ಬೆಳಗಾವಿ, 24 : ಶಾಲಾ ಮಕ್ಕಳಿಗೆ ನೀಡಲಾಗಿರುವ ಸೈಕಲ್, ಶೂ-ಸಾಕ್ಸ್ ಗುಣಮಟ್ಟವನ್ನು ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯು ಪರಿಶೀಲನೆ ನಡೆಸಿ ವರದಿ ನೀಡಿದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ರಾಮಚಂದ್ರನ್ ತಿಳಿಸಿದರು.
ಜಿಲ್ಲಾ ಪಂಚಾಯತ ಸಾಮಾನ್ಯ ಸಭೆಯಲ್ಲಿ ಶೂ -ಸಾಕ್ಸ್ ಗುಣಮಟ್ಟದ ಬಗ್ಗೆ ಸದಸ್ಯರು ಪ್ರಸ್ತಾಪಿಸಿದಾಗ ಈ ಬಗ್ಗೆ ಚಚರ್ೆ ನಡೆಯಿತು.
ವಿಷಯ ಪ್ರಸ್ತಾಪಿಸಿದ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್ ಗೋರಲ, ಕಳಪೆ ಗುಣಮಟ್ಟದ ಶೂ-ಸಾಕ್ಸ್ ಪೂರೈಸಲಾಗಿದ್ದು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಮ್ಮ ವಲಯದ ಶಾಲೆಗಳಲ್ಲಿ ಪೂರೈಸಿರುವ ಶೂ-ಸಾಕ್ಸ್ ಗಳ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಪ್ರಭಾರಿ ಡಿಡಿಪಿಐ ಗಜಾನನ ಮನ್ನಿಕೇರಿ ಸಭೆಗೆ ತಿಳಿಸಿದರು.
ಅನುದಾನ ಬಳಕೆಗೆ ನಿಧರ್ಾರ:
ಬರ ನಿರ್ವಹಣೆಗಾಗಿ ಸಕರ್ಾರದಿಂದ ಬಿಡುಗಡೆಗೊಂಡಿರುವ 1 ಕೋಟಿ ರೂಪಾಯಿ ವಿವೇಚನಾ ನಿಧಿಯಲ್ಲಿ ಉಳಿದಿರುವ 18 ಲಕ್ಷ ರೂಪಾಯಿಗಳನ್ನು ತಕ್ಷಣವೇ ಬಳಕೆ ಮಾಡಬೇಕಿದೆ.
ಈ ಹಣವನ್ನು ತುತರ್ು ಅಗತ್ಯವಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿಗೆ ಬಳಕೆ ಮಾಡಿಕೊಂಡು ಬಳಕೆ ಪ್ರಮಾಣವನ್ನು ಪತ್ರ ಸಲ್ಲಿಸಿದರೆ ಮತ್ತೇ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಬಹುದು ಎಂದು ಜಿಪಂ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ರಾಮಚಂದ್ರನ್ ಹೇಳಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿದ್ದಣ್ಣ ಮುದುಕಣ್ಣವರ, 18 ಲಕ್ಷ ರೂಪಾಯಿಯನ್ನು ಎಲ್ಲ ಕ್ಷೇತ್ರಗಳಿಗೆ ಸಮಾನವಾಗಿ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ರೂಲಿಂಗ್ ನೀಡಿದ ಜಿಪಂ ಅಧ್ಯಕ್ಷೆ ಆಶಾ ಐಹೊಳೆ ಅವರು, ಬರಪೀಡಿತ ಎಂದು ಘೋಷಿಸಲಾಗಿರುವ ಮೂರು ತಾಲ್ಲೂಕುಗಳ ಕುಡಿಯುವ ನೀರಿನ ಘಟಕಗಳ ನಿರ್ವಹಣೆಗೆ ಈ ಅನುದಾನ ಬಳಕೆ ಮಾಡಲಾಗುವುದು ಎಂದು ತಿಳಿಸಿದರು.
