ಲೋಕದರ್ಶನ ವರದಿ
ಗೋಕಾಕ 25: ಕಳೆದ ಹಲವಾರು ವರ್ಷಗಳಿಂದ ರಾಜ್ಯದಲ್ಲಿರುವ ಕೊರಮರು, ಕೊರಚರು ಮೂಲಭೂತ ಸೌಲಭ್ಯಗಳಿಂದ ಸಾಮಾಜಿಕ ಹಾಗೂ ಆಥರ್ಿಕವಾಗಿ ವಂಚಿತರಾಗಿದ್ದು ಸರಕಾರಗಳು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದರೂ ಸಹ ಗ್ರಾಮೀಣ ಪ್ರದೇಶದ ಬಡವರಿಗೆ ಸೌಲಭ್ಯಗಳನ್ನು ಒದಗಿಸಿ ಕೊಡುವಲ್ಲಿ ನಮ್ಮ ಜನಾಂಗದ ಸಂಘಟನೆಗಳು ಮುಂದೆ ಬರಬೇಕು ಎಂದು ಅವಕಾಶ ಹಾಗೂ ಸೌಲಭ್ಯ ವಂಚಿತ ಗೋಕಾಕ ತಾಲೂಕಾ ಕೊರಮ ಕೊರಚರ ಸಂಘದ ಮುಖಂಡ ಅಶೋಕ ಭಜಂತ್ರಿ (ಅಂಕಲಗಿ) ಹೇಳಿದರು.
ಅವರು ಮಂಗಳವಾರದಂದು ನಗರದ ಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಅವಕಾಶ ಹಾಗೂ ಸೌಲಭ್ಯ ವಂಚಿತ ಗೋಕಾಕ ತಾಲೂಕಾ ಕೊರಮ ಕೊರಚರ ಸಂಘದ ಸಂಘಟನೆಯನ್ನು ಬಲ ಪಡಿಸುವ ಕುರಿತು ಕರೆದ ಸಭೆಯಲ್ಲಿ ಮಾತನಾಡಿ ರಾಜ್ಯದಲ್ಲಿ ನೆಲೆಸಿದ ಹಲವಾರು ಬಡ ಕೊರಮ ಕೊರಚರಿಗೆ ಮೂಲಭೂತ ಸೌಲಭ್ಯಗಳು ಮರಿಚಿಕೆಯಾಗಿವೆ ಸರಕಾರದ ಸವಲತ್ತುಗಳನ್ನು ಪಡೆಯಲು ನಾವು ಬೀದಿಗಿಳಿಯುವ ಪರಿಸ್ಥಿತಿ ಬಂದಿದೆ ಅದಕ್ಕೆ ನಾವೆಲ್ಲ ಎಚ್ಚತ್ತುಕೊಳ್ಳಬೇಕು ಅಂತಾ ಹೇಳಿದರು.
ಸಂಘಟನೆಯ ಇನ್ನೋರ್ವ ಮುಖಂಡ ಮಡ್ಡೆಪ್ಪ ಭಜಂತ್ರಿ ಮಾತನಾಡಿ ಸರಕಾರವು ಕೊರಮ ಕೊರಚ ಜನಾಂಗದ ಆಥರ್ಿಕತೆ ಮತ್ತು ಪರಿಸ್ಥಿಯನ್ನು ಮನಗಂಡು ಅಲೆಮಾರಿ ಅರೆ ಅಲೆಮಾರಿ ಪಟ್ಟಿಗೆ ಸೇರಿಸಿ ಸಾಕಷ್ಟು ಅನುದಾನವನ್ನು ಮಂಜೂರು ಮಾಡಿದೆ ಇವುಗಳ ಸದುಪಯೋಗವನ್ನು ಬಡ ಜನರು ಪಡೆದುಕೊಳ್ಳಲು ನಮ್ಮ ಸಂಘಟನೆಯು ಸಹಕರಿಸುವುದಲ್ಲದೇ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರ ಮಾರ್ಗದರ್ಶನದಲ್ಲಿ ನಮ್ಮ ಜನಾಂಗಕ್ಕೆ ಬೇಕಾದ ಸೌಲಭ್ಯವನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗುವುದೆಂದು ಹೇಳಿದರು.
ಈ ಸಂದರ್ಭದಲ್ಲಿ ಅಲೆಮಾರಿ ಅರೆ ಅಲೆಮಾರಿ ಸಂಘದ ಜಿಲ್ಲಾ ಉಪಾಧ್ಯಕ್ಷ ರವಿ ಭಜಂತ್ರಿ, ಮುಖಂಡರಾದ ಬಸವರಾಜ ಭಜಂತ್ರಿ, ರಮೇಶ ಭಜಂತ್ರಿ, ಮಾರುತಿ ಭಜಂತ್ರಿ, ಯಂಕಪ್ಪ ಭಜಂತ್ರಿ, ಸುಭಾಸ ಭಜಂತ್ರಿ, ಶಂಕರ ಭಜಂತ್ರಿ, ಭೀಮಶಿ ಭಜಂತ್ರಿ, ಶಿವಲಿಂಗಪ್ಪ ಭಜಂತ್ರಿ, ಅಪ್ಪಾಸಾಬ ಭಜಂತ್ರಿ, ನಾರಾಯಣ ಭಜಂತ್ರಿ, ಹಣಮಂತ ಭಜಂತ್ರಿ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ಅನೇಕ ಮುಖಂಡರು ಯುವಕರು ಉಪಸ್ಥಿತರಿದ್ದು ಸಂಘಟನೆಯ ಬಲ ಪಡಿಸಲು ಸಲಹೆ ಸೂಚನೆಗಳನ್ನು ನೀಡಿದರು.