ಪದವೀಧರ ಶಿಕ್ಷಕರ ಹುದ್ದೆ ನೇಮಕಾತಿಗಾಗಿ ಒತ್ತಾಯ

ಲೋಕದರ್ಶನ ವರದಿ

ಕೊಪ್ಪಳ 06: ಕಳೆದ ಸಾಲಿನಲ್ಲಿ ಹೈದ್ರಾಬಾದ ಕನರ್ಾಟಕ ಪ್ರದೇಶದಲ್ಲಿ ಸುಮಾರು 4000 ಸಾವಿರ ಶಿಕ್ಷಕರ ನೇಮಕಾತಿಗೆ ಅಜರ್ಿ ಕರೆದಿದ್ದ ರಾಜ್ಯ ಸರಕಾರ ಕಠಿಣ ನಿಯಮಗಳನ್ನು ಆಯ್ಕೆ ಪ್ರಕ್ರಿಯೆಯನ್ನು ತರುವ ಮೂಲಕ ಸರಕಾರಿ ಉದ್ಯೋಗದ ಆಕಾಂಕ್ಷಿಗಳ ಆಸೆಗೆ ತಣ್ಣಿರು ಎರುಚ್ಚುತ್ತಿದೆ ಎಂದು ಚಂದ್ರಶೇಖರ ಹೊಸಮನಿ ಸರಕಾರದ ನಡೆಗೆ ತೀವ್ರ ಆತಂಕವನ್ನು ವ್ಯಕ್ತಪಡಿಸಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ಪದವೀಧರ ಶಿಕ್ಷಕರ ನೇಮಕಾತಿ ನಿಯಮಗಳನ್ನು ಸಡಿಲಗೊಳಿಸಲು ಕಾನೂನು ಇಲಾಖೆ, ಅಡ್ವೊಕೇಟ್ ಜನರಲ್ ಹಾಗೂ ಡಿ.ಪಿ.ಎ.ಆರ್ ಒಪಿರುತ್ತವೆ. ಆದರೆ ಎರಡನೇ ಪಟ್ಟಿಯನ್ನು ಬಿಡಲು ರಾಜ್ಯ ಸರಕಾರವು ಮೀನಾಮೇಷ ಮಾಡುತ್ತಿದೆ ಎಂದು ಹೇಳಿದರು. ಕಳೆದ ಜೂನ್ ತಿಂಗಳಿನಲ್ಲಿ ರಾಜ್ಯಪಾಲರು ಆದೇಶವನ್ನು ಹೊರಡಿಸಿದ್ದರು ಕೂಡಾ ಸರಕಾರವು ಆ ಆದೇಶವನ್ನು ಪಾಲನೆ ಮಾಡದೇ ಉದ್ಯೋಕಾಂಕ್ಷಿಗಳ ಜೀವನದ ಜೊತೆಗೆ ಆಟವಾಡುತ್ತಿದೆ, ಅಲ್ಲದೇ ಟಿ.ಇ.ಟಿ ಪರೀಕ್ಷೆಯಲ್ಲಿ ತೇರ್ಗಡೆಯಾದರು ಸಹ ವಯೋಮಿತಿ ಆಧಾರದಲ್ಲಿ ಆಯ್ಕೆಗೆ ವಿಫಲರಾಗುತ್ತಿದ್ದಾರೆ ಎಂದು ಅಳಲು ತೊಡಿಕೊಂಡರು.

ಆದ ಕಾರಣ ರಾಜ್ಯ ಸರಕಾರವು ಈ ಕೂಡಲೇ ಆಯ್ಕೆ ನಿಯಮಗಳನ್ನು ಸಡಿಲಗೊಳಿಸಿ ಉಳಿದ ಖಾಲಿ ಹುದ್ದೆಗಳಿಗೆ ಮೆರಿಟ್ ಆಧಾರದ ಮೇಲೆ ಆಯ್ಕೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು. ಈ ಕಾರಣಕ್ಕಾಗಿ ಡಿ.12 ರಂದು ಬೆಳಗಾವಿಯ ಸುವರ್ಣ ವಿಧಾನಸೌಧ ಎದುರು ಪ್ರತಿಭಟನೆ ನಡೆಸುವ ಮೂಲಕ ಸರಕಾರಕ್ಕೆ ಹಕ್ಕು ಮಂಡಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ  ರಮೇಶ ತುಪ್ಪದ, ಬಾಬುಸಾಬ್, ಬಸವರಾಜ್ ಗಂಗಾವತಿ, ರಾಜೇಂದ್ರ ಪ್ರಸಾದ್, ಶಿವಕುಮಾರ್ ಕೂಕನೂರ ಸೇರಿದಂತೆ ಇತರರು ಉಪಸ್ಥಿತರಿದರು.