ಮಕ್ಕಳ ಬಿಸಿಯೂಟಕ್ಕೆ ಶುದ್ದತೆ ಆಹಾರ ನೀಡಿ : ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರಪಾಷ ಪಲ್ಟನ್

Give clean food to the children: Municipal Standing Committee Chairman Akbar Pasha Paltan

ಮಕ್ಕಳ ಬಿಸಿಯೂಟಕ್ಕೆ ಶುದ್ದತೆ ಆಹಾರ ನೀಡಿ : ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರಪಾಷ ಪಲ್ಟನ್ 

ಕೊಪ್ಪಳ : 06 ನಗರದ ಜಿ.ಜಿ.ಎಮ್‌.ಎಸ್ ಮತ್ತು ಉರ್ದು ಶಾಲೆಗೆ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರಪಾಷ ಪಲ್ಟನ್ ಬೇಟೆ ನೀಡಿ ಮದ್ಯಾಹ್ನ ಸಮಯದಲ್ಲಿ ಮಕ್ಕಳಿಗೆ ಬಿಸಿಯೂಟ ಮತ್ತು ಮೊಟ್ಟೆ ವಿತರಣೆಯನ್ನು ಪರೀಶೀಲಿಸಿದರು. ಹೊರ ಜಿಲ್ಲೆಯ ಶಾಲೆಯಲ್ಲಿ ಕೊಳೆತ ಮೊಟ್ಟೆಯನ್ನು ಮಕ್ಕಳಿಗೆ ವಿತರಣೆ ಮಾಡಲಾಗಿದ್ದು, ಈ ಕುರಿತು ಮಾದ್ಯಮದಲ್ಲಿ ಪ್ರಸಾರವಾದ ಸುದ್ದಿಯನ್ನು ನೋಡಿ ಎಚ್ಚೆತ ಸ್ಥಾಯಿ ಸಮಿತಿ ಅಧ್ಯಕ್ಷರು ಜಿ.ಜಿ.ಎಮ್‌.ಎಸ್ ಮತ್ತು ಉರ್ದು ಶಾಲೆಗೆ ದಿಢೀರ ಬೇಟಿ ನೀಡಿ ಶಾಲೆಯಲ್ಲಿ ಕಳಪೆ ಮತ್ತು ಕೊಳೆತ ಮೊಟ್ಟೆಯನ್ನು ವಿತರಣೆ ಮಾಡದಂತೆ ಮುಖ್ಯ ಶಿಕ್ಷಕರಿಗೆ, ಸಹಶಿಕ್ಷಕರಿಗೆ ಮತ್ತು ಅಡುಗೆ ಸಿಬ್ಬಂದಿಯವರಿಗೆ ಹೇಳಿದರು, ಮೊಟ್ಟೆ ವಿತರಣೆ ಮೊದಲು ಅದರ ಗುಣಮಟ್ಟುವನ್ನು ನೀರಿನಲ್ಲಿ ಪರೀಕ್ಷಿಸಿ ನಂತರ ಮಕ್ಕಳಿಗೆ ವಿತರಿಸಲು ಸೂಚಿಸಿದರು.  ಈ ಕುರಿತು ಸಂಬಂಧ ಪಟ್ಟ ಅಧಿಕಾರಿಗಳು ಕೊಪ್ಪಳ ಜಿಲ್ಲೆಯಲ್ಲಿ ವಿತರಣೆಯಾಗುವ ಮೊಟ್ಟೆಗಳನ್ನು ಮಕ್ಕಳ ಆರೊಗ್ಯ ಹಿತದೃಷ್ಟಿಯಿಂದ ಪರೀಕ್ಷಿಸಿದ ನಂತರ ಗುಣಮಟ್ಟದ ಮೊಟ್ಟೆಗಳನ್ನು ಶಾಲೆಗಳಿಗೆ ವಿತರಣೆ ಮಾಡಲು ವಿನಂತಿಸಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಅಡುಗೆ ಸಿಬ್ಬಂದಿಯವರು ಉಪಸ್ಥಿತರಿದ್ದರು.