ಗ್ಲೋಬಲ್ ಪಬ್ಲಿಕ್ ಶಾಲೆಯ ಪ್ರತಿಭಾ ಪುರಸ್ಕಾರ ಹಾಗು ಸಾಂಸ್ಕೃತಿಕ ಸಮಾರಂಭ
ಬೀಳಗಿ 28: ಶಿಕ್ಷಕರು ಮಕ್ಕಳಿಗೆ ಸಂಸ್ಕಾರ ಮತ್ತು ಶಿಸ್ತು ಕಲಿಸಿದಾಗ ಮಕ್ಕಳ ಬಾಲ್ಯ ಅರಳುತ್ತದೆ. ಮಕ್ಕಳನ್ನು ಮುದ್ದು ಮಾಡಿ ಬೆಳೆಸಿದರೆ ಸಾಲದು, ತಮ್ಮ ಒತ್ತಡದಲ್ಲಿಯೂ ಮಕ್ಕಳೊಂದಿಗೆ ಭಾವನಾತ್ಮಕ ಸಂಬಂಧ ಹಾಳಾಗದಂತೆ ಎಚ್ಚರವಹಿಸಿಕೊಳ್ಳಬೇಕು ಎಂದು ಬೀಳಗಿ ಹುಚ್ಚಪ್ಪಯ್ಯನ ಮಠದ ಫಕೀರಯ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಮನ್ನಿಕೇರಿ ಗ್ಲೋಬಲ್ ಗೈಡ್ ಪಬ್ಲಿಕ್ ಶಾಲೆಯಲ್ಲಿ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಸಾಂಸ್ಕೃತಿಕ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.
ಪಾಲಕರು ಮಕ್ಕಳನ್ನು ಟಿವಿ ಹಾಗೂ ಮೊಬೈಲ್ ನಿಂದ ದೂರವಿರಿಸಬೇಕು. ಎರಡು ಮಾಧ್ಯಮಗಳು ಮಕ್ಕಳ ಮನಸ್ಸಿನ ಮೇಲೆ ಬಹಳ ಪ್ರಭಾವ ಬೀರುತ್ತಿವೆ. ಹಾಳು ಮಾಡುವ ಮಾಧ್ಯಮಗಳಿಂದ ಮಕ್ಕಳನ್ನು ರಕ್ಷಣೆ ಮಾಡಬೇಕು ಎಂದು ಸಲಹೆ ನೀಡಿದರು.
ವರದಿಗಾರ ಕೆ.ಎಸ್.ಸೋಮನಕಟ್ಟಿ ಮಾತನಾಡಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶಿಕ್ಷಕರು, ಪಾಲಕರು ಹಾಗೂ ವಾತಾವರಣ ಪೂರಕವಾಗಿರಬೇಕು. ಉತ್ತಮ ಶಿಕ್ಷಣ ಪಡೆಯಲು ಭದ್ರ ಬುನಾದಿ, ಿದ್ಪಿಹಿ್ಣ್ಖ್ತಿ ಮೇಲುಸ್ತುವಾರಿ ಹಾಗೂ ಶಿಕ್ಷಕರ ಬೋಧನೆ ಅತ್ಯಗತ್ಯ ಎಂದರು.
ಸಂಸ್ಥೆಯ ಅಧ್ಯಕ್ಷ ಸುರೇಶ ಮನಗೂಳಿ ಮಾತನಾಡಿ ಶಾಲೆಯ ಅಭಿವೃದ್ಧಿಗೆ, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪಾಲಕರು ಕೈಜೋಡಿಸಿದಾಗ ಮಗು ಸರ್ವಾಂಗೀಣ ಅಭಿವೃದ್ಧಿ ಹೊಂದಲು ಸಾಧ್ಯ ಭವಿಷ್ಯದಲ್ಲಿ ಇನ್ನಷ್ಟು ರಚನಾತ್ಮಕ ಯೋಜನೆಗಳ ಮುಖಾಂತರ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದು ತಿಳಿಸಿದರು. ಮುಖ್ಯೋಪಾಧ್ಯಾಯನಿ ವೀಣಾ ಮನಗೂಳಿ ವರದಿ ವಾಚನ ಮಾಡಿದರು.
ಬೀಳಗಿ ಜ್ಯೋತಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಶಿವಪ್ಪ ಅವಟಿ ಉದ್ಘಾಟಿಸಿದರು. ಮುಖ್ಯಅತಿಥಿಗಳಾಗಿ ತಾಲ್ಲೂಕು ಪಂಚಾಯತ ಮಾಜಿ ಅಧ್ಯಕ್ಷೆ ನೂರಜಹಾನ ನದಾಫ, ಚಿಕ್ಕ ಮಕ್ಕಳ ತಜ್ಞ ಪ್ರಶಾಂತ ತೆಗ್ಗಿ, ಅನಗವಾಡಿ ವಾರಿ ಮಲ್ಲಿಕಾರ್ಜುನ ಬ್ಯಾಂಕಿನ ನಿರ್ದೇಶಕ ಗುರುನಾಥ ಹಿರೇಮಠ,ಮನ್ನಿಕೇರಿ ಸಿಆರ್ಿ ಅಯ್ಯನಗೌಡ ಪಾಟೀಲ.
ಅತಿಥಿಗಳಾಗಿ ಕೊರ್ತಿ ಗ್ರಾಮ ಪಂಚಾಯತ ಸದಸ್ಯೆ ಲಕ್ಷ್ಮೀಬಾಯಿ ರೇಷ್ಮಿ, ಹೊನ್ನಿಹಾಳ ಗ್ರಾಮ ಪಂಚಾಯತ ಸದಸ್ಯೆ ಬೋರವ್ವ ಬನ್ನಪ್ಪನವರ, ವರದಿಗಾರ ಬಸವರಾಜ ಭಾವಿ, ಪಿಕೆಪಿಎಸ್ ತೋಳಮಟ್ಟಿ ಮಾಜಿ ಅಧ್ಯಕ್ಷ ರಮೇಶ ಚವಡಿ, ಮಹದೇವಪ್ಪ ಹತ್ತರ ಕಾಳ, ಪಾಲಕ ಪ್ರತಿನಿಧಿ ಮಂಜುನಾಥ ಕರಗೊಂಡ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.