ಕೆರೂರ ಶಾದಿ ಮಹಲಗೆ ಅನುದಾನ: ಶಾಸಕ ಚಿಮ್ಮನಕಟ್ಟಿ ಭರವಸೆ
ಕೆರೂರ 21: ಇಲ್ಲಿನ ಕಿಲ್ಲಾ ಗಲ್ಲಿಯ ಬೃಹತ್ ಶಾದಿ ಮಹಲಗೆ ವಿಶೇಷ ಅನುದಾನ ಕಲ್ಪಿಸಲಾಗುವದು ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಭರವಸೆ ನೀಡಿದ್ದಾರೆ. ಸಮಸ್ತ ಮುಸ್ಲೀಂ ಬಾಂಧವರ ಸಭೆ ಸಮಾರಂಭ, ಮದುವೆಗಳಿಗೆ ಅನುಕೂಲವಾಗಲೆಂದು ನಿರ್ಮಿಸಲಾಗಿದೆ ಎಂದರು. ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿರುವ ಶಾದಿ ಮಹಲ ಈ 2025ರಲ್ಲಿ ಪೂರ್ಣಗೊಂಡು ಲೋಕಾರೆ್ಣಗೊಳಲಿದೆ ಎಂದು ನೌ ಜವಾನ್ ಶೀರತ್ ಕಮಿಟಿ ಕಾರ್ಯದರ್ಶಿ ಉಮರಫಾರೂಕ ಪೆಂಡಾರಿ ಹೇಳಿದರು. ಅಂಜುಮನ ಕಚೇರಿಯಲ್ಲಿ ಜರುಗಿದ ಪತ್ರಕರ್ತರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬಾದಾಮಿ ಶಾಸಕರಾದ ಭೀಮಸೇನ ಚಿಮ್ಮನಕಟ್ಟಿ ಅವರು ಕಮಿಟಿ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಸಮ ಬಾಳು ಸಮ ಪಾಲು ಸಿದ್ಧಾಂತ ಹೊಂದಿದ್ದು ಈ ನಿಟ್ಟಿನಲ್ಲಿ ಅಲ್ಪಸಂಖ್ಯಾತರ ಜೊತೆಗಿದ್ದು ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗಿದ್ದೇವೆ. ನಮ್ಮ ತಂದೆ ಮಾಜಿ ಮಂತ್ರಿಗಳು ಅವರ ಅಧಿಕಾರ ಅವಧಿಯಲ್ಲಿ ಅಲ್ಪಸಂಖ್ಯಾತರ ಹಿತವನ್ನು ಬಯಸಿದ್ದು ನಾನು ಸಹ ಈ ಸಮುದಾಯದ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ ಎಂದು ತಿಳಿಸಿದರು. ನಿರ್ಮಾಣ ಹಂತದಲ್ಲಿರುವ ಶಾದಿ ಮಹಲಗೆ ಸರ್ಕಾರದಿಂದ ಬರಬಹುದಾದ ಅನುದಾನ ಒದಗಿಸುವಂತೆ ಶಾಸಕರು ನೀಡಿದ ಭರವಸೆ ಸಮುದಾಯಕ್ಕೆ ಸಂತಸದ ಜತೆಗೆ ಬಲ ನೀಡಿದೆ. ಪ್ರಸಕ್ತ ವರ್ಷದಲ್ಲಿ ಶಾದಿ ಮಹಲ್ ಉದ್ಘಾಟನೆ ಆಗುವುದು ನಿಶ್ಚಿತ ಎಂದರು. ಅಧ್ಯಕ್ಷ ಮೋದಿನಸಾಬ ದೊಡಕಟ್ಟಿ ಮಾತನಾಡಿ ಸಮುದಾಯದ ಅಭಿವೃದ್ಧಿಗೆ ಅಂಜುಮನ ಕಮಿಟಿ ಶ್ರಮಿಸುತ್ತಿದೆ. ಆರ್ಥಿಕವಾಗಿ ಹಿಂದುಳಿದ ಸಮುದಾಯದ ಜನರಿಗೆ ಆರೋಗ್ಯ ಮತ್ತು ಶಿಕ್ಷಣಕ್ಕೆ ಸಹಾಯ ಸಹಕಾರ ನೀಡುತ್ತಾ ಬಂದಿದ್ದೇವೆ ಎಂದರು. ಮುಖಂಡ ರಫೀಕ್ ಪಿರಖಾನ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಇಸ್ಮಾಯಿಲಸಾಬ ಮುಲ್ಲಾ, ಪ್ರಮುಖರಾದ ಉಸ್ಮಾನಸಾಬ ಮುಲ್ಲಾ, ಸಾಹೇಬಲಾಲ್ ಜಾತಗೇರ, ಹುಸೇನಸಾಬ ನದಾಫ, ಕರೀಮಸಾಬ ದೊಡಮನಿ, ಪತ್ರಕರ್ತರಾದ ರಾಘವೇಂದ್ರ ಕಲಾದಗಿ, ಶ್ರೀಧರ ಚಂದರಗಿ, ಅಬುಬಕರ ಯಡಹಳ್ಳಿ, ಮಲ್ಲೇಶ ಮೆಡಿ ಇತರರಿದ್ದರು.