ಧಾರವಾಡ 30: ವಿಶ್ವ ಶಕ್ತಿಕೇಂದ್ರ ಬಿಂದುವಾದ ಲಿಂಗನಾಮಾಂಕಿತವಾದ ಲಿಂಗ ನಿರೀಕ್ಷಣೆ ಸಾಧ್ಯ. ಅಂತರಂಗದ ಭಾವ ಬಹಿರಂಗದಲ್ಲಿ ಕ್ರಿಯಾಚರಣೆ ಹಾಗೂ ಮುಖಮಂಡಲದಲ್ಲಿ ವ್ಯಕ್ತವಾಗುವದನ್ನು ಕಾಣಬಹುದು ಎಂದು ಕನರ್ಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ.ಅನಿತಾ ಗುಡಿ ಅಭಿಪ್ರಾಯಪಟ್ಟರು.
ರಾ.ಹ.ದೇಶಪಾಂಡೆ ಸಭಾಭವನದಲ್ಲಿ ಬಸವಕೇಂದ್ರ ವತಿಯಿಂದ ಆಯೋಜಿಸಿದ್ದ ಅರಿವಿನ ಅಂಗಳ ಕಾರ್ಯಕ್ರಮದಲ್ಲಿ ಶರಣೆ ಗುಡ್ಡಾಪೂರ ದಾನಮ್ಮ ಹಾಗೂ ಶರಣ ಮಾದಾರ ಚನ್ನಯ್ಯನವರ ಶರಣೋತ್ವವ ಸಮಾರಂಭ ಹಾಗೂ ಲಿಂ. ಸಾಯಿಬಣ್ಣ ಬಾಗೇವಾಡಿ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಮಾತನಾಡಿದರು.
ಚೆನ್ನಯ್ಯನವರ ಬಹಿರಂಗದ ಅನುಭವವನ್ನು ಅಂತರಂಗಕ್ಕೆ ವೇದಿಸಿದಾಗ ಆ ಅನುಭವ ವೇದ್ಯವಾಗಿ ಅದರ ಶಕ್ತಿ ಸ್ವರೂಪವಾಗುತ್ತದೆ ಗುರು, ಶರಣರ, ಸಂತರ, ದಾರ್ಶನಿಕರ, ಮಹಾತ್ಮರ ಮಹತ್ವದ ಸಂದೇಶಗಳು ನಮಗೆ ಸಹಾಯಕರವಾಗುತ್ತವೆ. ಚನ್ನಯ್ಯನವರ ವಿಷಯದಲ್ಲಿ ನಮಗೆ ಜ್ಞಾನದ ಪ್ರಕಾಶ ದೊರೆಯುತ್ತದೆ. ನಮ್ಮ ಅಜ್ಞಾನದ ಅಂಧಕಾರ ದೂರವಾಗುವ ಸದ್ವಿಚಾರಗಳು ಲಭ್ಯವಾಗುತ್ತವೆ. ಸುಜ್ಞಾನದ ಮಾರ್ಗದರ್ಶನ ಮಾಡಿದವರು ಗುರುವಾಗುತ್ತಾರೆ. ಹೀಗಾಗಿ ಬಸವಣ್ಣನವರು ಚನ್ನಯ್ಯನವರನ್ನು ಅಪ್ಪ ಎಂದು ಅಭಿಮಾನದಿಂದ ಕರೆದರು ಎಂದರು.
ಬಸವತತ್ವ ಚಿಂತಕ ಸವಿತಾ ನಡಕಟ್ಟಿ ಮಾತನಾಡಿ, ಬಸವಣ್ಣ ಹಾಗೂ ಶರಣರು ಸೇರಿದಂತೆ ಮಹಾವೀರ, ಬುದ್ಧ, ಪೈಗಂಬರ, ಏಸು ಇವರೆಲ್ಲ ದೇವರಲ್ಲ ಇವರು ಜಗತ್ತಿನ ಕಲ್ಯಾಣಕ್ಕಾಗಿ ಶ್ರಮಿಸಿದ ಗುರುಗಳು, ಮಹಾತ್ಮರು ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಜಗತ್ತಿನ ಕಲ್ಯಾಣ ಜೊತೆಗೆ ಸಮಾಜದ ಉದ್ದಾರಕ್ಕಾಗಿ ಸತ್ಕಾರ್ಯ ಮಾಡಿದ ಗುಡ್ಡಾಪೂರದ ದಾನಮ್ಮನ ಅರಿವು ಆಚಾರ ಅನುಭಾವಗಳು ಮಾನವನ ಜೀವನದ ಮಹೋನ್ನತ ಮೌಲ್ಯಗಳಾಗಿವೆ. ಬದುಕಿಗೆ ನೆಮ್ಮದಿ ನೆಲೆಯಿಲ್ಲ. ನೆಮ್ಮದಿ ನೆಲೆಯಿಲ್ಲದೇ ಬದುಕಿಗೆ ಬೆಲೆಯಿಲ್ಲ ನೆಲೆಯಿಲ್ಲದೆ ಬದುಕಿಗೆ ಅರ್ಥವಿಲ್ಲ ಈ ಅರ್ಥವುಳ್ಳ ಬದುಕು ಸಾರ್ಥಕವಾಗಬೇಕಾದರೆ ಅರಿವು ಆಚಾರದ ಅನುಭಾವಗಳು ಅತ್ಯಾವಶ್ಯಕ. ಈ ನಿಟ್ಟಿನಲ್ಲಿ ಬಸವಕೇಂದ್ರ ಅರಿವಿನ ಪಯಣ ಮಾಡುತ್ತಿದ್ದು ಇದರಲ್ಲಿ ಸರ್ವ ಜನಾಂಗದವರು ಪಾಲ್ಗೊಳ್ಳುತ್ತಿರುವುದು ಸಂತಸದ ವಿಷಯ ಎಂದರು.
ಬಸವಕೇಂದ್ರ ಅಧ್ಯಕ್ಷ ಶಿವಣ್ಣ ಶರಣ್ಣನವರ ಅಧ್ಯಕ್ಷತೆವಹಿಸಿದ್ದರು. ಮಾರುತಿ ಗೊಲ್ಲರ ವಚನ ಸಂಗೀತ ನಡೆಸಿಕೊಟ್ಟರು. ಉಮೇಶ ಕಟಗಿ, ವೀರಣ್ಣ ಘಟಿಗೆಣ್ಣವರ, ಶಿವಯೋಗಿ ಹನಮಕ್ಕನವರ, ಮಲ್ಲನಗೌಡ ಗುಬ್ಬಿ, ಶಾಂತಾ ಹೊಂಬಳ, ಬಸಂತಿ ಹಪ್ಪಳದ, ಅನ್ನಪೂರ್ಣ ಬಾಗೇವಾಡಿ, ಪ್ರಭಾವತಿ ಕೊಪ್ಪದ ಉಪಸ್ಥಿತರಿದ್ದರು. ಗೌರಿ ಬಸವರಾಜ ನಿರೂಪಿಸಿದರು. ಫಕೀರಗೌಡ್ರ ನಾಗನಗೌಡ್ರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಮಲ್ಲಿಕಾಜರ್ುನ ಚೌಧರಿ ವಂದಿಸಿದರು.