ಲೋಕದರ್ಶನವರದಿ
ರಾಣೇಬೆನ್ನೂರ೦೬: ಲಿಂಗ, ಪ್ರಸಾದ, ಪಾದೋದಕ ಮುಂತಾದವುಗಳ ಸಂಕೇತವೇ ಷಟಸ್ಥಲವಾಗಿದ್ದು, ಅವುಗಳನ್ನು ದೈನಂದಿನ ಜೀವನದಲ್ಲಿ ಆಚರಣೆಯಲ್ಲಿ ತಂದಾಗ ಮಾತ್ರ ಧರ್ಮ ಉಳಿಯಲು ಸಹಕಾರಿಯಾಗುವುದು ಎಂದು ದಾವಣಗೆರಿ ಬಸವ ಬಳಗದ ವಿ.ಸಿದ್ಧರಾಮಣ್ಣ ಹೇಳಿದರು.
ನಗರದ ರೇಲ್ವೆ ಸ್ಟೇಷನ್ ರಸ್ತೆ ವರ್ತಕರ ಸಮುದಾಯ ಭವನದಲ್ಲಿ ದಾವಣಗೆರಿಯ ಅಜ್ಜಂಪುರಶೆಟ್ರು ಸೇವಾಟ್ರಸ್ಟ್, ಬಸವಬಳಗ ಹಾಗೂ ಸ್ಥಳೀಯ ಬಸವ ಜ್ಯೋತಿ ಮಹಿಳಾ ಮಂಡಳ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ 12ನೇ ಶರಣ ತತ್ವ ಕಮ್ಮಟದ ಷಟಸ್ಥಲ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸುವಣರ್ಾದೇವಿ ಪಾಟೀಲ, ದಾವಣಗೆರಿ ಬಸವ ಬಳಗದ ಗೌರವ ಅಧ್ಯಕ್ಷ ಎಚ್.ಎಂ.ಸ್ವಾಮಿ, ವರ್ತಕ ಎಂ.ಎಸ್.ಅರಕೇರಿ, ಬೆಳಗಾವಿಯ ಲಿಂಗಾಯತ ಸಂಘಟನೆ ಅಧ್ಯಕ್ಷ ಶಶಿಭೂಷಣ ಪಾಟೀಲ, ಹಾವೇರಿಯ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಶಿವಬಸಪ್ಪ ಮುದ್ದಿ ಸೇರಿದಂತೆ ಮತ್ತಿತರರು ಇದ್ದರು.