ಅಂಬೇಡ್ಕರ್ ಭವನ-ನಿವೇಶನ ಅತಿಕ್ರಮಣ:
ಖಾನಾಪುರದಲ್ಲಿ ನೀಡಲಾಗಿರುವ ನಿವೇಶನದಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಭವನ ನಿಮರ್ಾಣಕ್ಕೆ ಸಕರ್ಾರ ಈಗಾಗಲೇ 1.5 ಕೋಟಿ ಅನುದಾನ ನೀಡಿ, ಮತ್ತೇ ವಾಪಸ್ ಪಡದರೂ ಇದುವರೆಗೆ ಏನೂ ಕ್ರಮ ಆಗಿಲ್ಲ.
ನಿವೇಶನ ದುರ್ಬಳಕೆ ಆಗುತ್ತಿದೆ ಎಂದು ಜಿತೇಂದ್ರ ಮಾದರ ಅಸಮಾಧಾನ ವ್ಯಕ್ತಪಡಿಸಿದರು.
15-20 ವರ್ಷಗಳಿಂದ ಭವನ ನಿಮರ್ಾಣ ನೆನೆಗುದಿಗೆ ಬಿದ್ದಿದೆ. ಅನಧಿಕೃತವಾಗಿ ವ್ಯಕ್ತಿಯೊಬ್ಬರು ಗ್ಯಾರೇಜ್, ಹೋಟೆಲ್ ನಡೆಸಲಾಗುತ್ತಿದೆ. ಸದರಿ 10 ಗುಂಟೆ ನಿವೇಶನ ವಾಪಸ್ ಪಡೆದು ಸಮಾಜ ಕಲ್ಯಾಣ ಇಲಾಖೆಯ ಸುಪದರ್ಿಗೆ ನೀಡಬೇಕು ಎಂದು ಆಗ್ರಹಿಸಿದರು.
ಖಾನಾಪುರ ತಾಲ್ಲೂಕು ಪಂಚಾಯ್ತಿಯ ಸಂಬಂಧಪಟ್ಟ ಸಮಿತಿಯ ಮುಂದೆ ಮಂಡಿಸಬೇಕು ಹಾಗೂ ಕಡತ ಪರಿಶೀಲಿಸಿ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಜಿಪಂ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ರಾಮಚಂದ್ರನ್ ಅವರು ತಾಪಂ ಕಾರ್ಯನಿವರ್ಾಹಕ ಅಧಿಕಾರಿಗಳಿಗೆ ಸೂಚನೆ ನೀಡಿದರ.
ಕಬ್ಬು ಕಟಾವು ಯಂತ್ರ ಖರೀದಿಗೆ ಕಳೆದ ವರ್ಷ 25 ಯಂತ್ರಗಳಿಗೆ ಸಬ್ಸಿಡಿ ನೀಡಲಾಗಿತ್ತು. ಐದು ಜನರನ್ನು ಮೊದಲು ಚೀಟಿ ಮೂಲಕ ಆಯ್ಕೆ ಮಾಡಲಾಯಿತು. ಉಳಿದ ಫಲಾನುಭವಿಗಳನ್ನು ಜೇಷ್ಠತೆ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿದರ್ೇಶಕ ಜಿಲಾನಿ ಮೊಖಾಶಿ ತಿಳಿಸಿದರು.
ಈ ವರ್ಷ 47 ಜನರಿಗೆ ಸಬ್ಸಿಡಿ ನೀಡಲು ಸೂಚನೆ ಬಂದಿದೆ. ಈ ಬಾರಿ ಇಲಾಖೆಯ ಮಾರ್ಗಸೂಚಿಯ ಪ್ರಕಾರ ಏಕಕಾಲಕ್ಕೆ ಆಯ್ಕೆ ಮಾಡುವಂತೆ ಸಭೆಯಲ್ಲಿ ಸೂಚನೆ ನೀಡಲಾಯಿತು.
