ಬ್ಯಾಡಗಿ28: ತೆಲಂಗಾಣ ರಾಜ್ಯದ ಮೆಹಬೂಬ ನಗರದಲ್ಲಿ ಡಿ.21 ರಿಂದ 26 ರವರೆಗೆ ನಡೆದ ರಾಷ್ಟ್ರ ಮಟ್ಟದ ಟೆನ್ನಿಸ್ ವ್ಹಾಲಿಬಾಲ್ ಕ್ರೀಡೆಯಲ್ಲಿ ಬಳ್ಳಾರಿ ರುದ್ರಪ್ಪ ಪದವಿ ಪೂರ್ವ ಕಾಲೇಜಿನ ಕ್ರೀಡಾಪಟು ಪೂಣರ್ಿಮಾ ಅಗಿಮನಿ ಚಿನ್ನದ ಪದಕ ಗಿಟ್ಟಿಸಿಕೊಂಡಿದ್ದಾಳೆ.
ಇತ್ತೀಚೆಗೆ ಜರುಗಿದ ರಾಜ್ಯ ಮಟ್ಟದ ಸ್ಪಧರ್ೆಗಳಲ್ಲಿ ಉತ್ತಮ ಪ್ರದೇಶನ ತೋರುವ ಮೂಲಕ ವಿಜೇತಳಾಗಿದ್ದ ಪೂಣರ್ಿಮಾ ರಾಷ್ಟ್ರಮಟ್ಟದಲ್ಲಿಯೂ ಉತ್ತಮ ಪ್ರದರ್ಶನ ತೋರುವ ಮೂಲಕ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಬಾಚಿಕೊಂಡಿದ್ದಾಳೆ. ಸದ್ಯ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಅಭ್ಯಸಿಸುತ್ತಿದ್ದು, ಕ್ರೀಡಾಪಟುವಿನ ಸಾಧನೆಗೆ ಆಡಳಿತ ಮಂಡಳಿ ಸಂಸ್ಥಾಪಕ ಅಧ್ಯಕ್ಷ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಸೇರಿದಂತೆ, ಆಡಳಿತಾಧಿಕಾರಿಗಳು ಪ್ರಾಚಾರ್ಯರು ಮತ್ತು ಕಾಲೇಜು ಸಿಬ್ಬಂದಿ ಅಭಿನಂದನೆ ಸಲ್ಲಿಸಿದೆ.