ಸಂಬರಗಿ 01: ಅರಳಿಹಟ್ಟಿ ಗ್ರಾಮ ಪಂಚಾಯತ ಉಪಾಧ್ಯಕ್ಷ ಕಾಮಗೌಡ ರುದ್ರಗೌಡ ಪಾಟೀಲ ಅವರ ವಿರುದ್ಧ ಸೋಮವಾರ 31 ಡಿಸೆಂಬರ್ನಿಂದ ಗ್ರಾಮ ಪಂಚಾಯತ ಕಾಯರ್ಾಲಯದಲ್ಲಿ ವಿಶೇಷ ಸಭೆ ನಡೆಸಿ ಅವಿಶ್ವಾಸ ಠರಾವು ಪಾಸ್ ಮಾಡಲಾಯಿತು. ಈ ಸಭೆಯ ಅಧ್ಯಕ್ಷತೆ ಚಿಕ್ಕೋಡಿ ಉಪವಿಭಾಗಾಧಿಕಾರಿ ರವಿಂದ್ರ ಕರನಿಂಗನವರ ವಹಿಸಿದ್ದರು.
ಅರಳಿಹಟ್ಟಿ ಗ್ರಾಮ ಪಂಚಾಯತಿಯಲ್ಲಿ ಒಟ್ಟು 9 ಸದಸ್ಯರ ಸಂಖ್ಯೆ ಇದ್ದು ಅವಿಶ್ವಾಸ ಗೊತ್ತುವಳಿಗೆ 7 ಸದಸ್ಯರು ಹಾಜರಿದ್ದು ಕೈ ಮೇಲೆತ್ತಿ 7 ಸದಸ್ಯರು ಅವಿಶ್ವಾಸ ಮಂಡಿಸಿದರು. ಅದರಲ್ಲಿ ಉಪಾಧ್ಯಕ್ಷ ಕಾಮಗೌಡ ಪಾಟೀಲ ಹಾಗೂ ಸದಸ್ಯರಾದ ಜಹಾಂಗೀರ ಬುವಾ ಅನುಪಸ್ಥಿತರಿದ್ದರು. ಸವರ್ಾನುಮತದಿಂದ ಅವಿಶ್ವಾಸ ಗೊತ್ತುವಳಿಯಾಯಿತು.
ಹಲವಾರು ದಿನದಿಂದ ಉಪಾಧ್ಯಕ್ಷ ಕಾಮಗೌಡ ಪಾಟೀಲ ವಿರುದ್ಧ 8 ಸದಸ್ಯರು ಲಿಖಿತವಾಗಿ ಚಿಕ್ಕೋಡಿ ಉಪವಿಭಾಗ ಅಧಿಕಾರಿ ಇವರಿಗೆ ಅವಿಶ್ವಾಸ ಕುರಿತು ಸಹಿ ಹಾಕಿ ಮನವಿ ಸಲ್ಲಿಸಿದ್ದರು. ಆ ಪ್ರಕಾರ ಸೋಮವಾರ ವಿಶೇಷ ಸಭೆ ನಡೆಸಿ ಅವಿಶ್ವಾಸ ಠರಾವು ಮಾಡಲಾಯಿತು.
ಪಿ.ಡಿ.ಓ ಅಮಜಾದ ಜಮಾದಾರ ಹಾಗೂ ವಿಜಯಲಕ್ಷ್ಮಿ ಹಾಜರಿದ್ದರು. ಅವಿಶ್ವಾಸ ಪ್ರತಿಗಳನ್ನು ತಹಶಿಲ್ದಾರ ಕಾಯರ್ಾಲಯ ಅಥಣ,ಿ ತಾಲೂಕಾ ಪಂಚಾಯತ ಕಾಯರ್ಾಲಯ ಅಥಣಿ ಹಾಗೂ ಪಿ.ಡಿ.ಓ ಗ್ರಾಮ ಪಂಚಾಯತ ಅರಳಿಹಟ್ಟಿ ರವಾನಿಸಲಾಗಿದೆ.