ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಾಮಾನ್ಯ ಸಭೆ

ಲೋಕದರ್ಶನ ವರದಿ

ಬ್ಯಾಡಗಿ: ರೈತರಿಗೆ ಖಾಲಿಚೀಲಕ್ಕಾಗಿ (ಪ್ಯಾಕಿಂಗ್) ನೀಡುವ ಮೊತ್ತವನ್ನು 10 ರೂ.ಗಳಿಗೆ ಹೆಚ್ಚಿಸುವ ಕುರಿತು ಶುಕ್ರವಾರ ಜರುಗಿದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಾಮಾನ್ಯ ಸಭೆಯಲ್ಲಿ ಸವರ್ಾನುಮತದ ನಿರ್ಣಯ ಕೈಗೊಳ್ಳಲಾಯಿತು.

ವಿಷಯದ ಕುರಿತು ಮಾತನಾಡಿದ ಕಾರ್ಯದಶರ್ಿ ಎಸ್.ಬಿ.ನ್ಯಾಮಗೌಡ, ಮಾರುಕಟ್ಟೆಯಲ್ಲಿ ಪ್ರತಿಚೀಲಕ್ಕೆ ರೈತರಿಗೆ ಇಲ್ಲಿಯವರೆಗೂ ಕೇವಲ 5 ರೂ.ಗಳನ್ನು ನೀಡುತ್ತಾ ಬರಲಾಗಿದೆ, ಮೆಣಸಿನಕಾಯಿ ಮಾರಾಟಕ್ಕೆ ಬಂದ ಬಹಳಷ್ಟು ರೈತರು ಮೌಖಿಕವಾಗಿ ಸಮಿತಿಗೆ ದೂರು ಸಲ್ಲಿಸಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ಪರಿಶೀಲನೆ ನಡೆಸಲಾಗಿ ಕಳೆದೆರಡು ದಶಕಗಳಿಂದ ಇದೇ ದರಗಳು ಮುಂದುವರೆಯುತ್ತಾ ಬಂದಿದೆ ಎಂದರು. 

ಚೀಲಗಳು 50 ರೂ.ಗಳಾಗಿವೆ: ವರ್ತಕರ ಕ್ಷೇತ್ರದ ಪ್ರತಿನಿಧಿ ಸಿ.ಆರ್.ಪಾಟೀಲ ಮಾತನಾಡಿ, ರೈತರು ಪ್ರತಿ ಚೀಲಕ್ಕೆ ಕನಿಷ್ಟ 50 ರೂ.ಗಳನ್ನು ವ್ಯಯಿಸಿ ಮೆಣಸಿನಕಾಯಿ ತುಂಬಿಕೊಂಡು ಬರುತ್ತಿದ್ದಾರೆ, ಸದರಿ ಚೀಲಕ್ಕೆ ಇದೀಗ ಖರೀದಿದಾರರು ಪ್ಯಾಕಿಂಗ್ ರೂಪದಲ್ಲಿ 5 ರೂ.ನೀಡುತ್ತಿದ್ದು ರೈತನಿಗೆ ಕನಿಷ್ಟ 45 ರೂ. ನಷ್ಟವಾಗುತ್ತಿದೆ, ರೈತರ ಶ್ರೇಯೋಭಿವೃದ್ಧಿ ದೃಷ್ಟಿಯಿಂದ ಖಾಲಿ ಚೀಲಕ್ಕೆ ನೀಡುವ ಮೊತ್ತ ರೂ.10 ಕ್ಕೆ ಏರಿಸಿದ್ದು ಈ ಸಮಯದಲ್ಲಿ ಹೆಚ್ಚು ಸೂಕ್ತವೆಂದರು. ಇದಕ್ಕೆ ಸಭೆಯು ಸವರ್ಾನುಮತದ ಅನುಮೋದನೆ ನೀಡಿತು.

