ಧಾರವಾಡ, 10: ಸಕರ್ಾರದ ನಿದರ್ೆಶನದಂತೆ 2017-18ನೇ ಸಾಲಿನ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6 ರಿಂದ 8ನೇ ತರಗತಿಗಳಿಗೆ ಬೋಧನೆ ಮಾಡಲು ಜಿಲ್ಲೆಯಲ್ಲಿ ಆಯ್ಕೆಗೊಂಡ 50 ಜನ ಪದವೀಧರ ಸಹಾಯಕ ಶಿಕ್ಷಕರ ಪೈಕಿ 43 ಜನ ಶಿಕ್ಷಕರಿಗೆ ನೇಮಕಾತಿ ಆದೇಶಗಳನ್ನು ನೀಡಲಾಯಿತು.
ನಗರದ ಡಿಡಿಪಿಐ ಕಾಯರ್ಾಲಯದಲ್ಲಿ ಸೋಮವಾರ (ಡಿ.10) ಜರುಗಿದ ಸ್ಥಳ ನಿಯುಕ್ತಿ ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಚೈತ್ರಾ ಶಿರೂರ, ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷ ಕಲ್ಲಪ್ಪ ಪುಡಕಲಕಟ್ಟಿ ಹಾಗೂ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಡಾ.ಬಿ.ಸಿ.ಸತೀಶ, ಡಿಡಿಪಿಐ ಆರ್.ಎಸ್.ಮುಳ್ಳೂರ ಹಾಗೂ ಶಿಕ್ಷಣಾಧಿಕಾರಿ ಮೋಹನಕುಮಾರ ಹಂಚಾಟೆ ಅವರು ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ಸ್ಥಳ ಆಯ್ಕೆ ಮಾಡಿಕೊಂಡ ಸಾಮಾನ್ಯ ಅಭ್ಯಥರ್ಿಗಳಿಗೆ ನೇಮಕಾತಿ ಆದೇಶಗಳನ್ನು ವಿತರಿಸಿದರು.
ಆಂಗ್ಲ ಭಾಷೆಯ 21, ಸಮಾಜ ವಿಜ್ಞಾನದ 19, ಗಣಿತ ಮತ್ತು ವಿಜ್ಞಾನ ವಿಷಯಗಳ ತಲಾ ಒಂದು ಹಾಗೂ ಒಂದು ಸಮಾಜ ವಿಜ್ಞಾನ(ಉದರ್ು) ವಿಷಯ ಶಿಕ್ಷಕರು ಸೇರಿ ಒಟ್ಟು 43 ಜನ ಶಿಕ್ಷಕರು ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ಹಾಜರಾಗಿ ಸ್ಥಳ ಆಯ್ಕೆ ಮಾಡಿಕೊಂಡರು. ಎಲ್ಲರಿಗೂ ಸ್ಥಳದಲ್ಲಿಯೇ ನೇಮಕಾತಿ ಆದೇಶಗಳನ್ನು ನೀಡಲಾಯಿತು.