ನವದೆಹಲಿ: ಫಿನ್
ಲ್ಯಾಂಡ್ ನ ಟ್ಯಾಂಪಿಯರ್ ನಲ್ಲಿ ನಡೆದ ವಿಶ್ವ ಅಂಡರ್ -20 ಅಥ್ಲೆಟಿಕ್ಸ್ ಕೂಟದ ಮಹಿಳೆಯರ 400 ಮೀಟರ್
ಓಟದಲ್ಲಿ ಐತಿಹಾಸಿಕ ಚಿನ್ನದ ಪದಕ ಗಳಿಸಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ ಹಿಮಾ ದಾಸ್ ಗೆ
2020 ರ ಟೋಕಿಯೋ ಒಲಂಪಿಕ್ಸ್ ಗೆ ತಯಾರಿ ನಡೆಸಲು ಟಾರ್ಗೆಟ್ ಒಲಂಪಿಕ್ ಪೋಡಿಯಂ ಸ್ಕೀಂ(ಟಿಒಪಿಎಸ್)
ಅಡಿಯಲ್ಲಿ ಸರ್ಕಾರದಿಂದ ನೆರವು ನೀಡಲು ನಿರ್ಧರಿಸಲಾಗಿದೆ.
ಐಎಎಎಫ್ ವರ್ಲ್ಡ್ ಅಂಡರ್ 20 ಅಥ್ಲೆಟಿಕ್ಸ್ ಕೂಟದಲ್ಲಿ ಚಿನ್ನದ ಪದಕ
ಗೆದ್ದ ಪ್ರಥಮ ಭಾರತೀಯ ಮಹಿಳೆ ಎಂಬ ಹೆಗ್ಗಳಿಗೆ ಹಿಮಾ ದಾಸ್ ಪಾತ್ರರಾಗಿದ್ದಾರೆ. 2020 ರ ಟೋಕಿಯೋ
ಒಲಂಪಿಕ್ಸ್ ತಯಾರಿಕೆಗಾಗಿ ಟಿಒಪಿಎಸ್ ಯೋಜನೆಯಡಿಯಲ್ಲಿ ಪ್ರತಿ ತಿಂಗಳು 50,000 ರೂಪಾಯಿಗಳಷ್ಟು
ಔಟ್ ಆಫ್ ಪಾಕೇಟ್ ಭತ್ಯೆಯನ್ನು ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಸ್ಪೋರ್ಟ್ಸ್ ಇಂಡಿಯಾ
ಡಿಜಿ ನೀಲಮ್ ಕಪೂರ್ ಹೇಳಿದ್ದಾರೆ.