ವರ್ತಕರ ಅಭಿಪ್ರಾಯ ಪಡೆದುಕೊಳ್ಳೋಣ:ಅಧ್ಯಕ್ಷ ಕೆ.ಎಸ್.ನಾಯ್ಕರ ಮಾತನಾಡಿ, ಪ್ಯಾಕಿಂಗ್ ದರವನ್ನು ಹೆಚ್ಚಿಸುವ ಉದ್ದೇಶವನ್ನಿಟ್ಟುಕೊಂಡಿರುವುದು ಸ್ವಾಗತಾರ್ಹ ಕ್ರಮ, ಆದರೆ ಈ ಕುರಿತು ವರ್ತಕರ ಸಂಘಕ್ಕೆ ಪತ್ರವೊಂದನ್ನು ಬರೆದು ಸಮಿತಿಯ ನಿರ್ಣಯಗಳನ್ನು ತಿಳಿಸುಕೊಡೋಣ, ಅವರ ಸಹಕಾರವನ್ನು ಪಡೆದುಕೊಂಡು ಹೊಸ ದರವನ್ನು ಜಾರಿಗೊಳಿಸಿದಲ್ಲಿ ಹೆಚ್ಚು ಪರಿಣಾಮಕಾರಿಯಾಗಲಿದ್ದು, ರೈತರ ಶ್ರೇಯೋಭಿವೃದ್ಧಿಗಾಗಿ ಅವರ ಸಹಕಾರವನ್ನು ಸಹ ಸಭೆಯಲ್ಲಿ ಕೋರಿದರು.

ಪಡಗಾಯಿಗೆ ಬ್ರೇಕ್ ಹಾಕಿ:ಸದಸ್ಯೆ ವನಿತ ಗುತ್ತಲ ಮಾತನಾಡಿ, ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಪಡಗಾಯಿ (ಕಸಗಾಯಿ) ತೆಗೆಯುವ ಪದ್ಧತಿ ಜಾರಿಯಲ್ಲಿದೆ, ಸಮಿತಿಯ ಕಾನೂನು ದೃಷ್ಟಿಯಿಂದ ರೈತರ ಚೀಲದಲ್ಲಿ ಸ್ಯಾಂಪಲ್ ಸೇರಿದಂತೆ ಇನ್ನಿತರ ಕಾರಣಗಳಿಗೆ ಅನಧೀಕೃತವಾಗಿ ಮೆಣಸಿನಕಾಯಿ ಸಂಗ್ರಹಿಸುವುದು ಸರಿಯಾದ ಕ್ರಮವಲ್ಲ, ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಇದೊಂದು ಮಾಫಿಯಾದಂತಾಗುತ್ತಿದೆ, ವರ್ತಕರಿಗೆ ರೈತರು ದೇವರಿದ್ದಂತೆ ಅವರಿಗೆ ಅನ್ಯಾಯವೆಸಗುವುದನ್ನು ಸಹಿಸಲು ಸಾಧ್ಯವಿಲ್ಲ ಕೂಡಲೇ ಇಂತಹ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಸಭೆಯಲ್ಲಿ ಆಗ್ರಹಿಸಿದರು.

ಕೂಲಿಕಾಮರ್ಿಕರನ್ನು ವಿಮೆ ವ್ಯಾಪ್ತಿಗೆ ತನ್ನಿ: ಮಾರುಕಟ್ಟೆಗೆ ಕೆಲಸಕ್ಕೆಂದು ಬರುವ ಕೂಲಿ ಕಾಮರ್ಿಕರಿಗೆ ಬದುಕಿನ ಭದ್ರತೆ ಇಲ್ಲದಂತಾಗಿದೆ, ಮೊನ್ನೆಯಷ್ಟೇ ನಡೆದ ಕಟಮಾ ಪಲ್ಟಿ ದುರ್ಘಟನೆಯಲ್ಲಿ ಕೂಲಿಕಾಮರ್ಿಕ ಮಹಿಳೆಯೊಬ್ಬಳು ಸಾವನ್ನಪ್ಪಿದ್ದು ದುರಂತದ ಸಂಗತಿ, ಇದೀಗ ಆಕೆಯ ಕುಟುಂಬ ಬೀದಿಗೆ ಬಂದು ನಿಲ್ಲುವಂತಾಗಿದೆ, ಕೂಡಲೇ ಎಲ್ಲ ಕಾಮರ್ಿಕರನ್ನು ವಿಮೆ ವ್ಯಾಪ್ತಿಗೊಳಪಡಿಸುವಂತೆ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಯದಶರ್ಿ ನ್ಯಾಮಗೌಡ ಇಲ್ಲಿರುವ ಬಹುತೇಕ ಅಸಂಘಟಿತ ಕಾಮರ್ಿಕರಾಗಿದ್ದು, ಅವರಿಗೆ ಜೀವವಿಮೆ ಸಮಿತಿಯ ವ್ಯಾಪ್ತಿಗೆ ಬರುವುದಿಲ್ಲ, ಮಾನವೀಯತೆ ದೃಷ್ಟಿಯಿಂದ ಪ್ರತಿಯೊಬ್ಬ ವ್ಯಾಪಾರಸ್ಥರು ಕನಿಷ್ಟ 10 ಜನ ಕೂಲಿ ಕಾಮರ್ಿಕರಿಗೆ ವಿಮೆ ತುಂಬುವಂತೆ ಮನವಿ ಮಾಡಿಕೊಳ್ಳುವುದಾಗಿ ತಿಳಿಸಿದರು.

