ಘನಮಠೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಘನಶ್ರೀ ಉತ್ಸವ ಕಲಾ ಹಬ್ಬ

ಘನಮಠೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಘನಶ್ರೀ ಉತ್ಸವ ಕಲಾ ಹಬ್ಬ  Ghanshree Utsav Art Festival at Ghanmatheshwar Educational Institute


ತಾಳಿಕೋಟೆ 14:  ಪಟ್ಟಣದ  ಘನಮಠೇಶ್ವರ ಶಿಕ್ಷಣ ಸಂಸ್ಥೆಯಲ್ಲಿ 2025-26 ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನದ ಪ್ರಯುಕ್ತ ಘನಶ್ರೀ ಉತ್ಸವ ಕಲಾ ಹಬ್ಬವನ್ನು ದಿನಾಂಕ:-11-02-2026 ರಂದು  ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಯಿತು.  

ಈ ಕಲಾ ಹಬ್ಬದ ವೇದಿಕೆಯನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದಂತ  ದಿನಕರ್ ಜೋಶಿ, ಉಪನ್ಯಾಸಕರು ಜೆಎಸ್ಜಿ ಪಿಯು ಕಾಲೇಜ್, ಹಾಗೂ ಡಾ.ತಿಮ್ಮಯ್ಯ ಶೆಟ್ಟಿ ಅಧ್ಯಕ್ಷರು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ರಾಯಚೂರು. ಡಾ. ನಜೀರ್ ಕೋಳ್ಯಾಳ ವೈದ್ಯರು ತಾಳಿಕೋಟಿ,  ಬಾಬು ಕಾರಜೋಳ್, ವ್ಯಾಪಾರಸ್ಥರು ತಾಳಿಕೋಟಿ, ಬಾಲಾಜಿ ವಿಜಯಪುರ, ಸಮೂಹ ಸಂಪನ್ಮೂಲ ವ್ಯಕ್ತಿಗಳು ಮಿಣಜಗಿ ಕ್ಲಸ್ಟರ್ ವಲಯ.

ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ಪ್ರೊ ದಿನಕರ್ ಜೋಶಿ ಅವರು ಮಾತನಾಡಿ ಮಕ್ಕಳಿಗೆ ಉತ್ತಮವಾಗಿರ್ತಕ್ಕಂತ ಶಿಕ್ಷಣ ಶಾಲೆಯಲ್ಲಿ ಸಿಗಬಹುದು ಆದರೆ ಮಕ್ಕಳಿಗೆ ಉತ್ತಮವಾಗಿರ್ತಕ್ಕಂತ ಸಂಸ್ಕಾರ ಮನೆಯಲ್ಲಿಯೇ ತಂದೆ ತಾಯಿಯಿಂದಲೇ ಸಿಗುವುದು ಎಂದು ತಿಳಿಸಿದರು ಹಾಗೂ ಸಹಸ್ರಾರು ಸಂಖ್ಯೆಯಲ್ಲಿ ಪಾಲಕ ಬಂಧುಗಳು ತಮ್ಮ ಮಕ್ಕಳೊಂದಿಗೆ ಬಂದು ಈ ಕಲಾ ಹಬ್ಬಕ್ಕೆ ಒಂದು ಮೆರಗನ್ನು ಹೆಚ್ಚಿಸಿದರು.

ಇದೇ ಸಂದರ್ಭದಲ್ಲಿ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಂತ ಘನಮಠೇಶ್ವರ ಶಿಕ್ಷಣ ಸಂಸ್ಥೆಯ ಗೌರವಾನ್ವಿತ ಅಧ್ಯಕ್ಷರಾದ  ಡಾ.ಎಸ್‌ಎಂ ಸಜ್ಜನ್ ಅವರು ಮಾತನಾಡಿ ಮಕ್ಕಳ ಮನರಂಜನೆ ಪೋಷಕರ ಉತ್ಸಾಹ ಹಾಗೂ ಪ್ರೋತ್ಸಾಹ ಈ ಒಂದು ಕಾರ್ಯಕ್ರಮದ ಯಶಸ್ವಿಗಾಗಿ ಶ್ರಮಿಸಿದಂತ ಎಲ್ಲಾ ಶಿಕ್ಷಕರಿಗು ಹಾಗೂ ಈ ಘನಶ್ರೀ ಉತ್ಸವ ಕಲಾ ಹಬ್ಬದ ಯಶಸ್ಸಿಗೆ ಕಾರಣೀಭೂತರಾದ ಎಲ್ಲ ಪಾಲಕ ಬಂಧುಗಳಿಗೂ ಕೃತಜ್ಞತೆಯನ್ನು ಸಲ್ಲಿಸಿದರು.  

ಈ ಸಮಯದಲ್ಲಿ ಸಂಸ್ಥೆಯ ಕಾಯದರ್ಶಿ ವಿವೇಕಾನಂದ ಸಜ್ಜನ, ಮುಖ್ಯ ಗುರುಗಳಾದ ಬಿ.ಜಿ.ಸಜ್ಜನ, ಆರ್‌.ಎಸ್‌.ದೇಸಾಯಿ, ದೈಹಿಕ ಶಿಕ್ಷಕ ಶಿವಾನಂದ ಸುಣಧೋಳಿ, ಸಿಬಿಎಸ್‌ಇ ಪ್ರಾಚಾರ್ಯ ಜಯಚಂದ್ರ, ಬಿ.ಎಡ್ ಕಾಲೇಜ್ ಪ್ರಾಚಾರ್ಯ ಜಿ.ಎನ್‌.ಪಾಟೀಲ, ಸರ್ವ ಸಿಬ್ಬಂದಿವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.. ನಿರೂಪಣೆಯನ್ನು  ಕಲ್ಮೇಶ ಸರ್ ಹಾಗೂ  ಅಮೃತಾ ಬೇನಾಳಮಠ ಅವರು   ನಡೆಸಿಕೊಟ್ಟರು. 


Ghanmatheshwara Education Institution