ಮಹಾವೀರ ಜಯಂತಿ ಪ್ರಯುಕ್ತ ಕೊಪ್ಪಳ ನಗರದಲ್ಲಿ ಭವ್ಯ ಮೆರವಣಿಗೆ
ಕೊಪ್ಪಳ 10: ಮಹಾವೀರ ಜನ್ಮಕಲ್ಯಾಣಕದ ನಿಮಿತ್ತ ನಗರದ ಸಾಹಿತ್ಯ ಭವನ ದಿಂದ ಮೆರವಣಿಗೆ ಜವಾಹರ ರಸ್ತೆ ಮೂಲಕ ಕೋಟೆಯ ಬಸದಿ ಗುಡಿ ದರ್ಶನ ಪಡೆದು ಜೈನ ಮಂದಿರ ಹಾಗೂ ಮಹಾವೀರ ಸಮುದಾಯ ಭವನ ದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಯಿತು.
ಮೆರವಣಿಗೆ ಯಲ್ಲಿ ಜೈನ ಸಮಾಜದ ದಕ್ಷಿತಾ ಸುಭಾಷಚಂದ ನೇತಾಣಿ ಇವರು ದೀಕ್ಷೆ ಸ್ವೀಕರಿಸಲಿದ್ದು ಅವರ ಭವ್ಯ ಮೆರವಣಿಗೆಯೂ ನಡೆಯಿತು. ಸಂಸದರು ರಾಜಶೇಖರ ಹಿಟ್ನಾಳ,ನಗರಸಭೆ ಅಧ್ಯಕ್ಷರಾದ ಅಮ್ಜದ್ ಪಟೇಲ್ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀನಿವಾಸ್ ಗುಪ್ತ ಹಾಗೂ ತಹಶೀಲ್ದಾರ ವಿಠಲ್ ಚೌಗಲಾ ರವರು ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಇತರ ಗಣ್ಯರಾದ ಬಾಸು ಸಾಬ್ ಖತೀಬ್ ರಾಜಶೇಖರ್ ಅಡೂರ ಸೇರಿದಂತೆ ಇತರ ಗಣ್ಯರು ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು.
ನಂತರ ಮಹಾವೀರ ಸಮುದಾಯ ಭವನ ದಲ್ಲಿ ಕೊಪ್ಪಳ ಜೈನ ಸಂಘದ ಅಧ್ಯಕ್ಷ ಹಾಗೂ ನಗರಸಭೆಯ ಮಾಜಿ ಅಧ್ಯಕ್ಷ ಮತ್ತು ಹಾಲಿ ಸದಸ್ಯರಾದ ಮಹೇಂದ್ರ ಚೋಪ್ರಾ ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ದೀಕ್ಷೆ ಸ್ವೀಕರಿಸಿರುವ ದೀಕ್ಷಿತಾ ನೇತಾಣೆ ಮಾತನಾಡಿದರು. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು.ಮಹಿಳಾ ಸಂಘದ ಅಧ್ಯಕ್ಷ ರಾದ ಸಂಗೀತಾ ಜೀರಾವಲಾ ಮಾತನಾಡಿ ಮಹಾವೀರರ ಆದರ್ಶ ಗಳನ್ನು ಅಳವಡಿಸಿ ಕೊಳ್ಳಲು ಹೇಳಿದರು. ಸಮಾಜದ ಅನೇಕ ಗಣ್ಯರು ಹಾಗೂ ಮಹಿಳೆಯರು ಉಪಸ್ಥಿತರಿದ್ದರು.
ಮೆರವಣಿಗೆಯಲ್ಲಿ ಕವಿತಾ ಜಿರಾವಲ ವೈಶಾಲಿ ಗಣೇಶ ಜ್ಯೋತಿ ಪಾರಿಜಾತ ಸಂಗೀತ ಚೋಪ್ರಾ ಅನಿತಾ ಚೋಪ್ರಾ ಹೀರ ಜೀರಾವಲ ರಾಜೇಂದ್ರ ಜೈನ್ ರಾಜೇಶ್ ಲುಂಕಡೆ ಮಹಾವೀರ್ ಸಂಕಲೇಚ ಮಹೇಂದ್ರ ಲುಂಕಡೆ ಪ್ರಮೋದ್ ಜೈನ್ ದೀಪ ನಿರ್ಮಲ ಚೋಪ್ರಾ ಭಾರತ್ ಮಹೇತ ಜವಾಹರ್ಲಾಲ್ ಅಶೋಕ್ ದೀಲೀಪ್ ಮಹಾವೀರ್ ವಿನಾಯಕಿಯ ಗೌತಮ್ ಪಾಲರೇಚ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಜೈನ ಸಮುದಾಯದ ಸಮಾಜ ಬಾಂಧವರು ವಿಶೇಷವಾಗಿ ಮಹಿಳೆಯರು ಪಾಲ್ಗೊಂಡು ಸಡ್ಗರ ಸಂಭ್ರಮದಿಂದ ಭಗವಾನ್ ಮಹಾವೀರ್ ರವರ ಜಯಂತಿ ಆಚರಿಸಿದರು.