ಸಂಬಂಧಿಸಿದ ಸಂತ್ರಸ್ತ ಕುಟುಂಬದ ಮಾಹಿತಿ ಶೀಘ್ರ ನೀಡಿ: ಹಿರೇಮನಿ

ಕೊಪ್ಪಳ 08: ಮ್ಯಾನುವೇಲ್ ಸ್ಕ್ಯಾವೆಂಜಿಂಗ್ ಪದ್ಧತಿಯಲ್ಲಿ ಒಳಪಟ್ಟಿರುವ ಸಂತ್ರಸ್ತ ಸಫಾಯಿ ಕರ್ಮಚಾರಿಗಳಿಗೆ ಕೇಂದ್ರ ಸಕರ್ಾರವು ರೂ. 40 ಸಾವಿರ ಪರಿಹಾರ ಧನವನ್ನು ಒದಗಿಸುತ್ತಿದ್ದು, ಅಂತಹ ಸಂತ್ರಸ್ತ ಕುಟುಂಬದ ಮಾಹಿತಿಯನ್ನು ಶೀಘ್ರ ನೀಡುವಂತೆ ದೆಹಲಿಯ ರಾಷ್ಟೀಯ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯರಾದ ಜಗದೀಶ ಹಿರೇಮನಿ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನಿಡಿದರು.  

ಸಫಾಯಿ ಕರ್ಮಚಾರಿಗಳ ಕಾರ್ಯಕ್ರಮ ಅನುಷ್ಠಾನ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿ ಸಂಭಾಂಗಣದಲ್ಲಿ ಶನಿವಾರದಂದು ಆಯೋಜಿಸಲಾದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  

