ಗೊಡಚಿ ವೀರಭದ್ರೇಶ್ವರ ಜಾತ್ರೆ: ವಸ್ತು ಪ್ರದರ್ಶನ ಉದ್ಘಾಟನೆ

ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಶಾಸಕ ಮಹಾದೇವಪ್ಪ ಯಾದವಾಡ ಉದ್ಘಾಟಿಸಿದರು.

ರಾಮದುರ್ಗ 22: ಲಕ್ಷಾಂತರ ಭಕ್ತಾಧಿಗಳ ಆರಾಧ್ಯ ದೈವವಾದ ಗೊಡಚಿ ವೀರಭದ್ರೇಶ್ವರ ಜಾತ್ರೆಗೆ ಆಗಮಿಸುವ ರೈತರಿಗೆ ಸಮಗ್ರ ಬೇಸಾಯ ಪದ್ಧತಿ, ಸರಕಾರದಿಂದ ದೊರೆಯುವ ಸೌಲಭ್ಯಗಳ ಮಾಹಿತಿ ಒಳಗೊಂಡ ಸಮರ್ಪಕ ವಸ್ತು ಪ್ರದರ್ಶನಕ್ಕೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕೆಂದು ಶಾಸಕ ಮಹಾದೇವಪ್ಪ ಯಾದವಾಡ ಸೂಚನೆ ನೀಡಿದರು.

ತಾಲೂಕಿನ ಜಾಗೃತ ಸುಕ್ಷೇತ್ರ ಗೊಡಚಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಸ್ಥಳೀಯ ಗ್ರಾಮ ಪಂಚಾಯತಿಯವರು ತಾಲೂಕಾ ಮಟ್ಟದ ಅಧಿಕಾರಿಗಳ ಸಹಯೋಗದೊಂದಿಗೆ ಏರ್ಪಡಿಸಿದ ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಕಾಲಕ್ಕೆ ಮಳೆಯಾದಲ್ಲಿ ಮಾತ್ರ ಜಾತ್ರೆ, ಹಬ್ಬ ಹರಿದಿನಗಳನ್ನು ನಾಡಿನ ಜನತೆ ವಿಜ್ರಂಭನೆಯಿಂದ ಆಚರಿಸಲು ಸಾಧ್ಯವಾಗುತ್ತದೆ. ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ತಾಲೂಕಿನ ಕೆರೆಗಳನ್ನು ತುಂಬಿಸುವ ಯೋಜನೆಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದಿದ್ದು, ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಸ್ಥಳೀಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದ ರಾಜಯೋಗಿನಿ ವೈಶಾಲಿ ಮಾತನಾಡಿ, ಆತ್ಮದ ಉನ್ನತಿಗಾಗಿ ನಾವೆಲ್ಲ. ಭಗವಂತನ ಸ್ಮರಣೆ ಮಾಡುವುದು ಅವಶ್ಯಕವಿದೆ. ಆ ನಿಟ್ಟಿನಲ್ಲಿ ಭಗವಂತನ ಸ್ಮರಣೆ ಮಾಡಿದಾಗ ಶಾಂತಿಯುತ ಬದುಕು ಸಾಧ್ಯವಿದೆ ಎಂದು ತಿಳಿಸಿದರು.

ಸಂಸದ ಸುರೇಶ ಅಂಗಡಿ ಜಾತ್ರಾ ಮಹೋತ್ಸವದ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಜಿ.ಪಂ ಸದಸ್ಯರಾದ ಜಹೂರ ಹಾಜಿ, ರಮೇಶ ದೇಶಪಾಂಡೆ ಮಾತನಾಡಿದರು. 