ಕಳಪೆ ಬೀಜ-ಕಂಪನಿಗೆ ನೋಟಿಸ್:
ಖಾನಾಪುರದಲ್ಲಿ ಎಂಸಿಎಚ್ ಕಂಪನಿಯು ಕಳಪೆ ಭತ್ತದ ಬೀಜಗಳನ್ನು ಪೂರೈಸಿದ್ದು, ಇದರಿಂದ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆ ನಷ್ಟವಾಗಿ ರೈತರಿಗೆ ಅಪಾರ ಹಾನಿ ಸಂಭವಿಸಿದೆ ಎಂದು ಸದಸ್ಯರು ಪ್ರಸ್ತಾಪಿಸಿದರು.
ಇದಕ್ಕೆ ಉತ್ತರಿಸಿದ ಕೃಷಿ ಇಲಾಖೆಯ ಜಂಟಿ ನಿದರ್ೇಶಕರು, ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡವು ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡಿದೆ. ಆದರೆ ವರದಿಯಲ್ಲಿ ಸ್ಪಷ್ಟತೆ ಇಲ್ಲದಿರುವುದರಿಂದ ಸ್ಪಷ್ಟನೆ ಕೇಳಲಾಗಿದೆ. ಅಂತಿಮ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ಬಗ್ಗೆ ಬೀಜ ಪೂರೈಸಿದ ಕಂಪನಿಗೂ ನೋಟಿಸ್ ನೀಡಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತಿ ಸದಸ್ಯೆ ಸರಸ್ವತಿ ಪಾಟೀಲ ಅವರು ಮಾತನಾಡಿ, ಜನಪ್ರತಿನಿಧಿಯಾಗಿರುವ ತಮ್ಮ ಜತೆ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಸರಿಯಾಗಿ ವರ್ತನೆ ಮಾಡಿಲ್ಲ; ಅವರನ್ನು ಸಭೆಗೆ ಕರೆಸಿ ವಿವರಣೆ ಪಡೆಯಬೇಕು ಎಂದು ಪಟ್ಟುಹಿಡಿದರು.
ಇದಕ್ಕೆ ರೂಲಿಂಗ್ ನೀಡಿದ ಜಿಪಂ ಅಧ್ಯಕ್ಷೆ ಆಶಾ ಐಹೊಳೆ ಅವರು, ಜನಪ್ರತಿನಿಧಿಗಳು ಅದರಲ್ಲೂ ಮಹಿಳೆಯರ ಜತೆ ಅಧಿಕಾರಿಗಳು ಶಿಷ್ಟಾಚಾರದ ಪ್ರಕಾರ ನಡೆದುಕೊಳ್ಳಬೇಕು. ಸಂಬಂಧಪಟ್ಟ ಅಧಿಕಾರಿಯನ್ನು ಕರೆಯಿಸಿ ವಿವರಣೆ ಪಡೆಯುವುದಾಗಿ ತಿಳಿಸಿದರು.
ಡಿಡಿಪಿಐಗೆ ನೋಟಿಸ್-ನಂತರ ಕ್ರಮ:
ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಳಗಾವಿ ಉಪ ನಿದರ್ೇಶಕರು ಸೂಕ್ತ ಅನುಮತಿ ಪಡೆಯದೇ ಇನ್ನೊಬ್ಬರಿಗೆ ಪ್ರಭಾರ ವಹಿಸಿ ರಜೆ ಮೇಲೆ ತೆರಳಿರುವುದರಿಂದ ಅವರಿಗೆ ಕಾರಣಕೇಳಿ ನೋಟಿಸ್ ನೀಡಲಾಗಿದೆ.
ರಜೆಯಿಂದ ಹಿಂದಿರುಗಿದ ಬಳಿಕ ನೋಟಿಸ್ ಗೆ ಅವರು ನೀಡಿರುವ ಉತ್ತರ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ರಾಮಚಂದ್ರನ್ ತಿಳಿಸಿದರು.
