ಹುಕ್ಕೇರಿ 01: ತಾಲೂಕಿನ ಹುಲ್ಲೋಳಿ ಗ್ರಾಮದ ಗ್ರಾಮ ಪಂಚಾಯತ ಸಭೆಯಲ್ಲಿ ಸಾರ್ವಜನಿಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಶುಕ್ರವಾರದಂದು ನಡೆಯಿತು.
ಅಕ್ಷರ ದಾಸೋಹಯೋಜನೆಯ ಸಹಾಯಕ ನಿದರ್ೆಶಕ ಹಾಗೂ ಹುಲ್ಲೋಳಿ ಗ್ರಾಮ ಪಂಚಾಯತ ನೋಡಲ್ ಅಧಿಕಾರಿ ಅರಿಹಂತ ಬಿರಾದರ ಪಾಟೀಲ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗ್ರಾಮಸ್ಥರು ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಗ್ರಾಮದಲ್ಲಿ ಕಾಮಗಾರಿ ಹಾಗೂ ಫಲಾನುಭವಿಗಳ ಹೆಸರು ಹುರಿತು ವಿವರ ಕೇಳಿದಾಗ ಪಂಚಾಯತ ಅಭಿವೃದ್ಧಿ ಅಧಿಕಾರಿ ಪ್ರತಿಭಾ ಮುತಾಲಿಕ ದೇಸಾಯಿ ಸಮರ್ಪಕವಾದ ಉತ್ತರ ನೀಡಲು ನಿರಾಕರಿಸಿ ಒಂದು ತಿಂಗಳ ಅವಧಿ ಕೇಳಿದಾಗ ಗ್ರಾಮಸ್ಥರು ಪಿಡಿಓ ವಿರುದ್ಧ ಒಕ್ಕೊರಲಿನಿಂದ ಪ್ರತಿಭಟನೆ ನಡೆಸಿ ಗಲಾಟೆ ಮಾಡಿದರು.
ಪೋಲಿಸರು ಮಧ್ಯ ಪ್ರವೇಶಿಸಿದಾಗ ಮತ್ತೆ ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದರುದಿವರು ನಮ್ಮ ಹಕ್ಕನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ವಸತಿ ಯೋಜನೆಯ ಸ್ಥಳ ಹಾಗೂ ಮನೆಯ ಜೆಪಿಎಸ್ ಮಾಡಲು ಪಂಚಾಯತ ಸಿಪಾಯಿ ರೂ. 200 ಲಂಚ ಕೇಳುತ್ತಿದ್ದಾನೆ ಹೀಗೆ ಹತ್ತು ಹಲವಾರು ಪ್ರಶ್ನೆಗಳಿಗೆ ಅಧಿಕಾರಿಯಿಂದ ಹಾರಿಕೆ ಉತ್ತರ ದೊರೆಯಿತು. ಗ್ರಾಮಸ್ಥರು ನಮ್ಮೆಲ್ಲರ ಸಮಸ್ಯೆಗಳಿಗೆ ಉತ್ತರ ಸಿಗುವ ವರೆಗೆ ಸ್ಥಳ ಬಿಟ್ಟು ಕದಲುವದಿಲ್ಲವೆಂದು ಹಠ ಹಿಡಿದರು. ಈ ಸಂದಂರ್ಭದಲ್ಲಿ ಅಶೋಕ ಚೌಗಲಾ, ಅಪ್ಪಾಸಾಹೇಬ ಚೌಗಲಾ, ವಿದ್ಯಾಧರ ಚೌಗಲಾ, ಜಿನ್ನಪ್ಪ ಬೇಡಕಿಹಾಳ, ಸನ್ಮತಿ ಚೌಗಲಾ ಮಾತನಾಡಿ ಗ್ರಾಮಸ್ಥರ ಸಮಸ್ಯೆಗಳಿಗೆ ಪಿಡಿಓ ರಿಂದ ಯೋಗ್ಯ ಉತ್ತರ ಸಿಗಲಿಲ್ಲವೆಂದು ಪಿಡಿಓ ವಿರುದ್ಧ ಕಿಡಿ ಕಾರಿದರು.
ಅರಿಹಂತ ಬಿರಾದರ ಪಾಟೀಲ ಮಾತನಾಡಿ ಗ್ರಾಮಸ್ಥರ ಸಮಸ್ಯೆಗಳಿಗೆ ಸಮಂಜಸ ಉತ್ತರ ಹಾಗೂ ದಾಖಲಾತಿಗಳನ್ನು ಪಿಡಿಓ ನೀಡುತ್ತಿಲ್ಲ. ಇವರಿಗೆ ಎಂಟು ದಿನ ಅವಧಿ ನೀಡಲಾಗುವದು ಹಾಗೂ ಮುಂಬರುವ ಗ್ರಾಮ ಸಭೆಯನ್ನು ತಾಲೂಕ ಪಂಚಾಯತ ಕಾರ್ಯ ನಿರ್ವಹಣಾಧಿಕಾರಿ ಮಹಾದೇವ ಬಿರಾದರ ಪಾಟೀಲ ಇವರ ಸಮ್ಮುಖದಲ್ಲಿ ಜರುಗಿಸಲಾಗುವದು ಹಾಗೂ ಇಂದು ನಡೆದ ಸಭೆಯಲ್ಲಿ ಜರುಗಿದ ಘಟನೆ ಕುರಿತು ಪಿಡಿಓ ವಿರುದ್ಧ ಮೇಲಾಧಿಕಾರಿಗಳಿಗೆ ಪತ್ರ ಬರೆದು ಸೂಕ್ತ ಕ್ರಮ ಜರುಗಿಸಲು ಸೂಚಿಸಲಾಗುವದೆಂದರು. ಈ ಸಂದಂರ್ಭದಲ್ಲಿ ಹುಲ್ಲೋಲಿ, ಹುಲ್ಲೋಳಿಹಟ್ಟಿ ಗ್ರಾಮಸ್ಥರು, ಗ್ರಾಮ ಪಂಚಾಯತ ಉಪಾಧ್ಯಕ್ಷ ಹಾಗೂ ಸದಸ್ಯರು ಉಪಸ್ಥಿತರಿದ್ದರು.