ಮಳಿಗೆಗಳು ನಿಮರ್ಾಣವಾಗದ್ದಕ್ಕೆ ಶ್ರೀಗಳ ವಿಷಾದಃ

ನಾನು ಚಿಕ್ಕವನಿದ್ದಾಗಿನಿಂದ ಹಿಡಿದು ಸುಮಾರು 40 ವರ್ಷಗಳಿಂದ ಜಾತ್ರಾ ಮಹೋತ್ಸವದ ವಸ್ತು ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಆದರೆ ಯಾವ ಜನಪ್ರತಿನಿಧಿಗಳು ಶಿಸ್ತುಬದ್ಧ ವಸ್ತು ಪ್ರದರ್ಶನಕ್ಕೆ ಮಳಿಗೆಗಳ ನಿಮರ್ಾಣಕ್ಕೆ ಕ್ರಮ ತೆಗೆದುಕೊಂಡಿಲ್ಲ ಎಂದು ಕಿಲ್ಲಾತೊರಗಲ್ ಗಚ್ಚಿನ ಹಿರೇಮಠದ ಚನ್ನಮಲ್ಲ ಶಿವಾಚಾರ್ಯ ಸ್ವಾಮಿಜಿ ವಿಷಾದ ವ್ಯಕ್ತಪಡಿಸಿದರು. ಇನ್ನಾದರೂ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಶಾಸಕರು, ಸಂಸದರು ಮುತವಜರ್ಿ ವಹಿಸಿ ಮುಂಬರುವ ಜಾತ್ರೆಯೊಳಗಾಗಿ ವಸ್ತು ಪ್ರದರ್ಶನದ ಮಳಿಗೆಗಳ ನಿಮರ್ಾಣಕ್ಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ರುದ್ರಮುನಿ ಶಿವಾಚಾರ್ಯ ಸ್ವಾಮಿಜಿ ಆಶೀರ್ವಚನ ನೀಡಿದರು. ಗ್ರಾಮದ ಹಿರಿಯ ಮುಖಂಡ ಪತ್ರೆಪ್ಪ ಮಲ್ಲಾಪೂರ ಗ್ರಾಮದ ವಿವಿಧ ಬೇಡಿಕೆಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ವೀರಭದ್ರೇಶ್ವರ ಟ್ರಸ್ಟ್ ಕಮಿಟಿಯ ಧಮರ್ಾಧಿಕಾರಿ ಶ್ರೀಮಂತ ಸಂಗ್ರಾಮಸಿಂಹ ಶಿಂಧೆ, ತಾ.ಪಂ ಅಧ್ಯಕ್ಷೆ ಶಕುಂತಲಾ ವಡ್ಡರ, ಜಿ.ಪಂ ಸದಸ್ಯರಾದ ರೇಣಪ್ಪ ಸೋಮಗೊಂಡ, ಕೃಷ್ಣಾ ಲಮಾಣಿ, ಮಾರುತಿ ತುಪ್ಪದ, ಶಿವಕ್ಕ ಬೆಳವಡಿ, ತಾ.ಪಂ ಸದಸ್ಯೆ ಗಂಗವ್ವ ಕನಕನ್ನವರ, ಧನಲಕ್ಷ್ಮೀ ಸಕ್ಕರೆ ಕಾಖರ್ಾನೆಯ ಉಪಾಧ್ಯಕ್ಷ ಜಿ.ಜಿ. ಪಾಟೀಲ, ಗ್ರಾ.ಪಂ ಅಧ್ಯಕ್ಷೆ ಕಾಶವ್ವ ಗದ್ದನಕೇರಿಮಠ, ಉಪಾಧ್ಯಕ್ಷ ಈರಣ್ಣ ಕಾಮನ್ನವರ, ತಹಶೀಲ್ದಾರ ಆರ್.ವ್ಹಿ. ಕಟ್ಟಿ, ಸಿಪಿಐ ಶ್ರೀನಿವಾಸ್ ಹಾಂಡ, ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾ.ಪಂ ಸದಸ್ಯರು, ಗ್ರಾಮದ ಮುಖಂಡರು ಸೇರಿದಂತೆ ಇತರರಿದ್ದರು. ಶಿಕ್ಷಕ ಎಸ್.ಎಂ. ಕಲ್ಲೂರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.