ನಾಳೆ ನೋಂದಣಿ ಆರಂಭ ಪ್ರತಿ ಎಕರೆಗೆ 5 ಕ್ವಿಂಟಾಲ್ರಂತೆ ಗರಿಷ್ಠ 10 ಕ್ವಿಂಟಾಲ್ ತೊಗರಿ ಖರೀದಿ: ಗೀತಾ

ಕೊಪ್ಪಳ 23: ಜಿಲ್ಲೆಯಲ್ಲಿ ಡಿ. 24 ರಿಂದ ತೊಗರಿ ಖರೀದಿ ಕೇಂದ್ರಗಳಲ್ಲಿ ನೋಂದಣಿ ಆರಂಭವಾಗಲಿದ್ದು, ಪ್ರತಿ ರೈತರಿಂದ ಎಕರೆಗೆ 5 ಕ್ವಿಂಟಾಲ್ರಂತೆ ಗರಿಷ್ಠ 10 ಕ್ವಿಂಟಾಲ್ ತೊಗರಿ ಉತ್ಪನ್ನವನ್ನು ಖರೀದಸಲಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಸಿ.ಡಿ. ಗೀತಾ ಅವರು ಹೇಳಿದರು.    

ಬೆಂಬಲ ಯೋಜನೆಯಡಿ ತೊಗರಿ ಬೆಳೆ ಖರೀದಿ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರದಂದು ಆಯೋಜಿಸಲಾದ ಜಿಲ್ಲಾ ಟಾಸ್ಕ್ಫೋಸರ್್ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.   

ಪ್ರಸಕ್ತ ಸಾಲಿನಲ್ಲಿ ಬೆಂಬಲ ಬೆಲೆ ಯೋಜನೆ ಎಫ್.ಎ.ಕ್ಯೂ. ಗುಣಮಟ್ಟದ ತೊಗರಿಯನ್ನು ಪ್ರತಿ ಕ್ವಿಂಟಾಲ್ಗೆ ರೂ.5675/- ಕೇಂದ್ರ ಸಕರ್ಾರದಿಂದ ಮತ್ತು ರಾಜ್ಯ ಸರಕಾರದ ಪ್ರೋತ್ಸಾಹ ಧನ ರೂ.425/- ಸೇರಿ ಒಟ್ಟು ರೂ.6100/-ಗಳ ಬೆಂಬಲ ಬೆಲೆ ನೀಡಿ ರೈತರಿಂದ ಖರೀದಿಸಲು ರಾಜ್ಯ ಸಕರ್ಾರದ ಆದೇಶಿಸಿದ್ದು, ಕೊಪ್ಪಳ ಜಿಲ್ಲೆಯ ನಾಲ್ಕು ಸ್ಥಳಗಳಲ್ಲಿ ತೊಗರಿ ಖರೀದಿ ನೋಂದಣಿ ಕೇಂದ್ರಗಳನ್ನು ಪ್ರಾರಂಭಿಸಲು ತೀಮರ್ಾನಿಸಲಾಗಿದೆ.  ಪ್ರತಿ ರೈತರಿಂದ ಎಕರೆಗೆ 5 ಕ್ವಿಂಟಾಲ್ರಂತೆ ಗರಿಷ್ಠ 10 ಕ್ವಿಂಟಾಲ್ ತೊಗರಿ ಉತ್ಪನ್ನವನ್ನು ಖರೀದಸಲಾಗುತ್ತಿದ್ದು, ಡಿ. 24 ರಿಂದ ರಿಂದ 2019ರ ಜನವರಿ. 07 ರವರೆಗೆ ತೊಗರಿ ಖರೀದಿ ಕೇಂದ್ರಗಳಲ್ಲಿ ನೋಂದಣಿಯು ನಡೆಯಲಿದೆ.  ಎಫ್.ಎ.ಕ್ಯೂ. ಗುಣಮಟ್ಟದ ತೊಗರಿಯನ್ನು ಮಾತ್ರ ಖರೀದಿಸಲಾಗುವುದು.  ತೊಗರಿ  ಗುಣಮಟ್ಟದ ಕುರಿತು ಕೃಷಿ ಇಲಾಖೆಯು ಪರಿಶೀಲಿಸಬೇಕು.  ಸಕರ್ಾರದ ನಿದರ್ೆಶನದಂತೆ ತೊಗರಿ ಖರೀದಿ ಪ್ರಕ್ರೀಯೆ ನಡೆಯಬೇಕು ಎಂದು ಅಪರ ಜಿಲ್ಲಾಧಿಕಾರಿ ಸಿ.ಡಿ. ಗೀತಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.         

