ನೌಕರಿ ನೀಡಿ ಇಲ್ಲವೇ ಮರಳಿ ಭೂಮಿ ನೀಡಿ : ಹನುಮಂತಪ್ಪ ಕೌದಿ
ಕೊಪ್ಪಳ: ಬಿಎಸ್ಪಿಎಲ್ ಕಾರ್ಖಾನೆಗೆ ನಾವು ಭೂಮಿಕಳೆದುಕೊಂಡಿದ್ದೇವೆ, ನಮಗೆ ಸರ್ಕಾರಿ ನೌಕರಿ ನೀಡಿ ಇಲ್ಲವೇ ಮರಳಿ ಭೂಮಿ ನೀಡಿ ಎಂದು ಜಮೀನು ಕಳೆದುಕೊಂಡ ಹಾಲವರ್ತಿ ಗ್ರಾಮದ ಹನುಮಂತಪ್ಪ ಕೌದಿ ಒತ್ತಾಯಿಸಿದರು. ಅವರು ಗುರುವಾರದಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಖಾನೆ ವಿರುದ್ಧ ಹೋರಾಟ ಮಾಡುವರು ಮಾಡಲಿ ಕಾರ್ಖಾನೆಗೆ ಆರಂಭಕ್ಕೆ 359ಕ್ಕೂ ಹೆಚ್ಚು ರೈತರ ಫಲವತ್ತಾದ ಭೂಮಿ ಹೋಗಿದೆ. 2006ರಲ್ಲಿ ಕೆಐಎಡಿಬಿ ಮುಖಾಂತರ ಭೂಮಿ ವಶಪಡಿಸಿಕೊಂಡಿದ್ದಾರೆ. ಅಂದು ನಾವು ಕಾರ್ಖಾನೆ ನಿರ್ಮಾಣಕ್ಕೆ ಭೂಮಿ ಕೊಡಲು ಸಿದ್ಧರಿರಲಿಲ್ಲ. ಆದರೂ ಒತ್ತಾಯ ಪೂರ್ವಕ ವಾಗಿವಶಪಡಿಸಿಕೊಳ್ಳಲಾಯಿತು. ಕಾರ್ಖಾನೆ ಆರಂಭವಾದ ಬಳಿಕ ಭೂಮಿ ಕಳೆದುಕೊಂಡ ರೈತರ ಮನೆಗೊಬ್ಬರಂತೆ ಒಂದು ನೌಕರಿ ಕೊಡುವುದಾಗಿ ಭರವಸೆ ನೀಡಿದರು. ಆದರೆ, ಈವರೆಗೂ ಕಾರ್ಖಾನೆ ಆರಂಭವಾಗಿಲ್ಲ. ಕಾರ್ಖಾನೆ ಆರಂಭವಾಗದಿದ್ದರೇ ನಮ್ಮ ಭೂಮಿ ನಮಗೆ ಮರಳಿ ಕೊಡಿ, ಇಲ್ಲವೇ ಭೂಮಿ ಕಳೆದುಕೊಂಡ ನಮಗೆ ಸರ್ಕಾರಿ ನೌಕರಿ ಕೊಡಿ ಎಂದು ಒತ್ತಾಯಿಸಿದರು. ಬಿಎಸ್ಪಿಎಲ್ ಕಾರ್ಖಾನೆ ಘಟಕ ಈಗತಾನೆ ಆರಂಭವಾಗುತ್ತಿದೆ, ಭೂಮಿ ಕಳೆದುಕೊಂಡ ರೈತರಲ್ಲಿ ಹಾಗೂ ಸುತ್ತಮುತ್ತಲಿನ ಯುವಕರಲ್ಲಿ ಉದ್ಯೋಗ ಸಿಗಬಹುದು ಎಂಬ ಆಶಾಭಾವನೆ ಇದೆ, 18 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಉದ್ದೇಶಿತ ಬಿಎಸ್ಪಿಎಲ್ ಕಾರ್ಖಾನೆ ಸ್ಥಾಪಿಸಿ ರೈತರಿಗೆ ನೀಡಿರುವ ಭರವಸೆಯಂತೆ ಪ್ರತಿ ಕುಟುಂಬಕ್ಕೆ ಉದ್ಯೋಗ ನೀಡಿ ಇಲ್ಲವೇ ನಮ್ಮ ಭೂಮಿ ಹೋಗಿದೆ. ಆ ಭೂಮಿಯಾದರೂ ಮರಳಿ ನಮಗೆ ಕೊಡಿಸಿ ಇಲ್ಲವೇ ಸರಕಾರಿ ನೌಕರಿ ನೀಡಿ ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ರೈತರಾದ ರೇವಪ್ಪ ನಡುವಲಮನಿ, ಕಾಮಣ್ಣ ಕಂಬಳಿ, ಶಂಕ್ರ್ಪ ಗುರಿಕಾರ,ಕೆಂಚಪ್ಪ ಕೊಪ್ಪಳ, ಈರ್ಪ ಹರಿಜನ ಉಪಸ್ಥಿತರಿದ್ದರು.