ಗ್ರಾಪಂ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮನವಿ

ಲೋಕದರ್ಶನ ವರದಿ 

ಹಳಿಯಾಳ16: ಸಿಐಟಿಯು ಸಂಯೋಜಿತ ಕನರ್ಾಟಕ ರಾಜ್ಯ ಗ್ರಾಮ ಪಂಚಾಯತ ನೌಕರರ ಸಂಘದ ಹಳಿಯಾಳ ತಾಲೂಕಾ ಸಮಿತಿಯವರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದ್ದಾರೆ.

ಸಂಘಟನೆಯ ಸದಸ್ಯರು ಸದರ್ಾರ ವಲ್ಲಭಭಾಯಿ ಪಟೇಲ್ ಮಕ್ಕಳ ಉದ್ಯಾನವನದಿಂದ ಮೆರವಣಿಗೆಯ ಮೂಲಕ ತಾಲೂಕ ಪಂಚಾಯತಿಗೆ ತೆರಳಿ ಈ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆಯ ಪ್ರಧಾನ ಕಾರ್ಯದಶರ್ಿಗೆ ಬರೆದ ಮನವಿ ಪತ್ರವನ್ನು ತಾಲೂಕ ಪಂಚಾಯತ ಕಾರ್ಯನಿವರ್ಾಹಕ ಅಧಿಕಾರಿ ಡಾ. ಮಹೇಶ ಕುರಿಯವರ ಅವರಿಗೆ ಸಲ್ಲಿಸಿದರು.

ಇಲಾಖೆಯ ಆದೇಶದಂತೆ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾಲೂಕ ಪಂಚಾಯತ ಕಾರ್ಯನಿವರ್ಾಹಕ ಅಧಿಕಾರಿ ಇವರುಗಳು ಗ್ರಾಮ ಪಂಚಾಯತಗಳಲ್ಲಿ ಕೈಬಿಟ್ಟಿರುವ ಸಿಬ್ಬಂದಿಗಳಿಗೆ ಇಎಫ್ಎಂಎಸ್ನಲ್ಲಿ ಸೇರಿಸಲು ನೌಕರರ ವಿವರವನ್ನು ಜಿಲ್ಲಾ ಪಂಚಾಯತಿಗೆ ಸಲ್ಲಿಸದೇ ಇರುವುದು ಆಕ್ಷೇಪಣೀಯವಾಗಿದೆ. ಕೂಡಲೇ ಆದೇಶವನ್ನು ಅನುಷ್ಠಾನಗೊಳಿಸುವಂತೆ ಸೂಕ್ತ ನಿದರ್ೇಶನ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳ ಜೊತೆಗೆ ಸುಪ್ರೀಂಕೋಟರ್್ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದನ್ನು ಜಾರಿಗೊಳಿಸಬೇಕು ಎಂದು ಕೋರಲಾಗಿದೆ.

ಸಿಐಟಿಯು ಸಂಯೋಜಿತ ಕನರ್ಾಟಕ ರಾಜ್ಯ ಗ್ರಾಮ ಪಂಚಾಯತ ನೌಕರರ ಸಂಘದ ಹಳಿಯಾಳ ತಾಲೂಕಾ ಸಮಿತಿಯ ಅಧ್ಯಕ್ಷ ಟಿ.ಎಂ. ಗುರುಬಣ್ಣವರ, ಸಿಐಟಿಯು ಮುಖಂಡ ಆರ್.ಎಂ. ಮುಲ್ಲಾ ಇವರುಗಳ ನೇತೃತ್ವದಲ್ಲಿ ಪದಾಧಿಕಾರಿಗಳಾದ ಪುಂಡ್ಲೀಕ್ ಮಿರಾಶಿ, ಪ್ರಕಾಶ ದೊಡ್ಮನಿ, ರಿಯಾಜ್ ಕಿತ್ತೂರ, ನಾಮದೇವ ಕಾಮ್ರೇಕರ, ಮೋಹನ ಶಿಂಧೆ, ಚಂದ್ರಕಾಂತ ಗೌಡಾ ಮೊದಲಾದವರು ಪಾಲ್ಗೊಂಡಿದ್ದರು.