ವಿಜಯನಗರ ಕಾಲೇಜನಲ್ಲಿ ಉತ್ತಮ ಫಲಿತಾಂಶ

Good results at Vijayanagara College

ವಿಜಯನಗರ ಕಾಲೇಜನಲ್ಲಿ ಉತ್ತಮ ಫಲಿತಾಂಶ

ಕೊಪ್ಪಳ 16: ತಾಲ್ಲೂಕಿನ ಮುನಿರಾಬಾದ್ ಗ್ರಾಮದಲ್ಲಿ ಇರುವ ವಿಜಯನಗರ ಸಂಯುಕ್ತ ಪದವಿ ಪೂರ್ವ ಕಾಲೇಜು 2024-25 ನೇ ಸಾಲಿನ ದ್ವಿತೀಯ ಪಿ.ಯು.ಸಿ ಫಲಿತಾಂಶ ಪ್ರಕಟವಾಗಿದ್ದು, ಉತ್ತಮ ಫಲಿತಾಂಶ ಬಂದಿದೆ, ಎಂದು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಶರಣ ಬಸವನಗೌಡ ಪಾಟೀಲ್ ತಿಳಿಸಿದ್ದಾರೆ, ಕಲಾ ವಿಭಾಗದಲ್ಲಿ ಶೇಕಡಾ 37.14ಅ ವಾಣಿಜ್ಯ ವಿಭಾಗದಲ್ಲಿ 66.66ಅ ಫಲಿತಾಂಶ ಬಂದಿದೆ. ಕಲಾ ವಿಭಾಗದಲ್ಲಿ ಅಭಿಷೇಕ 600 ಕ್ಕೆ 447 ಅಂಕಗಳನ್ನು ಪಡೆದು ಶೇಕಡ 74.50ಅ ವಾಣಿಜ್ಯ ವಿಭಾಗದಲ್ಲಿ ಅರ್ಷಿಯಾ 600 ಕ್ಕೆ 556 ಅಂಕಗಳನ್ನು ಪಡೆದು ಶೇ 92.66ಅ ಫಲಿತಾಂಶ ಪಡೆದ್ದಿದ್ದಾರೆ, ಉನ್ನತ ಶ್ರೇಣಿ ಯಲ್ಲಿ- 4 ವಿದ್ಯಾರ್ಥಿಗಳು ಪ್ರಥಮ ದರ್ಜೆ -18 ದ್ವಿತೀಯ ದರ್ಜೆ -11 ಮೂರನೇ ದರ್ಜೆ-6  ಒಟ್ಟಾರೆ ಕಾಲೇಜಿನ ಫಲಿತಾಂಶ ಶೇಕಡ 53.ಅ ಬಂದಿದೆ ಎಂದರು.ಅಭಿಷೇಕ್ ಕಾಲೇಜಿನ ತರಗತಿ ಮುಗಿಸಿಕೊಂಡು ಮನೆಗೆ ಹೋಗಿದ ಮೇಲೆ ತೋಟದಲ್ಲಿ ಹೂ ಬಿಡಿಸುವ ಮೂಲಕ ಬಡತನದ ಮಧ್ಯೆ ಉತ್ತಮ ಸಾಧನೆ ಮಾಡಿದ್ದಾರೆ, ಜೊತೆಗೆ ಅರ್ಷಿಯಾ ತಂದೆ ಲಾರಿ ಡೈವರ್ ಮನೆಯಲ್ಲಿ ತುಂಬಾ ಬಡತನ ಇದ್ದು, ಏನಾದರೂ ಸಾಧನೆ ಮಾಡಬೇಕು ಎಂಬ ಆಸೆಯಿಂದ ದಿನ ನಿತ್ಯ 5 ಗಂಟೆಗಳ ಕಾಲ ಅಭ್ಯಾಸ ಮಾಡುತ್ತಿದ್ದೇನೆ,ಎಂದರು.ಕಾಲೇಜಿನ ಪ್ರಾಚಾರ್ಯರಾದ ಬಸವರಾಜ, ಉಪನ್ಯಾಸಕ ರಾದ ಚನ್ನಬಸಪ್ಪ, ತಿರುಪತಿ ನಾಯಕ,ಹಿರಿಯ ಉಪನ್ಯಾಸಕ ರಾದ ಅಂಬಳಿ ವೀರೇಂದ್ರ, ಭಾರತಿ ಬಂಡಿ, ಮಂಜು, ಉಪಸ್ಥಿತರಿದ್ದರು. ಈ ಎಲ್ಲಾ ವಿದ್ಯಾರ್ಥಿಗಳ ಸಾಧನೆ ಗೆ ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಸಹ ಕಾರ್ಯದರ್ಶಿ, ಕೋಶಾಧಿಕಾರಿ ಪದಾಧಿಕಾರಿಗಳು, ಹಾಗೂ ಸದಸ್ಯರು, ಮತ್ತು ಕಾಲೇಜಿನ ಅಡಳಿತ ಮಂಡಳಿಯ ಅಧ್ಯಕ್ಷರಾದ ಶರಣಬಸವನಗೌಡ ಪಾಟೀಲ್, ಅಭಿನಂದನೆಗಳು ನ್ನು ಸಲ್ಲಿಸಿದ್ದಾರೆ.