ಎಗ್ರೈಸ್ ಅಂಗಡಿ ತೆರವುಗೊಳಿಸಿ:ಸದಸ್ಯ ಶಶಿಧರ ದೊಡ್ಮನಿ ಮಾತನಾಡಿ, ಬ್ಯಾಡಗಿ ಪಟ್ಟಣದಲ್ಲಿರುವ ಮಾರುಕಟ್ಟೆ ಅಂತರಾಷ್ಟ್ರೀಯ ಖ್ಯಾತಿಯನ್ನು ಪಡೆದಿದೆ, ಆದರೆ ಖ್ಯಾತಿಗೆ ಮಸಿ ಬಳಿಯುವಂತೆ ಮಾರುಕಟ್ಟೆ ಮುಖ್ಯದ್ವಾರ ಎರಡೂ ಬದಿಯಲ್ಲಿ ಎಗ್ರೈಸ್ ಅಂಗಡಿಗಳು ಮುಕ್ಕರಿಸಿಕೊಂಡಿದ್ದು ಅದರಿಂದ ಬರುವ ತ್ಯಾಜ್ಯದಿಂದ ಮಾರುಕಟ್ಟೆ ಪ್ರವೇಶಿಸುವವರು ಮೂಗು ಮುಚ್ಚಿಕೊಂಡೇ ಒಳಗೆ ಬರಬೇಕಾಗಿದೆ, ಕೂಡಲೇ ಮುಖ್ಯದ್ವಾರದ ಅಕ್ಕಪಕ್ಕಲ್ಲಿನ ಎಲ್ಲ ಎಗ್ರೈಸ್ ಅಂಗಡಿಗಳನ್ನು ಅಲ್ಲಿಂದ ತೆರವುಗೊಳಿಸುವಂತೆ ಆಗ್ರಹಿಸಿದರು.

ಶೀಘ್ರದಲ್ಲೇ ರೈತ ಭವನ: ನಿದರ್ೇಶಕ ಚನ್ನಬಸಪ್ಪ ಹುಲ್ಲತ್ತಿ ಮಾತನಾಡಿ, ಮೆಣಸಿನಕಾಯಿ ಮಾರಾಟಕ್ಕೆಂದು ಮಾರುಕಟ್ಟೆಗೆ ಬಂದಂತಹ ರೈತರು ಅಲ್ಲಿ ಇಲ್ಲಿ ಕೆಲ ಸಂದರ್ಭಗಳಲ್ಲಿ ನೆಲದ ಮೇಲೆ ಮಲಗಿಯೇ ತೆರಳುತ್ತಾರೆ, ಈ ಹಿನ್ನೆಲೆಯಲ್ಲಿ ರೈತರಿಗೋಸ್ಕರ ಸುಸಜ್ಜಿತವಾದ ರೈತ ಭವನವೊಂದನ್ನು ನಿಮರ್ಾಣ ಮಾಡಲು ನೀಲಿ ನಕ್ಷೆ ಸಿದ್ಧಪಡಿಸಿ ನಿದರ್ೇಶಕರ ಅನುಮೋದನೆ ಕಳುಹಿಸಿಕೊಡುವಂತೆ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಯದಶರ್ಿ ನ್ಯಾಮಗೌಡ ಈಗಾಗಲೇ 50 ಕೊಠಡಿಗಳ ಒಂದು ನೀಲಿನಕ್ಷೆ ಸಿದ್ಧಪಡಿಸಲು ಅಗತ್ಯ ಕ್ರಮಗಳನ್ನು ಕೈಗೊಂಡಿರುವುದಾಗಿ ತಿಳಿಸಿದರು.