ನಗರಸಭೆ, ಪುರಸಭೆ, ಪಟ್ಟಣ ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಸಕರ್ಾರಿ ಕಛೇರಿಗಳಲ್ಲಿ ಶೌಚಾಲಯಗಳನ್ನು ಶುಚಿಗೋಳಿಸುತ್ತಿರುವವರು ಸಫಾಯಿ ಕರ್ಮಚಾರಿಗಳು.  ಕೇಂದ್ರ ಸಕರ್ಾರವು ನ್ಯಾಯಾಲಯದ ನಿದರ್ೇಶನದಂತೆ ಎಲ್ಲಾ ಕಾಮರ್ಿಕರಿಗೆ ಮತ್ತು ಸಫಾಯಿ ಕರ್ಮಚಾರಿಗಳಿಗೆ 2013ರ ಕಾಯ್ದೆ ಪ್ರಕಾರ ಕನಿಷ್ಠ ವೇತನವನ್ನು ಜಾರಿಗೊಳಿಸಲಾಗಿದ್ದು, ಕಡ್ಡಾಯವಾಗಿ ಅವರಿಗೆ ಕನಿಷ್ಠ ವೇತನವನ್ನು ನೀಡಬೇಕು.  ಪಿ.ಎಫ್ ಇ.ಎಸ್.ಐ ಕಡಿತಗೊಳ್ಳುತ್ತಿರುವ ಖಾತ್ರಿ ಕುರಿತು ಅದರ ನಂಬರ್ ಮತ್ತು ಅಗತ್ಯ ದಾಖಲೆಗಳನ್ನು ಅವರಿಗೆ ನೀಡಬೇಕು.  ಕಾಮರ್ಿಕಾಧಿಕಾರಿಗಳು ಪೌರಕಾಮರ್ಿಕರ ಸ್ಥಳಗಳಿಗೆ ಭೇಟಿ ನೀಡಿ, ಅವರಿಗೆ 2013ರ ಕಾಯ್ದೆ ಪ್ರಕಾರ ವೇತನ ನೀಡಲಾಗುತ್ತಿದೆ ಇಲ್ಲ ಎಂಬುದರ ಕುರಿತು ಪರಿಶೀಲಿಸಿ ಜಿಲ್ಲಾಧಿಕಾರಿಗೆ ವರದಿಯನ್ನು ಸಲ್ಲಿಸಬೇಕು.  ಸಫಾಯಿ ಕರ್ಮಚಾರಿಗಳಿ ಸಂಬಂದಪಟ್ಟ ಅಧಿಕಾರಿಗಳು ಕಡ್ಡಾಯವಾಗಿ ಆರೋಗ್ಯ ತಪಾಸಣೆ ನಡೆಸಬೇಕು.  ಇದರ ಜೊತೆ ಉಪಹಾರ, ವಾಷರ್ಿಕ ಎರಡು ಜೊತೆ ಬಟ್ಟೆ, ಹ್ಯಂಡ್ ಗ್ಲವಜ್, ಶೂ ಗಳನ್ನು ಅವರ ಆರೋಗ್ಯದ ಹಿತದೃಷ್ಟಿಯಿಂದ ಇತ್ಯಾದಿ ವ್ಯವಸ್ಥೆಗಳನ್ನು ಕಲ್ಪಿಸಬೇಕು.  ಸಫಾಯಿ ಕಾರ್ಮಚಾರಿಗಳ ಆರೋಗ್ಯದ ಬಗ್ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು.  ರಾಷ್ಟ್ರೀಯ ಹಾಗೂ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗಗಳು ಸಫಾಯಿಕರ್ಮಚಾರಿಗಳಿಗಾಗಿ ನಿಯಮಿತ ಅವಧಿಯೊಳಗೆ ವೇತನ, ಆರೋಗ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಇನ್ಸುರೆನ್ಸ್ ಮಾಡಿಸುವುದು, ಸ್ವಂತ ಮನೆ, ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಸ್ವಯಂ ಉದ್ಯೋಗಕ್ಕೆ ಸಾಲ ಸೌಲಭ್ಯವನ್ನು ಒದಗಿಸುವ ಉದ್ದೇಶವನ್ನು ಹೊಂದಿದ್ದು, ಈ ಉದ್ದೇಶಗಳನ್ನು ಸಫಾಯಿ ಕರ್ಮಚಾರಿಗಳಿಗೆ ತಲುಪಿಸಲು ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು.  ಶಿಕ್ಷಣಕ್ಕಾಗಿ ಆಯ್ದಿರಿಸಿದ ಅನುಧಾನದಲ್ಲಿ ಪೌರಕಾಮರ್ಿಕರ ಮಕ್ಕಳಿಗೆ ವಿದ್ಯಾಥರ್ಿವೇತನ, ಲ್ಯಾಪ್ಟ್ಯಾಬಗಳನ್ನು ನೀಡಬೇಕು.  ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ರೂ. ಒಂದು ಲಕ್ಷದಿಂದ 25 ಲಕ್ಷದವರೆಗೆ ಸಾಲ ಸೌಲಭ್ಯವನ್ನು ಒದಗಿಸಲಾಗಿದೆ.  ಇದಲ್ಲದೇ ಅನೇಕ ಸೌಲಭ್ಯಗಳನ್ನು ಆಯೋಗವು ಒದಗಿಸುತ್ತಿದ್ದು, ಇದರ ಬಗ್ಗೆ ಮಾಹಿತಿ ಕೊರತೆ ಇದೆ.  ಈ ನಿಟ್ಟಿನಲ್ಲಿ ಜಿಲ್ಲಾ ಕೇಂದ್ರದಲ್ಲಿ ಪೌರಕಾಮರ್ಿಕರ ಮತ್ತು ಅವರ ಕುಟುಂಬದ ಎಲ್ಲ ಸದಸ್ಯರಿಗಾಗಿ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಬೇಕು. 

ಸಭೆಯಲ್ಲಿ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೇಣುಕಾ ಸುಕುಮಾರ, ಜಿಲ್ಲಾ ನಗರಾಭಿವೃದ್ಧಿ ಇಲಾಖೆ ಯೋಜನಾ ನಿದರ್ೇಶಕ ವಿಜಯಕುಮಾರ ಮೆಕ್ಕಳಗಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದಶರ್ಿ ಎನ್.ಕೆ. ತೊರವಿ, ಯೋಜನಾ ನಿದರ್ೇಶಕ ರವಿ ಬಸರಿಹಳ್ಳಿ, ತಹಶೀಲ್ದಾರ ಜೆ.ಬಿ. ಮಜ್ಗಿ, ಸಮಾಜ ಕಲ್ಯಾಣ ಇಲಾಖೆ ಉಪನಿದೇರ್ಶಕ ಬಿ. ಕಲ್ಲೇಶ, ಸಫಾಯಿ ಕರ್ಮಚಾರಿಗಳ ಸಮಿತಿ ಸದಸ್ಯರಾದ ಲಕ್ಷ್ಮಣ ಬಾರಿಗಿಡದ, ಮರಿಯಮ್ಮ ಚಲವಾದಿ ಹಾಗೂ ದುರಗಪ್ಪ ಸೇರಿದಂತೆ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.