ಗ್ರಾಮೀಣ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ: ಸಚಿವ ಸತೀಶ ಜಾರಕಿಹೊಳಿ
ಬೆಳಗಾವಿ 19 : ಯಳ್ಳೂರಿನ ‘ಜಾಯ್ ಸ್ಟ್ರೀಟ್’ ಗ್ರಾಮೀಣ ಕ್ರೀಡೆಗಳ ಕ್ರೀಡಾಕೂಟ ಉದ್ಘಾಟಿಸಿದ ಸಚಿವರು , ಅರವಿಂದ ಟಕ್ಕೇನ್ನವರ ಕಾರ್ಯ ಶ್ಲಾಘನೀಯ ಎಂದ ಸಚಿವರುಬೆಳಗಾವಿ: ದೇಶಿ ಕ್ರೀಡೆಗಳು ಅವನತಿಯತ್ತ ಸಾಗುತ್ತಿವೆ. ಗ್ರಾಮೀಣ ಕ್ರೀಡೆ ನಮ್ಮ ಜೀವಾಳವಾಗಿದೆ. ಹೀಗಾಗಿ ಗ್ರಾಮೀಣ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಸಚಿವ ಸತೀಶ ಜಾರಕಿಹೊಳಿ ಅವರು ಹೇಳಿದರು.ತಾಲೂಕಿನ ಶಿವಸ್ಮಾರಕ ಯಳ್ಳೂರಿನಲ್ಲಿ ಭಾನುವಾರ ಶ್ರೀರಾಮ್ (ಕನ್ಸ್ಟ್ರಕ್ಷನ್) ಬಿಲ್ಡರ್ಸ್ , ಡೆವಲಪರ್ಸ್ ಮತ್ತು ಇಂಜಿನಿಯರ್ಸ್ ವತಿಯಿಂದ ಆಯೋಜಿಸಲಾದ ‘ಜಾಯ್ ಸ್ಟ್ರೀಟ್’ ಗ್ರಾಮೀಣ ಕ್ರೀಡೆಗಳ ಉಚಿತ ಕ್ರೀಡಾಕೂಟವನ್ನು ಉದ್ಘಾಟಿಸಿ ಸಚಿವರು ಮಾತನಾಡಿದರು.ಕ್ರೀಡೆಗಳ ಸೊಗಸು ಇರುವುದೇ ಗ್ರಾಮೀಣ ಕ್ರೀಡೆಗಳಲ್ಲಿ. ಗ್ರಾಮೀಣ ಭಾಗದಲ್ಲಿಯೇ ಹೆಚ್ಚು ಕ್ರೀಡಾಪಟುಗಳು ಇದ್ದಾರೆ. ಆದರೆ ನಿರ್ಲಕ್ಷ್ಯಕ್ಕೆ ಒಳಗಾಗಿ ಪ್ರತಿಭೆಗಳು ಇದ್ದು ಇಲ್ಲದಂತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ಗ್ರಾಮೀಣ ಪ್ರದೇಶದ ಜನಪದ ದೇಸಿ ಆಟಗಳಿಗೆ ಯುವಕರು ಮಹತ್ವ ನೀಡಬೇಕು ಎಂದು ಹೇಳಿದರು.ನಮ್ಮನ್ನು ಯುವಕರನ್ನಾಗಿಸುವ, ಮಾನಸಿಕ ಆರೋಗ್ಯ ಹಾಗೂ ಚೈತನ್ಯಶೀಲರಾಗಿಸುವ ಶಕ್ತಿ ಗ್ರಾಮೀಣ ಕ್ರೀಡೆಯಲ್ಲಿದೆ. ಕ್ರೀಡೆಯೊಳಗೆ ಜನಪದ ಸಂಸ್ಕೃತಿಯಿದೆ. ಜನಪದ ಸಂಸ್ಕೃತಿ ಉಳಿಸಲು ಇಂತಹ ಕ್ರೀಡೆಗಳ ಕಡೆ ಗಮನ ಹರಿಸಬೇಕು ಎಂದು ತಿಳಿಸಿದರು.ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಉಪಯುಕ್ತವಾಗಿರುವ ದೇಶಿ ಕ್ರೀಡೆಗಳ ಬಗ್ಗೆ ಜಾಗೃತಿ ಮೂಡಿಸಿ, ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುತ್ತಿರುವ ಅರವಿಂದ ಟಕ್ಕೇಕರ್ ಕಾರ್ಯ ಶ್ಲಾಘನೀಯವಾಗಿದೆ. ಉಚಿತ ಕ್ರೀಡಾಕೂಡ ಆಯೋಜಿಸಿ ಮಕ್ಕಳಿಗೆ ಅವಕಾಶ ಕಲ್ಪಿಸಿರುವುದು ಸಂಸತ ವಾಗಿದೆ. ಮುಂದಿನ ದಿನಗಳಲ್ಲಿ ಹತ್ತಾರು ಸಂಘ-ಸಂಸ್ಥೆಗಳು ಇವರೊಂದಿಗೆ ಕೈ ಜೋಡಿಸಿ ಗ್ರಾಮೀಣ ಪ್ರತಿಭೆಗಳನ್ನು ಬೆಳೆಸುವ ಪ್ರಯತ್ನ ಮಾಡಬೇಕು. ಈ ಕ್ರೀಡೆಯನ್ನು ನಿರಂತರವಾಗಿ ಸಾಗಲಿ, ಇದಕ್ಕೆ ಬೇಕಾದ ಸಹಕಾರ-ಸಹಾಯ ಸತೀಶ ಜಾರಕಿಹೊಳಿ ಪೌಂಡೇಶನ್ ದಿಂದ ನೀಡಲಾಗುವುದು. ಗ್ರಾಮೀಣ ಪ್ರತಿಭೆಗಳನ್ನು ಬೆಳೆದರೆ ದೇಶ ಬೆಳೆಯದಂತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮುಖ್ಯ ಪ್ರಾಯೋಜಕರಾದ ಶ್ರೀರಾಮ್ ಬಿಲ್ಡರ್ಸ್ ವತಿಯಿಂದ ಆಯೋಜಿಸಲಾದಫ್ಲ್ಯಾಶ್ ಮಾಬ್, ಸೈಕ್ಲಿಂಗ್, ಜುಂಬಾ, ಫುಟ್ಬಾಲ್, ಅಲ್ಲೆ ಕ್ರಿಕೆಟ್, ಚೆಸ್, ಕೇರಂ, ಬ್ಯಾಡ್ಮಿಂಟನ್, ಯೋಗ, ಧ್ಯಾನ, ಸ್ಕೇಟಿಂಗ್, ಹಗ್ಗ ಎಳೆಯುವುದು, ಜಂಪ್ ರೋಪ್, ಮೈಂಡ್ ಫುಲ್ ಚಟುವಟಿಕೆಗಳು, ಒಂದು ನಿಮಿಷದ ಚಾಲೆಂಜ್ ಆಟ, ಸ್ಟ್ರೀಟ್ ಆರ್ಟ, ಭೌರಾದಿಂದ ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಸ್ಟ್ರೀಟ್ ಕ್ರಿಕೆಟ್ ಕ್ರೀಡೆಗಳಲ್ಲಿ ನೂರಾರು ಕ್ರೀಡಾಪಟುಗಳು ಭಾಗವಹಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.ಈ ಸಂದರ್ಭದಲ್ಲಿ ಶ್ರೀರಾಮ್ (ಕನ್ಸ್ಟ್ರಕ್ಷನ್) ಬಿಲ್ಡರ್ಸ್ , ಡೆವಲಪರ್ಸ್ ಮತ್ತು ಇಂಜಿನಿಯರ್ ಅರವಿಂದ ಟಕ್ಕೇಕರ್ , ಜಿಲ್ಲಾ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿಪ್ರದೀಪ ಎಂ.ಜೆ, ಕಾಂಗ್ರೆಸ್ ಮುಖಂಡ ಅರವಿಂದ ಕಾರ್ಚಿ, ಗೊರಾಲ್, ಕೆಪಿಸಿಸಿ ಸದಸ್ಯರಾದ ಮಲಗೌಡ ಪಾಟೀಲ ಹಾಗೂ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು, ಗ್ರಾಮಸ್ಥರು ಇತರರು ಇದ್ದರು.