ವಿಜಯಪುರ 24: ಇಡೀ ಜಿಲ್ಲೆಯಲ್ಲಿ ವಿದ್ಯಾಕ್ಷೇತ್ರವನ್ನು ಶ್ರೀಮಂತಗೊಳಿಸಿದ ಸಿಕ್ಯಾಬ ಶಿಕ್ಷಣ ಸಂಸ್ಥೆ ಸಹಸ್ರಾರು ವಿದ್ಯಾದಾಹಿಗಳಿಗೆ ಅನ್ನವ ನೀಡಿ ಬಾಳು ಬೆಳಗಿದೆ. ಬಡವರ ಬಾಳಿಗೂ ವಿದ್ಯೆ ಬೆಳಕು ಚೆಲ್ಲಿದ ಕೀತರ್ಿ ಸಂಸ್ಥಾಪಕ ಪುಣೇಕರ ಅವರಿಗೆ ಸಲ್ಲುತ್ತದೆ ಎಂದು ಜ್ಞಾನಯೋಶ್ರಮದ ಸಿದ್ದೇಶ್ವರ ಸ್ವಾಮಿಜಿ ನುಡಿದರು.
ನಗರದ ಸಿಕ್ಯಾಬ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಳ್ಳಲಾದ ಸಿಕ್ಯಾಬ ಶಿಕ್ಷಣ ಸಂಸ್ಥೆಯ ಸುವರ್ಣ ಮಹೋತ್ಸವ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಜಿಲ್ಲೆಯಲ್ಲಿ ಸುಮಾರು 50 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸಮಾಜ ಸೇವೆ ಸಲ್ಲಿಸುತ್ತಿರುವುದುಎ ಹೆಮ್ಮೆಯ ವಿಷಯವಾಗಿದೆ. ಶಿಕ್ಷಣ ಸಂಸ್ಥೆಯೆಂಬುದು ಮಾವಿನ ಮರದಂತೆ ಒಂದು ಸಲ ಮಣ್ಣಲ್ಲಿ ಹಾಕಿ ನೀರು ಬಿಟ್ಟರೆ ಸಾಕು ಸಹಸ್ರಾರು ರುಚಿಯಾದ ಹಣ್ಣುಗಳು ನೀಡುವಂತೆ ಸಹಸ್ರಾರು ವಿದ್ಯಾಥರ್ಿಗಳ ಬಾಳು ಬೆಳಗಲು ಇಂತಹ ವಿದ್ಯಾಸಂಸ್ಥೆ ಶ್ರಮಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಜೀವನದಲ್ಲಿ ಮೂರು ರತ್ನಗಳು ಪ್ರಮುಖವಾಗಿವೆ. ಅನ್ನ ನೀರು,ಮತ್ತು ಜ್ಞಾನ ಇವುಗಳನ್ನು ದಾನ ಮಾಡುವುದು ಅತ್ಯಂತ ಶ್ರೇಷ್ಠವಾಗಿದೆ. ಜೀವನದಲ್ಲಿ ಧರ್ಮ ಮುಖ್ಯವಲ್ಲ. ಪ್ರತಿಯೊಬ್ಬರು ಸೇವಿಸುವುದು ಒಂದೇ ನೀರು, ಒಂದೇ ಗಾಳಿ, ಒಂದೇ ಊಟ ಜಗತ್ತು ಒಂದೇ ಎಂಬ ಭಾವನೆ ನಮ್ಮಲ್ಲಿ ಬರಬೇಕು ಆಗ ಮಾತ್ರ ಶಿಕ್ಷಣದ ಗುರಿ ತಲುಪಲು ಸಾಧ್ಯವಾಗಲಿದೆ. ವಿಶ್ವಮಾನವರಾಗುವ ಗುಣ ಬೆಳೆಸಿಕೊಳ್ಳಬೇಕು. ನಾವೆಲ್ಲ ಸುಮದರ ಹೂಗಳಾಗಬೇಕು. ಮನಸ್ಸು ವಿಸ್ತಾರವಾಗಬೇಕು ಆಗಮಾತ್ರ ವಿಶ್ವಮಾನವನಾಗಲು ಸಾಧ್ಯವಾಗಲಿದೆ. ಸಿಕ್ಯಾಬ ಶಿಕ್ಷಣ ಸಂಸ್ಥೆ 25 ಶಾಖೆಯಿರುವ ಸಂಸ್ಥೆ ಭವಿಷ್ಯದಲ್ಲಿ 250 ವಿಭಾಗಗಳಾಗಲಿ ಹೆಮ್ಮರವಾಗಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಮಾಜಮುಖಿ ಚಿಂತಕರನ್ನು ಹೊರಹೊಮ್ಮಿಸಲಿ ಎಂದು ಶುಭ ಹರಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥಾಪಕ ಅಧ್ಯಕ್ಷ ಎಸ್ ಎ ಪುಣೇಕರ ಮಾತನಾಡಿ, ಸಮಾಜದಲ್ಲಿನ ಬಡ ಮತ್ತು ಮದ್ಯಮ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಜಾತ್ಯಾತೀತವಾಗಿ ಸಂಸ್ಥೆಯನ್ನು ಬೆಳೆಸಲಾಗಿದೆ.