12 ರಂದು ಅದ್ಧೂರಿ ಹನುಮಾನ ಜಯಂತ್ಯೋತ್ಸವ

Grand Hanuman Jayanti on the 12th


12 ರಂದು ಅದ್ಧೂರಿ ಹನುಮಾನ ಜಯಂತ್ಯೋತ್ಸವ 

ವಿಜಯಪುರ 10: ಶಹಾಪೂರ ಗೇಟ್, ಜೈಲ್ ರೋಡ್ ಹತ್ತಿರದ ಬಿಜಾಪುರ ಹನುಮಂತ ದೇವರ ಗುಡಿ ಟ್ರಸ್ಟ್‌ ಕಮೀಟಿ (ರಿ) ವತಿಯಿಂದ 2025 ನೇ ಸಾಲಿನ ಹನುಮ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಮತ್ತು ದೇವಸ್ಥಾನಕ್ಕೆ ದೇಣಿಗೆ ನೀಡಿದ ಮಹಾದಾನಿಗಳಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಇದೇ ಶನಿವಾರ ದಿನಾಂಕ : 12 ರಂದು ಬೆಳಿಗ್ಗೆ 10.30 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜಾಪುರ ಹನುಮಂತ ದೇವರ ಗುಡಿ ಟ್ರಸ್ಟ್‌ ಕಮೀಟಿ (ರಿ) ಕಾರ್ಯದರ್ಶಿ ಸುನೀಲ ಕೆಂಭಾವಿ ತಿಳಿಸಿದ್ದಾರೆ. 

ಪ್ರತಿವರ್ಷದಂತೆ ಈ ವರ್ಷವು ಹನುಮಂತ ದೇವರ ಜಾತ್ರೆಯನ್ನು ಹಮ್ಮಿಕೊಳ್ಳುತ್ತಾ ಬರಲಾಗುತ್ತಿದೆ. ಈ ಬಾರಿಯ ಕಾರ್ಯಕ್ರಮಕ್ಕೆ ಸಿದ್ಧಲಿಂಗೇಶ್ವರ ಸ್ವಾಮಿಗಳು, ತೊರವಿ ಅವರು ದಿವ್ಯ ಸಾನಿಧ್ಯವನ್ನು ವಹಿಸಲಿದ್ದಾರೆ. ಆರ್‌.ಕೆ. ಸುರಪೂರ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ  ಅತಿಥಿಗಳಾಗಿ ಕಲಬುರ್ಗಿಯ ಗ್ರಾಮೀಣ ವಲಯ ಶಾಸಕರಾದ  ಬಸವರಾಜ ಮತ್ತಿಮೂಡ,  ಅತಿಥಿಗಳಾಗಿ ವಿಜಯನಗರದ ಅಖಿಲ ಕರ್ನಾಟಕ ಮೋಚಗಾರ ಸಂಘದ ರಾಜ್ಯಾಧ್ಯಕ್ಷರಾದ ಶಿವಪ್ಪಾಜಿ ಮುಳಗುಂದ, ಮಹಾನಗರ ಪಾಲಿಕೆ ವಿಜಯಪುರದ ರಾಹುಲ ಜಾಧವ, ಅ.ಕಮ.ಸಂಘ ಅಧ್ಯಕ್ಷರಾದ ಕೆಂಚಪ್ಪ ಹೊನಕೇರಿ, ಮುಂಬೈ ಮೋಚಗಾರ ಸೇವಾ ಸಂಘದ ಅಧ್ಯಕ್ಷರಾದ ಸಿದ್ರಾಮ ಹತ್ತರಕರ, ಕಲಬುರಗಿಯ ಅ.ಕ.ಮ. ಸಂಘದ ಅದ್ಯಕ್ಷ ಕಾಶಿರಾಯ ನಂದೂರಕರ, ಯಾದಗಿರಿ ಅ.ಕ.ಮ ಸಂಘದ ಅಧ್ಯಕ್ಷ ಲಕ್ಷ್ಮಣ ಡಿಗ್ಗಾವಿ, ಮುದ್ದೇಬಿಹಾಳ ವಕೀಲರ ಸಂಘದ ಅದ್ಯಕ್ಷ ಶಶಿಕಾಂತ ಮಾಲಗತ್ತಿ, ಅಮೀತ ಹೊನಕೇರಿ, ಹನುಮಂತ ಎಸ್‌. ಸಕನಾರಗಿ ಭಾಗವಹಿಸಲಿದ್ದಾರೆ. 

