ಭಾರತೀಯ ಸೇನೆಗೆ ಆಯ್ಕೆಯಾಗಿ ಜಿಲ್ಲೆಗೆ ಕೀತರ್ಿ ತನ್ನಿ: ಸುನೀಲ್ಕುಮಾರ್

ಕೊಪ್ಪಳ 05: ರಾಯಚೂರಿನಲ್ಲಿ ನಡೆಯಲಿರುವ ಸೇನಾ ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸುವ ಕೊಪ್ಪಳ ಜಿಲ್ಲೆಯ ಯುವಕರು ದೈಹಿಕ ಪರೀಕ್ಷೆಯಲ್ಲಿ ಉತ್ತಮ ಪ್ರದರ್ಶನ ನೀಡಿ, ಭಾರತೀಯ ಸೇನೆಗೆ ಆಯ್ಕೆಯಾಗಿ ಜಿಲ್ಲೆಗೆ ಕೀತರ್ಿ ತರುವಂತೆ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಯುವಕರಿಗೆ ಕರೆ ನೀಡಿದರು.  

ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ ಭಾರತೀಯ ಸೇನಾ ನೇಮಕಾತಿ ರ್ಯಾಲಿಗೆ ಕೊಪ್ಪಳ ಜಿಲ್ಲೆಯ ಯುವಕರಿಗಾಗಿ ಬುಧವಾರದಿಂದ ಡಿ. 08 ರವರೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾದ "ಉಚಿತ ತರಬೇತಿ ಶಿಬಿರ" ಉದ್ಘಾಟಿಸಿ ಅವರು ಮಾತನಾಡಿದರು. 

ಸೈನಿಕ ಹುದ್ದೆಯು ಅತ್ಯಂತ ಶ್ರೇಷ್ಠವಾದ ಹುದ್ದೆಯಾಗಿದೆ.  ಐಎಎಸ್ ಅಭ್ಯಥರ್ಿಗಳಿಗೆ ಗಡಿ ಭಾಗಗಳಲ್ಲಿ ಸೈನಿಕರೊಂದಿಗೆ ಆಮರ್ಿ ಕ್ಯಾಪ್ಗಳನ್ನು ಹಮ್ಮಿಕೊಳ್ಳಲಾಗುತ್ತದೆ.  ಭಾರತೀಯ ಸೇನೆಗೆ ಆಯ್ಕೆಗಾಗಿ ಇದೇ ಡಿ. 11ರಿಂದ 20 ರವೆರೆಗೆ ರಾಯಚೂರು ಜಿಲ್ಲೆಯ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ "ಭೂಸೇನಾ ಭತರ್ಿ ನೇಮಕಾತಿ ರ್ಯಾಲಿ" ನಡೆಯಲಿದ್ದು, ಕೊಪ್ಪಳ ಜಿಲ್ಲೆಯ ಅರ್ಹ ಹಾಗೂ ಆಸಕ್ತ ಅಭ್ಯಥರ್ಿಗಳಿಗೆ ಆನ್ಲೈನ್ ಮೂಲಕ ಅಜರ್ಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು.  ಈಗಾಗಲೇ ಜಿಲ್ಲೆಯ ಅರ್ಹ ಯುವ ಅಭ್ಯಥರ್ಿಗಳು ಆನ್ಲೈನ್ ಮೂಲಕ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದಾರೆ.  ಈ ಕುರಿತು ಜಿಲ್ಲೆಯ ಯುವಕರಿಗೆ ಪ್ರಕಟಣೆಯ ಮೂಲಕ ಮಾಹಿತಿಯನ್ನು ನೀಡುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ತಿಳಿಸಲಾಗಿತ್ತು.  

ಆದರೆ ಭೂಸೇನಾ ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸುವ ಅಭ್ಯಥರ್ಿಗಳಿಗೆ ಅನುಕೂಲವಾಗುವಂತೆ ಮಾಹಿತಿ ನೀಡುವುದರ ಜೊತೆಯಲ್ಲಿ ಕ್ರೀಡಾ ಇಲಾಖೆ ಸಹಾಯಕ ನಿದರ್ೇಶಕರು ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಭೂಸೇನಾ ಅಭ್ಯಥರ್ಿಗಳಿಗೆ ಪೂರ್ವಭಾವಿ ಲಿಖಿತ ಪರೀಕ್ಷೆ ಹಾಗೂ ದೈಹಿಕ ಪರೀಕ್ಷೆಯ ಬಗ್ಗೆ ತಿಳಿಸಲು ಉಚಿತ ತರಬೇತಿ ಶಿಬಿರವನ್ನು ಹಮ್ಮಿಕೊಂಡಿರುವುದು ತುಂಬಾ ಹೆಮ್ಮೆಯ ವಿಷಯವಾಗಿದೆ.  ಈ ಶಿಬಿರದಲ್ಲಿ ನುರಿತ ತರಬೇತುದಾರರು ಅಭ್ಯಥರ್ಿಗಳಿಗೆ ತರಬೇತಿಯನ್ನು ನೀಡಲಿದ್ದಾರೆ.  ಅಲ್ಲದೇ ಈ ಶಿಬಿರವು ಯಾವ ರೀತಿಯಲ್ಲಿ ನಡೆಯಲಿದೆ ಎಂಬುವುದರ ಬಗ್ಗೆ ಐಎಎಸ್ ಪ್ರೋಬೆಷನರಿ ಅಧಿಕಾರಿ ಅಕ್ಷಯ್ ಶೀಧರ್ ಅವರು ಪರಿಶೀಲಿಸುವರು.  ಭೂಸೇನಾ ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸುವ ಯುವಕರು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಿರಬೇಕು.  

ಜಿಲ್ಲೆಯ ಯುವಕರು ಈ ಶಿಬಿರದ ಸದುಪಯೋಗವನ್ನು ಪಡೆದುಕೊಂಡು ನೇಮಕಾತಿ ರ್ಯಾಲಿಯಲ್ಲಿ ಯಶಸ್ವಿಯಾಗಿ ಭಾರತೀಯ ಸೇನೆಗೆ ಆಯ್ಕೆಯಾಗಲು ಪ್ರಯತ್ನಿಸಿ.  ನಿರಂತರ ಪ್ರಯತ್ನದಿಂದ ಯಶಸ್ಸು ಕಾಣಲು ಸಾಧ್ಯವಾಗಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿದರ್ೇಶಕರಾದ ಆರ್.ಜಿ. ನಾಡಗೀರ ಅವರು ವಹಿಸಿದ್ದರು.  ಐಎಎಸ್ ಪ್ರೋಬೆಷನರಿ ಅಧಿಕಾರಿ ಅಕ್ಷಯ್ ಶೀಧರ್, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಅಧೀಕ್ಷಕ ಬಸವರಾಜ, ಭಾರತಿಯ ಸೇವಾದಳ ಕೊಪ್ಪಳ ಕಾರ್ಯದಶರ್ಿ ದ್ಯಾಮಣ್ಣ ಚಿಲವಾಡಗಿ, ರಾಜೇಶ ಕಟಗಿಹಳ್ಳಿ, ವೃತ್ತ ನಿರೀಕ್ಷಕ ಶಿವಾನಂದ ವಾಲಿಕರ, ಭಾರತಿಯ ಸೇವಾದಳದ ಬಸವನಗೌಡ ಪಾಟೀಲ್, ಜಿಲ್ಲಾ ಯುವ ಪ್ರಶಸ್ತಿ ವಿಜೇತ ಆನಂದ ಹಳ್ಳಿಗುಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.