ಹಬಪ ಕೃಷ್ಣಾ ಮಹಾರಾಜರ ಸುವರ್ಣ ಸ್ಮರಣೋತ್ಸವ :ಸಾಧಕರಿಗೆ ಸನ್ಮಾನ

Golden Commemoration of Habapa Krishna Maharaja: Tribute to achievers

ಹಬಪ ಕೃಷ್ಣಾ ಮಹಾರಾಜರ ಸುವರ್ಣ ಸ್ಮರಣೋತ್ಸವ :ಸಾಧಕರಿಗೆ ಸನ್ಮಾನ 

ಕಾಗವಾಡ 17: ಹೂಮಾಲೆಯಲ್ಲಿಯ ದಾರ ದೇವರಿಗೆ ಅರೆ​‍್ಣಗೊಂಡು, ಪಾವನಗೊಳ್ಳುವಂತೆ ಸಂತರ ಸಹವಾಸದಲ್ಲಿ ಎಂತಹ ಕೆಟ್ಟ ವ್ಯಕ್ತಿಗಳು ಸಹ ಪಾವನಗೊಳ್ಳುತ್ತಾರೆ. ಕೃಷ್ಣಾ ಮಹಾರಾಜರನ್ನು ನಾವು ಕಂಡಲ್ಲ. ಆದರೇ ಅವರ ಸ್ಮರಣೆಯಲ್ಲಿ ಇಷ್ಟೊಂದು ಭಕ್ತರು ಸೇರಿರುವುದನ್ನು ಕಂಡರೇ ಅವರ ಮಹಾನತೆ ನಮಗೆ ಅರ್ಥವಾಗುತ್ತದೆ ಎಂದು ಜೋಡಕುರಳಿಯ ಸಿದ್ಧಾರೂಢ ಮಠದ ಪ.ಪೂ. ಚಿದ್ಘನಾನಂದ ಭಾರತಿ ಶ್ರೀಗಳು ಹೇಳಿದ್ದಾರೆ. ಅವರು, ಮಂಗಳವಾರ ಡಿ.17 ರಂದು ತಾಲೂಕಿನ ಕುಸನಾಳ-ಮೊಳವಾಡ ಗ್ರಾಮದ ಶ್ರೀ ವಿಠ್ಠಲ ರುಕ್ಮೀಣಿ ಮಂದಿರದಲ್ಲಿ ಹಬಪ ಕೃಷ್ಣಾ ಮಹಾರಾಜ (ಇಂಗಳಿಕರ) ಇವರ ಪುಣ್ಯಸ್ಮರಣೆಯ ಸುವರ್ಣ ಮಹೋತ್ಸವ, ಭವ್ಯ ಜ್ಞಾನೇಶ್ವರ ಪಾರಾಯಣ ಕಾರ್ಯಕ್ರಮದ 2 ನೇ ದಿನದ ಕಾರ್ಯಕ್ರಮದ  ಸಾನಿಧ್ಯ ವಹಿಸಿ, ಮಾತನಾಡುತ್ತಿದ್ದರು. ಸಂತರು, ಶರಣರು ಈ ದೇಶವನ್ನು ಪಾವನಗೊಳಿಸಿದ್ದಾರೆ. ಅಂತಹ ಸರ್ವ ಶ್ರೇಷ್ಟ ಸಂತರ ಸಾಲಿಗೆ ಕೃಷ್ಣಾ ಮಹಾರಾಜರು ಸೇರಿದ್ದಾರೆ. ಇಲ್ಲಿ ಸತ್ಸಂಗ ಮಾಡಿ, ಈ ಭೂಮಿಯನ್ನು ಅವರು ಪಾವನಗೊಳಿಸಿದ್ದಾರೆ ಎಂದರು. ರಾಯರ ಹೆಬ್ಬಳ್ಳಿಯ ಶಿವಾನಂದ ಮಠದ ಪ.ಪೂ. ಯೋಗಾನಂದ ಮಾತನಾಡಿ, ಬೆಳಿಗ್ಗೆಯಿಂದ ಇಲ್ಲಿ ನಡೆಯುತ್ತಿರುವ ಜ್ಞಾನೇಶ್ವರ ಪಾರಾಣಯ ಪಠಣದಿಂದ ಈ ವಾತಾವರಣ ವಿಠ್ಠಲ ಮಯವಾಗಿದೆ ಎಂದರು. ಕವಲಗುಡ್ಡ-ಹಣಮಾಪೂರ ಸಿದ್ಧಾಶ್ರಮದ ಪ.ಪೂ. ಸಿದ್ಧಯೋಗಿ ಅಮರೇಶ್ವರ ಶ್ರೀಗಳು, ಪ.ಪೂ. ಶ್ರೀಮಠ ಸ್ವಪಡ್ಲ ಮತ್ತು ಕೆಕೆ ಕೊಪ್ಪದ ಪ.ಪೂ. ಚಿದಾನಂದ ಶ್ರೀಗಳು, ಹನಗಂಡಿಯ ಸಿದ್ದೇಶ್ವರ ಶ್ರೀಗಳು, ಅಥಣಿಯ ಡಾ. ಕಾಡಸಿದ್ದೇಶ್ವರ ಶ್ರೀಗಳು, ಮೋಳೆಯ ಪ.ಪೂ. ಚಳೇಕರ ಮಹಾರಾಜರು ಸಾನಿಧ್ಯ ವಹಿಸಿದ್ದರು.  ಸುಭಾಷ ಶೇವಾಳೆ ಮಹಾರಾಜರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ, ಗೌರವಿಸಲಾಯಿತು.   ಈ ಸಮಯದಲ್ಲಿ ತಮ್ಮಣ್ಣಾ ಪಾರಶೆಟ್ಟಿ, ಹೀರಾಚಂದ ಚೌಗುಲೆ, ನಿವೃತ್ತಿ ಭಗತ, ಟಿ.ವೈ. ಕಿವಡ, ಶ್ರೀಶೈಲ ದರೂರ, ಮಾರುತಿ ತಿಗಡಿ, ರವೀಂದ್ರ ಕೋಟ್ನಿಸ್, ದತ್ತಾ ಸಣ್ಣಕ್ಕಿ ಸೇರಿದಂತೆ ಅನೇಕ ಮುಖಂಡರು, ಕೃಷ್ಣಾ ಮಹಾರಾಜ ಸೇವಾ ಸಮಿತಿಯ ಪದಾಧಿಕಾರಿಗಳು, ಕುಸನಾಳ-ಮೊಳವಾಡ ಗ್ರಾ.ಪಂ. ಅಧ್ಯಕ್ಷರು-ಉಪಾಧ್ಯಕ್ಷರು, ಸರ್ವ ಸದಸ್ಯರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು, ಉಪಸ್ಥಿತರಿದ್ದರು.