ದಿನಾಂಕ: 12 ರಂದು ಮುಂಜಾನೆ 6-00 ಗಂಟೆಗೆ ಹನುಮಾನ ದೇವರ ಅಭಿಷೇಕ, ಎಲಿಪೂಜೆ, ಹೋಮ, ಹನುಮಾನ ದೇವರ ತೊಟ್ಟಿಲು ಕಾರ್ಯಕ್ರಮ ಮತ್ತು ಮುಂಜಾನೆ 9-00 ಗಂಟೆಗೆ ಉಪಹಾರ ನಂತರ, ಭಕ್ತಿಯ ರಸಮಂಜರಿ ಕಾರ್ಯಕ್ರಮ ಮತ್ತು ಸಿದ್ದಲಿಂಗೇಶ್ವರ ಸ್ವಾಮೀಜಿಗಳು, ತೊರವಿ ಮತ್ತು ಶಾಸಕರು. ಗಣ್ಯಮಾನ್ಯರ ಸನ್ಮಾನಿಸುವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಾಗೂ ಮಧ್ಯಾಹ್ನ 1-00 ಗಂಟೆಯಿಂದ ಅನ್ನ ಸಂತರೆ​‍್ಣ ಕಾರ್ಯಕ್ರಮ ಪ್ರಾರಂಭವಾಗಿ ಸಂಜೆ 5-00ಗಂಟೆಗೆ ಹನುಮಾನ ದೇವರ ಬೆಳ್ಳಿಯ ಪಲ್ಲಕ್ಕಿ ಮತ್ತು 5 ಅಡಿ ಎತ್ತರ ಬೆಳ್ಳಿಮೂರ್ತಿ ಮೆರವಣಿಗೆ, ಮೆರವಣಿಗೆಯಲ್ಲಿ ಸಾರವಾಡ ಗ್ರಾಮದ ಗೊಂಬೆಗಳ ನೃತ್ಯ ಹಾಗೂ ಮದ್ದು ಸುಡುವುದು. ಡೊಳ್ಳು, ಜಾಂಜ, ಬ್ಯಾಂಜೋ ಮತ್ತಿತರ ವಿವಿಧ ವಾದ್ಯ ವೃಂದಗಳ ಪ್ರದರ್ಶನ, ಮೆರವಣಿಗೆ ಮುಳ್ಳಗಸಿ ಮೂಲಕ ಚಂದಾಬಾವಡಿ, ಗಾಂಧಿಚೌಕ, ಸಿದ್ದೇಶ್ವರ ಗುಡಿ ಮಾರ್ಗ, ಮಹಾವೀರ ರಸ್ತೆ, ಬಾಲಾಜಿ ದೇವಸ್ಥಾನ ದರ್ಶನ, ರಾಮಮಂದಿರ ದರ್ಶನ, ಲದ್ದಿಕಟ್ಟಿ ಹನುಮಾನ ದೇವರ ದರ್ಶನ ಮಾಡಿ, ಪಂಡಿತ ಸರಾಫ ಮನೆಯ ಮುಂದಿನ ರಸ್ತೆ ಮೂಲಕ ಮನಿಯಾರ ಮಸೀದೆ ರಸ್ತೆಯಿಂದ ಚಂದಾಬಾವಡಿ ಮಾರ್ಗ ದೇವಸ್ಥಾನವನ್ನು ಸುಮಾರು 11-00 ಗಂಟೆಗೆ ತಲುಪುತ್ತದೆ. ಆದ ಕಾರಣ ಭಕ್ತರು ಯುವಕ ಮಂಡಳಿಯವರು ಮತ್ತು ಮಹಿಳಾ ಮಂಡಳಿಯವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜಾತ್ರೆಯನ್ನು ಯಶ್ವಸಿಗೊಳಿಸಬೇಕೆಂದು ಪ್ರಕಟಣೆಯಲ್ಲಿ ಕಾರ್ಯದರ್ಶಿ ಸುನೀಲ ಕೆಂಭಾವಿ ತಿಳಿಸಿದ್ದಾರೆ.