ಒಂದು ಸಾವಿರಕ್ಕೂ ಹೆಚ್ಚು ಜನ ಸಿಬ್ಬಂಧಿ, 20 ಸಾವಿರಕ್ಕೂ ಹೆಚ್ಚು ವಿದ್ಯಾಥರ್ಿಗಳು ವಿದ್ಯಾರ್ಜನೆ ಮಾಡುತ್ತಿರುವುದು ಹೆಮ್ಮೆಯೆನಿಸುತ್ತಿದೆ. ಶಿಕ್ಷಣ ಸಂಸ್ಥೆ ಕಟ್ಟುವುದು ಸುಲಭದ ಮಾತಲ್ಲ ಪ್ರತಿಯಬ್ಬರು ಸಹಕಾರ ನೀಡಿದ್ದರಿಮದ ಹೆಮ್ಮರವಾಗಲು ಸಾಧ್ಯವಾಗಿದೆ. ಇದೇ ರೀತಿ ಸರ್ವಜನಾಂಗದ ಸಹಕಾರ ನಮ್ಮ ಸಂಸ್ಥೆಯ ಮೇಲಿರಲಿ ಎಂದು ಕೋರಿದರು.
ಸಂಸ್ಥೆಯ ಕಾರ್ಯದಶರ್ಿ ಎ ಎಸ್ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, 1969ರಲ್ಲಿ ಸ್ಥಾಪನೆಯಾದ ಸಂಸ್ಥೆ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಸಂತಸವೆನಿಸುತ್ತದೆ. 2019ನೇ ಸಾಲಿನ ಇಡೀ ವರ್ಷ ಸುವರ್ಣಮಹೋತ್ಸವದ ನಿಮಿತ್ಯ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳುವುದರ ಜೊತೆಗೆ ಸಂಸ್ಥೆ ನಡೆದು ಬಂದ ದಾರಿ ಕುರಿತು ವಿವರಿಸಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮಹಾಲಕ್ಷ್ಮಿ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಅರವಿಂದ ಡಾಣಕಶಿರೂರ, ಸಹಕಾರಿ ಸಂಘಗಳ ಇಲಾಖೆಯ ನಿವೃತ್ತ ಅಧಿಕಾರಿ ಎಸ್ ಎಸ್ ಬೀಳಗಿಪೀರ, ಬೌದ್ಧ ಧರ್ಮದ ಅನುಯಾಯಿ ಪೀರಪ್ಪ ನಡುವನಿಮನಿ, ಜಿಲ್ಲಾ ವಿಕಾಸ ವೇದಿಕೆ ಅಧ್ಯಕ್ಷ ಪೀಟರ್ ಅಲೆಕ್ಷಾಂಡರ್, ಜೈನ್ ಸ್ವೇತಾಂಬರ ದೇವಸ್ಥಾನದ ಅಧ್ಯಕ್ಷ ನಿಹಾಲಚಂದ ಪೋರವಾಲ ಸಂಸ್ಥೆಯ ಕುರಿತು ಮಾತನಾಡಿದರು. ವೇದಿಕೆ ಮೇಲೆ ಜಿಯಾಅಬೇದೀನ ಪುಣೇಕರ, ಎ ಎಂ ಬಗಲಿ, ಯಾಸೀನಬಿ ಜಹಾಗೀರದಾರ ಸೇರಿದಂತೆ ಮತ್ತೀತರರು ಇದ್ದರು. ಸಂಸ್ಥೆಯ ನಿದರ್ೇಶಕರಾದ ಸಲಾವುದ್ದೀನ ಪುಣೇಕರ ಸ್ವಾಗಿತಿಸಿದರು. ರಿಯಾಜ ಫಾರೂಕಿ ವಂದಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಪದಾಧಿಕಾರಿಗಳು, ಸಿಬ್ಬಂದಿ, ವಿದ್ಯಾಥರ್ಿಗಳು ಸಾರ್ವಜನಿಕರು ಪಾಲ್ಗೊಂಡಿದ್ದರು.
***