ಬಳ್ಳಾರಿ ಜಿಲ್ಲೆಯಾದ್ಯಂತ ಸರ್ಕಾರಿ ಆಸ್ಪತ್ರೆಗಳು ಸಮಸ್ಯೆಗಳ ಆಗರಗಳಾಗಿವೆ- ಕಮ್ಯುನಿಸ್ಟ್‌ ಪಕ್ಷ

Government hospitals across Bellary district are hotbeds of problems - Communist Party

ಬಳ್ಳಾರಿ ಜಿಲ್ಲೆಯಾದ್ಯಂತ ಸರ್ಕಾರಿ ಆಸ್ಪತ್ರೆಗಳು ಸಮಸ್ಯೆಗಳ ಆಗರಗಳಾಗಿವೆ- ಕಮ್ಯುನಿಸ್ಟ್‌ ಪಕ್ಷ 

ಬಳ್ಳಾರಿ 14: ವೈದ್ಯಕೀಯ ಕಾಲೇಜು ಆಸ್ಪತ್ರೆ (ಓಪಿಡಿ) ಸೇರಿದಂತೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸಿ, ಬಾಣಂತಿ ಹಾಗೂ ನವಜಾತ ಶಿಶುಗಳ ಸಾವುಗಳನ್ನು ತಡೆಗಟ್ಟಿ,’‘ಜನತೆಯ ಆರೋಗ್ಯ ಉಳಿಸಿ ‘ಆರೋಗ್ಯದ ವ್ಯಾಪಾರೀಕರಣ ಹಾಗೂ ಖಾಸಗೀಕರಣ ನಿಲ್ಲಿಸಿ'... ಮುಂತಾದ ಘೋಷಣೆಗಳನ್ನು ಮೊಳಗಿಸುತ್ತಾ ಗಾಂಧಿ ಭವನದಿಂದ ಮೆರವಣಿಗೆ ಹೊರಟ ಬೃಹತ್ ಜನ ಸಮೂಹ ಜಿಲ್ಲಾಧಿಕಾರಿ ಕಚೇರಿ ತಲುಪಿ ಪ್ರತಿಭಟನಾ ಧರಣಿ ನಡೆಸಿತು. ಸಾರ್ವಜನಿಕ ಆರೋಗ್ಯ ಉಳಿಸಲು ಆಗ್ರಹಿಸಿ ಜನತೆಯಿಂದ ಸಂಗ್ರಹಿಸಿದ ಸಾವಿರಾರು ಸಹಿಗಳನ್ನು ಮತ್ತು ಮನವಿ ಪತ್ರವನ್ನುಅಪರ ಜಿಲ್ಲಾಧಿಕಾರಿಗಳಿಗೆ ಕಮ್ಯುನಿಸ್ಟ್‌ ಪಕ್ಷದಿಂದ ಸಲ್ಲಿಸಲಾಯಿತು. 

ಕಮ್ಯುನಿಸ್ಟ್‌ ಪಕ್ಷದ ಜಿಲ್ಲಾ ಕಾರ್ಯದರ್ಶಿಗಳಾದ ಕಾಮ್ರೆಡ್‌ರಾಧಾಕೃಷ್ಣ ಉಪಾಧ್ಯ ಅವರು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತಾ "ಇಂದು ವೈದ್ಯಕೀಯ ವಿಜ್ಞಾನ ಸಾಕಷ್ಟು ಮುಂದುವರೆದಿದೆ. ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳಿಂದ ಜನರ ಅನೇಕ ರೋಗಗಳಿಗೆ ಪರಿಹಾರದೊರೆಯಬಹುದಾಗಿದೆ. ಆದರೆ ನಮ್ಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ದುಃಸ್ಥಿತಿಯಿಂದಾಗಿ ಜನರಿಗೆ ಆರೋಗ್ಯ ಸೌಲಭ್ಯಗಳು ಸಿಗುತ್ತಿಲ್ಲ. ಇಂದಿನ ಆಧುನಿಕಯುಗದಲ್ಲೂ ಬಾಣಂತಿಯರ ಸಾವುಗಳು ಅತ್ಯಂತ ನೋವು ತರುವ ಹೃದಯವಿದ್ರಾವಕ ಘಟನೆಗಳಾಗಿವೆ.  

ಅವಶ್ಯಕತೆ ಇರುವಷ್ಟು ತಜ್ಞ  ಹಾಗೂ ಖಾಯಂ ವೈದ್ಯರ, ಸಿಬ್ಬಂದಿಗಳ ಹಾಗೂ ಆಧುನಿಕ ಯಂತ್ರೋಪಕರಣಗಳ ಕೊರತೆಯಿದೆ. ನಾಚಿಕೆಗೆಡಿನ ವಿಷಯವೆನೆಂದರೆ, ಹಲವಾರು ಆಸ್ಪತ್ರೆಗಳಲ್ಲಿ ಕುಡಿಯುವ ನೀರು, ಶೌಚಾಲಯದಂತ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರಗಳಿಗೆ ಸಾಧ್ಯವಾಗಿಲ್ಲ. ಮತ್ತೊಂದೆಡೆ ಬಳ್ಳಾರಿ ವೈದ್ಯಕೀಯಕಾಲೇಜುಆಸ್ಪತ್ರೆ(ಓಪಿಡಿ)ಯಲ್ಲಿ ಬಳಕೆದಾರರ ಶುಲ್ಕವು ಅತ್ಯಂತದುಬಾರಿಯಾಗಿದೆ. ಬಿಪಿಎಲ್‌ಕಾರ್ಡ್‌ದಾರರಿಗೂ ಶುಲ್ಕಗಳನ್ನು ವಿಧಿಸಲಾಗುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯ ಇಂದಿನ ದಿನಗಳಲ್ಲಿ ಇದುಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಹಣವಿದ್ದರೆಆರೋಗ್ಯಎನ್ನುವಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಡುಜನವಿರೋಧಿ ನೀತಿಗಳ ವಿರುದ್ಧದುಡಿಯುವಜನತೆ ಹೋರಾಟಗಳನ್ನು ಕಟ್ಟಬೇಕು" ಎಂದುಕರೆ ನೀಡಿದರು. 

ಪ್ರತಿಭಟನಾ ಧರಣಿಯ ಅಧ್ಯಕ್ಷತೆಯನ್ನು ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಎ. ದೇವದಾಸ್ ವಹಿಸಿಕೊಂಡಿದ್ದರು. 

ರಾಜ, ಸುರೇಶ, ಜಗದೀಶ್, ರವಿಕಿರಣ್, ವಿದ್ಯಾ, ಈರಣ್ಣ, ಪಂಪಾಪತಿ, ವಿಜಯಲಕ್ಷ್ಮೀ, ಸೌಮ್ಯ.ಜೆ, ಬಸಣ್ಣ, ಖಾಸಿಂ ಸಾಬ್, ಲಿಂಗಪ್ಪ, ವಹೀಧಾ,ಶಾಮ್ ಸುಂದರ್ ಮತ್ತಿತರು ಸೇರಿದಂತೆ ಬಡಾವಣೆಗಳಿಂದ ನಾಗರಿಕರು,ರೈತ-ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿ-ಯುವಜನತೆದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು.