ಮನೆಯಲ್ಲಿ ಸಿಲೆಂಡರ್ ಸ್ಪೋಟಗೊಂಡು ಮನೆ ಸಂಪೂರ್ಣ ನಾಶಗೊಂಡಿದ್ದು, ತೀವ್ರವಾಗಿ ಗಾಯಗೊಂಡ ತಂದೆ, ಅಜ್ಜಿ ಹಾಗೂ ತಂಗಿ ಬಾಡಿಗೆ ಮನೆಯೊಂದರಲ್ಲಿ ಆರೈಕೆಯಾಗುತ್ತಿದ್ದಾರೆ. ಇತನ ಕುಟುಂಬಕ್ಕೆ ಸದ್ಯ ಆಥರ್ಿಕ ಸಹಾಯ ಬೇಕಾಗಿದ್ದು, ದಾನಿಗಳು ಗಂಗಾಧರ ಸಾಲಿಮಠ, ಬ್ಯಾಂಕ ಖಾತೆ ಸಂಖ್ಯೆ : 37048808215, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಮರಾಠಾ ಕಾಲೋನಿ ಶಾಖೆ, ಆಯ್.ಎಫ್.ಎಸ್.ಸಿ ಸಂಖ್ಯೆ ಖಃಓ0017788 ಖಾತೆಗೆ ಹಣ ಜಮೆ ಮಾಡಬಹುದು ಹಾಗೂ ಇತರೆ ಸಹಾಯ ಮಾಡುವವರು ದೂರವಾಣಿ 9844217779 ಅಥವಾ 7411502339 ಗೆ ಸಂಪಕರ್ಿಸಬಹುದು.

   ಮಹಾವೀರ ಉಪಾದ್ಯೆ, ಬಿ. ಎ. ತಡಕೊಡ, ಪ್ರಮೋದ ಕಟ್ಟಿ, ಮಂಜುನಾಥ ಚಟ್ಟೇರ ಉಪಸ್ಥಿತರಿದ್ದರು.