ಲೋಕದರ್ಶನ ವರದಿ
ಕೊಪ್ಪಳ 04: ಇತ್ತೀಚಿಗೆ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ಹೊರಬಿದ್ದಿದೆ ಅದರಲ್ಲೂ ಲಕ್ಷಗಟ್ಟಲೆ ಡೊನೆಷನ್ ಪಡೆದು ಖಾಸಗಿ ಶಾಲೆಗಿಂತ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಸರ್ಕಾರಿ ಶಾಲೆಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸಿವೆ ಎಂಬುದೆ ಹೆಮ್ಮೆ. ಕೊಪ್ಪಳ ಜಿಲ್ಲೆಯ ಫಲಿತಾಂಶ ಈ ಬಾರಿ 16ನೇ ಸ್ಥಾನ ಗಿಟ್ಟಿಸಿಕೊಂಡಿದೆ. ಇದಕ್ಕೆ ಮುಖ್ಯ ಕಾರಣ ಸಕರ್ಾರಿ ಶಾಲೆಯ ಶಿಕ್ಷಣ ಕ್ರಾಂತಿ. ಕೊಪ್ಪಳ ಜಿಲ್ಲೆಯ ಹಿರೇಸಿಂದೋಗಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯು ಉತ್ತಮ ಫಲಿತಾಂಶ ಸಾಧಿಸಿದೆ. ನಾಗವೇಣಿ ಶಶಿಮಠ 596 (95.39%) ಅಶ್ವಿನೀ ಬಸನಗೌಡ 589(94.24) ನಿರುಪಾದಿ ಕೆರೆಕೋಡಿ ಮತ್ತು ಸುವರ್ಣ ಬೂದಿಹಾಳ 574 (91.84%) ಮೇಘಾ ಮಾದಿನೂರು 573(91.68%) ಉಮೇಶ ಹವಳಣ್ಣವರ 572(91.52%)ಕಾವ್ಯ ಹೊಸಹಳ್ಳಿ 564(90.24%)
ಈ ರೀತಿಯಾಗಿ ಅತಿಹೆಚ್ಚು ಫಲಿತಾಂಶ ಪಡೆವ ಮೂಲಕ ಕನ್ನಡ ಶಾಲೆಯ ಕೀತರ್ಿ ಬೆಳಗಿದ ವಿದ್ಯಾಥರ್ಿಗಳಿಗೆ ಶಿಕ್ಷಕರಾದ ಶ್ರೀನಿವಾಸ್ ಎಸ್.ಪಿ, ಸೋಮರೆಡ್ಡಿ ಡಂಬ್ರಳ್ಳಿ, ಚಾರು ಹೊನಕಾಲ್ಸೆ, ಪವಿತ್ರಾ, ಮಂಜುಳಾ ಪಾಟೀಲ್, ಹಂಪವ್ವ, ಕಸ್ತೂರಿ ಬಾಯಿ, ರೇಣುಕಾ, ನಾಗರಾಜ ಸುಣಗಾರ ಶಿಕ್ಷಕ ವೃಂದಕ್ಕೂ ಊರಿನ ಹಿರಿಯರು ಹಾಗೂ ಗುರು ವೃಂದವು ಅಭಿನಂದಿಸಿದೆ.