ಹಬಪ ಕೃಷ್ಣಾ ಮಹಾರಾಜರ ಸುವರ್ಣ ಸ್ಮರಣೋತ್ಸವ; ಧರ್ಮದ ಜ್ಯೋತಿ ನಿರಂತರವಾಗಿ ಬೆಳಗಲು, ಧಾರ್ಮಿಕ ಕಾರ್ಯಕ್ರಮಗಳು ಅವಶ್ಯಕ

Golden Commemoration of Habapa Krishna Maharaja; To keep the flame of religion burning continuously

ಹಬಪ ಕೃಷ್ಣಾ ಮಹಾರಾಜರ ಸುವರ್ಣ ಸ್ಮರಣೋತ್ಸವ; ಧರ್ಮದ ಜ್ಯೋತಿ ನಿರಂತರವಾಗಿ ಬೆಳಗಲು, ಧಾರ್ಮಿಕ ಕಾರ್ಯಕ್ರಮಗಳು ಅವಶ್ಯಕ

ಕಾಗವಾಡ 16 : ನಿರಂತರವಾಗಿ ಬೆಳಗುವ ಜ್ಯೋತಿಗೆ ಮಧ್ಯೆ-ಮಧ್ಯೆ ಕಾಡಿಗೆ ಆವರಿಸಿದಾಗ ಅದನ್ನು ಸ್ವಚ್ಛಗೊಳಿಸುವಂತೆ, ಧಾರ್ಮಿಕ ಕಾರ್ಯಕ್ರಮಗಳ ಮುಖಾಂತರ ಅನಾದಿ ಕಾಲದಿಂದಲೂ ಬೆಳಗುತ್ತಿರುವ ಧರ್ಮದ ಜ್ಯೋತಿಗೆ ಕಾಡಿಗೆ ಹಿಡಿಯದಂತೆ ನೋಡಿಕೊಳ್ಳುತ್ತ, ಅಧ್ಯಾತ್ಮದ ಜ್ಯೋತಿಯನ್ನು ಇನಷ್ಟು ಪ್ರಕಾಶಮಾನವಾಗಿಸುವ ಕೆಲಸಗಳು ನಡೆಯಬೇಕೆಂದು ವಿಜಯಪೂರ ಜ್ಞಾನಯೋಗಾಶ್ರಮದ ಪ.ಪೂ. ಬಸವಲಿಂಗ ಶ್ರೀಗಳು ಅಭಿಪ್ರಾಯ ಪಟ್ಟಿದ್ದಾರೆ.  ಸೋಮವಾರ ಡಿ.16 ರಂದು ತಾಲೂಕಿನ ಕುಸನಾಳ-ಮೊಳವಾಡ ಗ್ರಾಮದ ಸೀಮೆಯಲ್ಲಿರುವ ಉತ್ತರವಾಹಿಣಿ ಪುಣ್ಯಕ್ಷೇತ್ರ ವಿಠ್ಠಲ ರುಕ್ಮೀಣಿ ಮಂದಿರದಲ್ಲಿ ಹಬಪ ಕೃಷ್ಣಾ ಮಹಾರಾಜ (ಇಂಗಳಿಕರ) ಇವರ ಪುಣ್ಯಸ್ಮರಣೆಯ ಸುವರ್ಣ ಮಹೋತ್ಸವ, ಭವ್ಯ ಜ್ಞಾನೇಶ್ವರ ಪಾರಾಯಣ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ, ಮಾತನಾಡುತ್ತಿದ್ದರು. ಹಬಪ ಕೃಷ್ಣಾ ಮಹಾರಾಜರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಇಷ್ಟೊಂದು ಭಕ್ತರು ಪಾಲ್ಗೊಂಡಿರುವುದನ್ನು ಕಂಡರೇ ಸಾಕ್ಷಾತ ಪಂಡರಪೂರಕ್ಕೆ ಹೋದ ಅನುಭವವಾಗುತ್ತಿದೆ ಎಂದರು. ಕವಲಗುಡ್ಡ-ಹಣಮಾಪೂರ ಸಿದ್ಧಾಶ್ರಮದ ಪ.