ಮಕ್ಕಳಲ್ಲಿ ಕಾನೂನು ಅರಿವು ಬೆಳೆಸುವುದು ಅಗತ್ಯ: ನ್ಯಾಯಾಧೀಶೆ ರೂಪಾ ಚಿನವರ

ಮಕ್ಕಳಲ್ಲಿ ಕಾನೂನು ಅರಿವು ಬೆಳೆಸುವುದು ಅಗತ್ಯ: ನ್ಯಾಯಾಧೀಶೆ ರೂಪಾ ಚಿನವರ  Fostering legal awareness among children is essential: Judge Roopa Chinavara

ಲೋಕದರ್ಶನ ವರದಿ

ಕಾಗವಾಡ 30: ಇಂದಿನ ದಿನಮಾನಗಳಲ್ಲಿ ಪ್ರತಿಯೊಬ್ಬರಿಗೂ ಕಾನೂನಿನ ಮೂಲಭೂತ ಜ್ಞಾನ ಅಗತ್ಯವಾಗಿದೆ. ವಿಶೇಷವಾಗಿ ಮಕ್ಕಳಲ್ಲಿ ಹಾಗೂ ನಾಗರಿಕರಲ್ಲಿ ಕಾನೂನು ಅರಿವು ಬೆಳೆಸುವುದು ಅತ್ಯಂತ ಮಹತ್ವದ್ದಾಗಿದೆ ಎಂದು ಕಾಗವಾಡ ಸಿವಿಲ್ ನ್ಯಾಯಾಧೀಶೆ ಶ್ರೀಮತಿ ರೂಪಾ ಚಿನವರ ಹೇಳಿದರು.  

ತಾಲೂಕಿನ ಶಿರಗುಪ್ಪಿ ಗ್ರಾಮದ ಸರ್ಕಾರಿ ಕನ್ನಡ/ಉರ್ದು ಪ್ರೌಢಶಾಲೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಬೆಳಗಾವಿ, ತಾಲೂಕು ಕಾನೂನು ಸೇವಾ ಸಮಿತಿ ಕಾಗವಾಡ, ನ್ಯಾಯವಾದಿಗಳ ಸಂಘ, ಕಂದಾಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ’ಮಾನವ ಕಳ್ಳಸಾಗಣೆ ತಡೆ ದಿನಾಚರಣೆ’ ಹಾಗೂ ನ್ಯಾಯ ನಿಮ್ಮದು ನೆರವು ನಮ್ಮದು ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.  

ಮಾನವ ಕಳ್ಳಸಾಗಣೆ ಸಮಾಜಕ್ಕೆ ದೊಡ್ಡ ಸವಾಲಾಗಿದ್ದು, ಅದರ ತಡೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಅವರು ತಿಳಿಸಿದರು.  ನ್ಯಾಯವಾದಿಗಳಾದ ಪಿ.ಎಸ್‌. ಕನಾಳೆ ಹಾಗೂ ವಿ.ಎಸ್‌. ಮೌರ್ಯ ಅವರು ಮಾನವ ಕಳ್ಳಸಾಗಣೆ ತಡೆ ಕುರಿತು ಉಪನ್ಯಾಸ ನೀಡಿ, ಕಾನೂನುಗಳ ಕುರಿತು ಮಾಹಿತಿ ನೀಡಿದರು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಬಿ.ಆರ್‌. ರಾವ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಹಶೀಲ್ದಾರ್ ರವೀಂದ್ರ ಹಾದಿಮನಿ, ಸಿಡಿಪಿಒ ರವೀಂದ್ರ ಗುಡಗೆಣ್ಣವರ, ಸಹಾಯಕ ಸರ್ಕಾರಿ ಅಭಿಯೋಜಕ ಬಿ.ಡಿ. ಕಾಂಬಳೆ, ಬಿಇಒ ಪಾಂಡುರಂಗ ಮದಭಾವಿ, ಸರ್ಕಾರಿ ಕನ್ನಡ/ಉರ್ದು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಯು.ವಿ. ಮಗದುಮ್ಮ ಹಾಗೂ ನ್ಯಾಯವಾದಿಗಳಾದ ಅಭಯಕುಮಾರ ಅಕಿವಾಟೆ, ಎ.ಬಿ. ಪಾಟೀಲ, ಎ.ಎಸ್‌. ವರ್ಧನ್, ಆರ್‌.ಎ. ಭಂಡಾರೆ, ಪಿ.ಎಸ್‌. ಕನಾಳೆ, ವಿ.ಎಸ್‌. ಮೌರ್ಯ ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು, ಪಾಲಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.