ಖರೀದಿ ಕೇಂದ್ರಗಳು: ಬೆಂಬಲ ಯೋಜನೆಯಡಿ ತೊಗರಿ ಖರೀದಿಸಲು ಖರೀದಿ ನೋಂದಣಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದ್ದು, ಅವುಗಳ ವಿವರ ಇಂತಿದೆ.  ಕೊಪ್ಪಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣದಲ್ಲಿ, ಪಿ.ಎ.ಸಿ.ಎಸ್. ಮುದ್ದಾಬಳ್ಳಿ.  ಹನುಮಸಾಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣದಲ್ಲಿ, ಪಿ.ಎ.ಸಿ.ಎಸ್. ಹನುಮಸಾಗರ.  ತಾವರಗೇರಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣದಲ್ಲಿ, ಪಿ.ಎ.ಸಿ.ಎಸ್. ತಾವರಗೇರಾ/ ಮೆಣೆದಾಳ.  ಕುಕನೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣದಲ್ಲಿ, ಟಿ.ಎ.ಪಿ.ಸಿ.ಎಂ.ಎಸ್. ಯಲಬುಗರ್ಾದಲ್ಲಿ ನೋಂದಣಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ರೈತರು ನೋಂದಣಿಗಾಗಿ ಪಹಣಿ ಪತ್ರಿಕೆ, ಆಧಾರ ಸಂಖ್ಯೆ ಜೋಡಣೆಗೊಂಡ ಬ್ಯಾಂಕ್ ಖಾತೆಯ ವಿವರದ ಝರಾಕ್ಸ್ ಪ್ರತಿಯೊಂದಿಗೆ ಡಿ. 24 ರಿಂದ ರಿಂದ 2019ರ ಜನವರಿ. 07 ರವರೆಗೆ ತೊಗರಿ ಖರೀದಿ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಳ್ಳಬೇಕು.  ಹೆಚ್ಚಿನ ವಿವರಗಳಿಗಾಗಿ ಸಂಬಂಧಿಸಿದ ನೋಂದಣಿ ಕೇಂದ್ರಗಳಿಗೆ ಭೇಟಿ ನೀಡಬಹುದು ಹಾಗೂ ಕನರ್ಾಟಕ ರಾಜ್ಯ ಸಹಕಾರ ಮಹಾಮಂಡಳ, ಕೊಪ್ಪಳದ ಶಾಖಾ ವ್ಯವಸ್ಥಾಪಕ, ಶ್ರೀಕಾಂತ ಮೊ.ಸಂ. 9449864420, ಇವರನ್ನು ಸಂಪಕರ್ಿಸಬಹುದಾಗಿದೆ.  

ಸಭೆಯಲ್ಲಿ ಕೃಷಿ ಮಾರಾಟ ಇಲಾಖೆ ಸಹಾಯಕ ನಿದರ್ೇಶಕ ಪ್ರಭಾಕರ ವಿ. ಅಣ್ಣಿಗೇರಿ, ಪೊಲೀಸ್ ಇಲಾಖೆಯ ಹೆಬ್ಬಾಳ ಸೇರಿದಂತೆ ಕೃಷಿ ಇಲಾಖೆಯ ಅಧಿಕಾರಿಗಳು ಮತ್ತು ತೊಗರಿ ಖರೀದಿ ನೋಂದಣಿ ಕೇಂದ್ರಗಳ ವ್ಯವಸ್ಥಾಪಕರು ಉಪಸ್ಥಿತರಿದ್ದರು.