ಪೂ. ಸಿದ್ಧಯೋಗಿ ಅಮರೇಶ್ವರ ಶ್ರೀಗಳು ಮಾತನಾಡಿ, ಇಂದಿನ ಮಕ್ಕಳು ಬುದ್ಧಿವಂತರಾಗುವುದಕ್ಕಿಂತ ಹೃದಯವಂತರಾಗುವುದು ಬಹಳ ಮುಖ್ಯವಾಗಿದ್ದು, ಇಂತಹ ಆದ್ಯಾತ್ಮದ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ಕರೆದುಕೊಂಡು ಬನ್ನಿ. ಆಗ ವೃದ್ಧಾಶ್ರಮಗಳ ಸಂಖ್ಯೆ ಕಡಿಮೆಯಾಗಲಿವೆ ಎಂದು ಪಾಲಕರಿಗೆ ಕಿವಿಮಾತು ಹೇಳಿದರು.  ಕಾರ್ಯಕ್ರಮದಲ್ಲಿ ನಂದಿಕುರಳಿಯ ವೀರಭದ್ರೇಶ್ವರ ಶ್ರೀಗಳು, ಬಾವನಸೌಂದತ್ತಿಯ ಶಿವಶಂಕರ ಶ್ರೀಗಳು, ಮಾಂಜರಿಯ ಹಬಪ ಬಾಬಾಸಾಹೇಬ ಬಿಸಲೆ ಮಹಾರಾಜರು, ಜ್ಞಾನೇಶ್ವರ ಮಹಾರಾಜರು ಆಶೀರ್ವಚನ ನೀಡಿದರು.  ಕಾರ್ಯಕ್ರಮವನ್ನು ಧರ್ಮಧ್ವಜಾರೋಹಣದೊಂದಿಗೆ, ದೀಪ ಬೆಳಗಿಸಿ, ಉದ್ಘಾಟಿಸಲಾಯಿತು. ಇದೇ ವೇಳೆ ಪಂಡರಪೂರದ ಹಬಪ ನಾವದೇವ ವಾಸಕರ ಮಹಾರಾಜರು, ಸುಮಾರು 5001 ಭಕ್ತರಿಗೆ ಗ್ರಂಥರಾಜ  ಜ್ಞಾನೇಶ್ವರ ಪಾರಾಯಣ ಪಠಣ ಮಾಡಿಸಿದರು.   ಕಾರ್ಯಕ್ರಮದಲ್ಲಿ ಅಲಬಾಳದ ಶರಣಶ್ರೀ ಅಮಸಿದ್ಧ ಒಡೆಯರು, ಮಾಜಿ ಶಾಸಕ ಮೋಹನ ಶಹಾ, ಉಗಾರ ಸಕ್ಕರೆ ಕಾರ್ಖಾನೆಯ ಎಂಡಿ ಚಂದನ ಶಿರಗಾಂವಕರ, ಕೆ.ಎಸ್‌. ಚೌಗುಲೆ, ವೈ.ಎಸ್‌. ಕೊಟ್ನಿಸ್, ಬಾಬುರಾವ ಮೆಂಡಿಗೇರಿ, ಎಸ್‌.ಬಿ. ಸೂರ್ಯವಂಶಿ, ವಿಕ್ರಾಂತ ಗುಂಡೇವಾಡಿ, ಶಿವಾನಂದ ಪಾಟೀಲ ಸೇರಿದಂತೆ ಅನೇಕ ಶ್ರೀಗಳು, ಮುಖಂಡರು, ಕೃಷ್ಣಾ ಮಹಾರಾಜ ಸೇವಾ ಸಮಿತಿಯ ಪದಾಧಿಕಾರಿಗಳು, ಇಂಗಳಿ, ಮೊಳವಾಡ-ಕುಸನಾಳ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು, ಉಪಸ್ಥಿತರಿದ್ದರು. ಸುಭಾಷ ಶೇವಾಳೆ ಮಹಾರಾಜರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಪದ್ಮರಾಜ ಅಳಪ್ಪನವರ ಪ್ರಾರ್ಥನೆ ಗೀತೆ ಹಾಡಿದರು. ರಾಹುಲ ಕೊಕಣೆ ಮತ್ತು ಮನೋಜ ನಾಂದಣಿ ನಿರೂಪಿಸಿದರು. ಮಾರುತಿ ಜಾಧವ ವಂದಿಸಿದರು.