ಮುಸ್ಲಿಮರಿಗೆ ಶೇಕಡಾ 4ರಷ್ಟು ಮೀಸಲಾತಿ ಕೊಡಿ
ಸಿಂದಗಿ 06: ಅಲ್ಪಸಂಖ್ಯಾತರಿಗೆ ಸರ್ಕಾರದಿಂದ ಸವಲತ್ತಿನ ಸಲುವಾಗಿ ಮುಸ್ಲಿಮರಿಗೆ ಶೇಕಡಾ 4ರಷ್ಟು ಮೀಸಲಾತಿ ಕೊಡಬೇಕು. ಎನ್‌ಜಿಓಗೆ ಟೈಲರಿಂಗ್, ಕಂಪ್ಯೂಟರ್, ಉಚಿತ ಆರೋಗ್ಯ ಶಿಬಿರಗಳಿಗೆ, ಉಚಿತ ಆರೋಗ್ಯ ಜಾಗೃತಿ ಕಾರ್ಯಕ್ರಮಗಳಿಗೆ ಅನುದಾನ ಬಿಡುಗಡೆ ಮಾಡಬೇಕು. ಮುಸ್ಲಿಂ ಬಡ ವಿದ್ಯಾರ್ಥಿಗಳಿಗೆ ಐಟಿಐ, ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳಿಗೆ ಕನಿಷ್ಠ 35,000 ಶಿಷ್ಯವೇತನ ಕೊಡುತ್ತೇವೆ ಎಂದು ಘೋಷಣೆ ಮಾಡಬೇಕು. ಮುಸ್ಲಿಂ ಸಮುದಾಯದ ಗುತ್ತಿಗೆದಾರರಿಗೆ ಕನಿಷ್ಠ ಎರಡು ಕೋಟಿ ರೂಪಾಯಿಗಳವರೆಗೆ ಗುತ್ತಿಗೆ ಕಾಮಗಾರಿ ಕೊಡಬೇಕು. ವಕ್ಫ ಕೌನ್ಸಿಲ್‌ನಿಂದ ಸಮುದಾಯ ಭವನಕ್ಕೆ ಸಾಲ ಪಡೆದ ರಾಜ್ಯದ ಎಲ್ಲಾ ಸಮುದಾಯ ಭವನಗಳ ಸಾಲ ಮನ್ನಾ ಮಾಡಬೇಕು. ಎಂದು ಅನೇಕ ಮುಸ್ಲಿಂ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ಮುಸ್ಲಿಂ ಅಸೋಸಿಯೇಷನ್ ತಾಲೂಕು ಅಧ್ಯಕ್ಷ ಡಾ. ಅಬೂಬಕರ್ ಮುಲ್ಲಾ ಬೇಡಿಕೆಗಳಿಗೆ ಆಗ್ರಹಪಡಿಸಿದರು.