ಲೋಕದರ್ಶನ ವರದಿ
ಬೈಲಹೊಂಗಲ 01: ದಾನಿಗಳು ವಿದ್ಯಾಥರ್ಿಗಳ ಆರೋಗ್ಯ ಹಿತದೃಷ್ಟಿಯಿಂದ ಎಸ್ಎಸ್ಎಲ್ಸಿ ಮಕ್ಕಳಿಗೆ ಮಾಸ್ಕ್ ವಿತರಿಸಲಾಗುತ್ತಿದ್ದು ಇದನ್ನು ಸದುಪಯೋಗಪಡಿಸಿಕೊಳ್ಳುವುದರ ಜೊತೆಗೆ ಸರಕಾರದ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಬೇಕೆಂದು ಸುಕ್ಷೇತ್ರ ಇಂಚಲದ ಶಿವಯೋಗೀಶ್ವರ ಸಾಧು ಸಂಸ್ಥಾನಮಠದ ಡಾ.ಶಿವಾನಂದ ಭಾರತಿ ಸ್ವಾಮಿಜಿ ಹೇಳಿದರು.
ಅವರು ಇಂಚಲ ಗ್ರಾಮದ ಸುರೇಶ ವಾರಿ ಹಾಗೂ ನಾಗಪ್ಪ ಮೇಟಿ ಇವರುಗಳ ಮಕ್ಕಳಾದ ಕು. ನಾಗಮ್ಮ ಸುರೇಶ ವಾರಿ ಹಾಗೂ ಶಾಂಭವಿ ನಾಗಪ್ಪ ಮೇಟಿ ಇವರುಗಳ ಹುಟ್ಟು ಹಬ್ಬದ ಪ್ರಯುಕ್ತ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುತ್ತಿರುವ 300 ಕ್ಕೂ ಹೆಚ್ಚಿನ ವಿದ್ಯಾಥರ್ಿಗಳಿಗೆ ಮತ್ತು ಪರೀಕ್ಷಾ ಸಿಬ್ಬಂದಿಗಳಿಗೆ ಉಚಿತ ಮಾಸ್ಕ ಹಾಗೂ ಸ್ಯಾನಿಟೈಸರ್ ವಿತರಿಸಿ ಮಾತನಾಡಿ, ವಿದ್ಯಾಥರ್ಿಗಳು ಆತ್ಮಸ್ಥೈರ್ಯ ಕಳೆದುಕೊಳ್ಳದೇ ನಿರ್ಭಯವಾಗಿ ಪರೀಕ್ಷೆ ಬರೆಯಬೇಕೆಂದರು. ಉಚಿತವಾಗಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಿದ ವಾರಿ ಹಾಗೂ ಮೇಟಿ ಕುಟುಂಬ ವರ್ಗದವರನ್ನು ಸ್ವಾಮೀಜಿ ಅಭಿನಂದಿಸಿದರು.
ಸಂಸ್ಥೆಯ ಚೇರಮನ್ ಡಿ.ಬಿ.ಮಲ್ಲೂರ, ಗೌರವ ಕಾರ್ಯದಶರ್ಿ ಎಸ್.ಎನ್.ಕೊಳ್ಳಿ ಆಡಳಿತ ಮಂಡಳಿ ಸದಸ್ಯರು, ವಾರಿ ಹಾಗೂ ಮೇಟಿ ಕುಟುಂಬದ ಸದಸ್ಯರು, ಪರೀಕ್ಷೆ ಕೇಂದ್ರದ ಮುಖ್ಯ ಅಧೀಕ್ಷಕ ಬಸವರಾಜ.ತುಪ್ಪದ, ದೈಹಿಕ ಶಿಕ್ಷಕ ಹಣಮಂತ ಲಮಾಣಿ, ಕಸ್ಟೊಡಿಯನ್ ಸಂದೀಪ ಗಣಾಚಾರಿ, ಮಹಾಂತೇಶ ಮುಂಡರಗಿ, ಪರೀಕ್ಷಾ ಕೇಂದ್ರದ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿ, ಪೋಲಿಸ್ ಇಲಾಖೆ ಸಿಬ್ಬಂದಿ ಇದ್ದರು.