ಕೊಕಟನೂರ ಎಲ್ಲಮ್ಮದೇವಿ ಜಾತ್ರೆ- ಮೂಲಸೌಕರ್ಯ ಕಲ್ಪಿಸಿ:
ಅಥಣಿ ತಾಲ್ಲೂಕಿನ ಕೊಕಟನೂರಿನಲ್ಲಿ ಡಿಸೆಂಬರ್ 27 ರಿಂದ ಜನವರಿ 8 ರವರೆಗೆ ಎಲ್ಲಮ್ಮ ದೇವಿಯ ಜಾತ್ರೆ ನಡೆಯಲಿದ್ದು, ಈ ಸಂದರ್ಭದಲ್ಲಿ ಶೌಚಾಲಯ, ಕುಡಿಯುವ ನೀರು ಮತ್ತು ಸಾರಿಗೆ ವ್ಯವಸ್ಥೆ ಸೇರಿದಂತೆ ಇತರೆ ಮೂಲಸೌಕರ್ಯ ಒದಗಿಸಲು ಕ್ರಮ ವಹಿಸಬೇಕು ಎಂದು ಜಿಪಂ ಸದಸ್ಯ ಮುದುಕಣ್ಣವರ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಪಂ ಸಿಇಓ ರಾಮಚಂದ್ರನ್ ಅವರು, ಇದಕ್ಕೆ ಸಂಬಂಧಿಸಿದಂತೆ ಪೂರ್ವಭಾವಿ ಸಭೆ ನಡೆಸಿ ಎಲ್ಲ ವಿಚಾರಗಳನ್ನು ಚಚರ್ಿಸಿ ಸೂಕ್ತ ಸೌಲಭ್ಯ ಒದಗಿಸಲಾಗುತ್ತದೆ ಎಂದು ಭರವಸೆ ನೀಡಿದರು.
16 ಮಕ್ಕಳ ಸಾವು-ಕೆರೆಗಳಿಗೆ ಬೇಲಿ ಅಳವಡಿಸಲು ಸೂಚನೆ:
ಕೆರೆಗಳಲ್ಲಿ ಮಕ್ಕಳು ಮುಳುಗಿ ಸಾವನ್ನಪ್ಪುತ್ತಿರುವ ಘಟನೆಗಳು ಮರುಕಳಿಸುತ್ತಿರುವುದರಿಂದ ಇದನ್ನು ತಡೆಗಟ್ಟಲು ಸೂಕ್ತ ಕ್ರಮ ವಹಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.
ಇತ್ತೀಚೆಗೆ ನಡೆದ ಹಲವಾರು ಘಟನೆಗಳಲ್ಲಿ ಒಟ್ಟು 16 ಮಕ್ಕಳು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಹಾಗೂ ಶಾಲೆಗಳಲ್ಲಿ ಶಿಕ್ಷಕರು ಕೂಡ ಸೂಕ್ತ ತಿಳಿವಳಿಕೆ ನೀಡಬೇಕು ಎಂದು ಜಿಪಂ ಅಧ್ಯಕ್ಷೆ ಆಶಾ ಐಹೊಳೆ ನಿದರ್ೇಶನ ನೀಡಿದರು.
ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತಕ್ಷಣವೇ ಎಲ್ಲ ಕೆರೆಗಳನ್ನು ಪರಿಶೀಲಿಸಿ, ತಕ್ಷಣವೇ ಎಚ್ಚರಿಕೆ ಫಲಕಗಳನ್ನು ಅಳವಡಿಸಬೇಕು. ಸಾಧ್ಯವಾದರೆ ಅನುದಾನ ಲಭ್ಯತೆ ಆಧರಿಸಿ ಕೆರೆಗಳಿಗೆ ಬೇಲಿ ಅಳವಡಿಕೆಗೂ ಕ್ರಮಕೈಗೊಳ್ಳಬೇಕು ಎಂದು ಜಿಪಂ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಸೂಚನೆ ನೀಡಿದರು.
ಉಪಾಧ್ಯಕ್ಷ ಅರುಣ ಕಟಾಂಬಳೆ ಉಪಸ್ಥಿತರಿದ್ದರು. ಜಿಪಂ ಉಪಕಾರ್ಯದಶರ್ಿ ಎಸ್.ಬಿ.ಮುಳ್ಳಳ್ಳಿ ಸಭೆಯನ್ನು ನಿರ್ವಹಿಸಿದರು.