ಚಿಕ್ಕಬಾಸೂರಿಗೆ ನೀರಿನ ಸೌಲಭ್ಯ ಕೊಡಿ: ಸದಸ್ಯ ವೀರಭದ್ರಪ್ಪ ಗೊಡಚಿ ಮಾತನಾಡಿ, ಚಿಕ್ಕಬಾಸೂರು ಉಪಮಾರುಕಟ್ಟೆ ಪ್ರಾಂಗಣದಲ್ಲಿ ವ್ಯಾಪಾರಸ್ಥರು ಲೈಸನ್ಸ್ ಪಡೆಯುವ ಪ್ರಕ್ರಿಯೆ ಪ್ರಾರಂಭವಾಗಿದೆ, ಈ ಹಿನ್ನೆಲೆಯಲ್ಲಿ ಪ್ರಾಂಗಣದಲ್ಲಿ ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಅದರಲ್ಲೂ ಕುಡಿಯುವ ನೀರಿನ ಸೌಲಭ್ಯವಂತೂ ಅತೀ ಅವಶ್ಯವಿದ್ದು ಕೂಡಲೇ ಪ್ರಾಂಗಣದಲ್ಲಿ ಕುಡಿಯುವ ನೀರಿನ ಘಟನ ಸ್ಥಾಪನೆ ಸೇರಿದಂತೆ ಎಲ್ಲ ಅಂಗಡಿಗಳಿಗೂ ಪ್ರತ್ಯೇಕ ನಲ್ಲಿಗಳ ವ್ಯವಸ್ಥೆಯನ್ನು ಕಲ್ಪಸಿಕೊಡಲು ಕ್ರಿಯಾಯೋಜನೆ ರೂಪಿಸುವಂತೆ ಆಗ್ರಹಿಸಿದರು.

ಭಂಗೀ ರೋಡ್ಗಳ ಕಾಂಕ್ರೀಟೀಕರಣವಾಗಲಿ:ಮಾರುತಿ ಕೆಂಪಗೊಂಡರ ಮಾತನಾಡಿ, ಮಾರುಕಟ್ಟೆಯಲ್ಲಿ ಲಭ್ಯವಿರುವ ಭಂಗೀರೋಡ್ಗಳನ್ನು ಕಾಂಕ್ರೀಟಕರನಗೊಳಿಸಿ ಅದರಲ್ಲಿ ವಿವಿಧ ರೀತಿಯ ಕ್ಯಾಂಟೀನ್ಗಳ ಸೌಲಭ್ಯವನ್ನು ಕಲ್ಪಸಿಕೊಡಬೇಕು, ಇದರಿಂದ ಮಾತ್ರ ಮಾರುಕಟ್ಟೆಯಲ್ಲಿನ ಟ್ರಾಫಿಕ್ ಜಾಮ್ ತಪ್ಪಲು ಸಹಕಾರಿಯಾಗುತ್ತದೆ, ಮತ್ತು ರೈತರಿಗೆ ಒಂದೇ ಬದಿಯಲ್ಲಿ ಊಟ ಉಪಹಾರ ಸೇರಿದಂತೆ ಇನ್ನಿತರ ಸೌಲಭ್ಯಗಳು ದೊರೆಯಲು ಸಹಕಾರಿಯಾಗುತ್ತದೆ ಎಂದರು. 

ಸಭೆಯಲ್ಲಿ ಉಪಾಧ್ಯಕ್ಷ ಉಳಿವೆಪ್ಪ ಕುರುವತ್ತಿ, ಸದಸ್ಯರಾದ ವಿಜಯಕುಮಾರ ಮಾಳಗಿ, ಕುಮಾರಪ್ಪ ಚೂರಿ, ಡಿ.ಬಿ.ತೋಟದ, ಶಂಭನಗೌಡ ಪಾಟೀಲ, ಮಾಲತೇಶ ಹೊಸಳ್ಳಿ, ನಾಗರಾಜ ಕಟಗಿ, ಶಿವನಗೌಡ ಪಾಟೀಲ, ಸುಶೀಲಮ್ಮ ದಾನಪ್ಪನವರ, ಸಿಬ್ಬಂದಿಗಳಾದ ಶ್ರೀಕಾಂತ ಗೂಳೇದ, ಗುರಪ್ಪನವರ, ಪ್ರಭುಲಿಂಗ ದೊಡ್ಮನಿ, ವಿಕಾಸ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.