ಮಹಿಳೆಯರಿಗೆ ಸರ್ಕಾರದ ಸ್ವ ಉದ್ಯೋಗ ಯೋಜನೆಗಳನ್ನು ಸಕಾಲದಲ್ಲಿ ತಲುಪಿಸಬೇಕು: ಆರ್.ಕೆ.ಶ್ರೀಕುಮಾರ್
ಕಂಪ್ಲಿ 21: ಮಹಿಳೆಯರಿಗೆ ಸ್ವಾವಲಂಬಿ ಜೀವನಕ್ಕೆ, ಸರ್ಕಾರದ ಸ್ವ ಉದ್ಯೋಗ ಯೋಜನೆಗಳನ್ನು ಸಕಾಲದಲ್ಲಿ ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು ಎಂದು ತಾಲ್ಲೂಕು ಪಂಚಾಯತಿ ಇಒ ಆರ್.ಕೆ.ಶ್ರೀಕುಮಾರ್ ತಿಳಿಸಿದರು. ಅವರು ಪಟ್ಟಣದ ತಾಲ್ಲೂಕು ಪಂಚಾಯತಿ ಆವರಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಎನ್‌ಆರ್‌ಎಲ್‌ಎಂ) ಪ್ರಗತಿ ಪರೀಶೀಲನಾ ಸಭೆಯಲ್ಲಿ ಮಾತನಾಡಿದರು. ಬಡ ಕುಟುಂಬಗಳಿಗೆ ಆಭದಾಯಕ ಸ್ವ-ಉದ್ಯೋಗ, ಕೌಶಲ್ಯಪೂರ್ಣ ಆದಾಯದ ಉದ್ಯೋಗಾವಕಾಶ ಒದಗಿಸಲು ಗ್ರಾಮೀಣ ಪ್ರದೇಶದಲ್ಲಿ 467 ಮಹಿಳಾ ಸ್ವ-ಸಹಾಯ ಸಂಘಗಳ ರಚನೆ ಗುರಿ ಹೊಂದಿದ್ದು, ಈಗಾಗಲೇ 224 ಸಂಘಗಳನ್ನು ರಚಿಸಲಾಗಿದೆ.
ಉಳಿದ ಸಂಘಗಳ ರಚನೆಗೆ ಮುಂದಾಗಬೇಕೆಂದರು. ಮಹಿಳೆಯರಿಗೆ ಬ್ಯಾಂಕ್ ಲಿಂಕ್ಡ್ ಯೋಜನೆ, ಸಾಲ, ತರಬೇತಿ, ವಿವಿಧ ಇಲಾಖೆಗಳ ಒಗ್ಗೂಡುವಿಕೆ ಕಾರ್ಯಕ್ರಮಗಳನ್ನು ತಲುಪಿಸುವಲ್ಲಿ ಶೇ.100 ರಷ್ಟು ಗುರಿ ಸಾಧಿಸಬೇಕು. ನರೇಗಾದಲ್ಲಿ 100 ದಿನ ಕೆಲಸ ಮಾಡಿದ ಕಾರ್ಮಿಕರಿಗೆ ಉನ್ನತಿ ಯೋಜನೆಯಡಿ ಜೀವನೋಪಾಯಕ್ಕೆ ಕೌಶಲ ತರಬೇತಿ, ಬಳ್ಳಾರಿ ಕೆನರಾ ಬ್ಯಾಂಕ್ ಗ್ರಾಮೀಣ ಅಭಿವೃದ್ಧಿ ತರಬೇತಿ ಸಂಸ್ಥೆಯಿಂದ ಮಹಿಳೆಯರ ಆಸಕ್ತಿಗೆ ಅನುಗುಣವಾಗಿ ಸ್ವ-ಉದ್ಯೋಗ ತರಬೇತಿ ಯೋಜನೆಗಳನ್ನು ಅಹ್ರಿಗೆ ತಲುಪಿಸುವಂತೆ ಸೂಚಿಸಿದರು. ಮುಖ್ಯ ಪುಸ್ತಕ ಬರಹಗಾರರು, ಸಂಪನ್ಮೂಲ ವ್ಯಕ್ತಿಗಳು, ಕೃಷಿ ಸಖಿಯರು, ಪಶು ಸಖಿಯರು, ಹಣಕಾಸು ಸಾಕ್ಷರತೆ ವ್ಯಕ್ತಿಗಳು ಸಂವಾದ ನಡೆಸಿದರು. ಎನ್‌ಆರ್‌ಎಲ್‌ಎಂ ತಾಲ್ಲೂಕು ವ್ಯವಸ್ಥಾಪಕಿ ಎನ್.ಪಾರ್ವತಿ, ಎಡಿಪಿಆರ್ ಅಪರಂಜಿ, ಜಿ.ಪಂ.ಡಿಎಂಐಎಸ್ ಮಾರೇಸ್, ನಾರಿ (ಕ್ಲಿಪ್) ಯೋಜನೆಯ ಜಿಲ್ಲಾ ಸಂಯೋಜಕ ಈರಣ್ಣ, ಎಬಿಪಿ ಸಂಯೋಜಕ ಬಸನಗೌಡ, ರಾಜೀವ್ ಗಾಂಧಿ ಫಿಲೋಷಿಪ್ ಯೋಜನಾಧಿಕಾರಿ ಸಲ್ಮಾ, ತಾಲ್ಲೂಕು ಒಕ್ಕೂಟದ ಅಧ್ಯಕ್ಷೆ ರೇಣುಕಮ್ಮ,ಕಾರ್ಯದರ್ಶಿ ಪುಷ್ಪಾವತಿ ಸೇರಿದಂತೆ ಇತರರು ಇದ್ದರು. ಜ.003: ಪಟ್ಟಣದ ತಾಲ್ಲೂಕು ಪಂಚಾಯತಿ ಆವರಣದಲ್ಲಿ ಏರಿ್ಡಸಿದ್ದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್(ಎನ್‌ಆರ್‌ಎಲ್‌ಎಂ) ಪ್ರಗತಿ ಪರೀಶೀಲನಾ ಸಭೆಯಲ್ಲಿ ತಾ.ಪಂ.ಇಒ ಆರ್.ಕೆ.ಶ್ರೀಕುಮಾರ್ ಮಾತನಾಡಿದರು.