ರಾಜ್ಯ ಮಟ್ಟದ ಕರಾಟೆಯಲ್ಲಿ ಚಿನ್ನದ ಪದಕ
ಮುದ್ದೇಬಿಹಾಳ 10 : ತಾಲೂಕಿನ ಕಂದಗನೂರ ಎಂಬ ಹಳ್ಳಿಯ ಬಾಲಕ ಇಂದು ಬೆಂಗಳೂರಿನ ಚಿನ್ನ ಸ್ವಾಮಿ ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ತೈಕೊಂಡ ಕರಾಟೆ ಸ್ಪರ್ಧೆಯಲ್ಲಿ ಆದರ್ಶ ಮಹೇಶ ಚಲವಾದಿ ಅವರು ಪ್ರಥಮ ಸ್ಥಾನ ಪಡೆದು ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾನೆ. ವಿಜಯಪುರ ಜಿಲ್ಲೆಗೆ ಚಿನ್ನದ ಪದಕವನ್ನು ತಂದಿದ್ದಾನೆ.