ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯಕ್ಕೆ 39 ಡಿಸ್ಟಿಂಕ್ಷನ್

Gavisiddheshwar Pre-University College gets 39 distinctions

 ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯಕ್ಕೆ 39 ಡಿಸ್ಟಿಂಕ್ಷನ್

ಕೊಪ್ಪಳ 08: ನಗರದ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ 2024-25ನೇ ಸಾಲಿನ ದ್ವೀತಿಯ ಪಿ.ಯು.ಸಿ ಫಲಿತಾಂಶ  ಪ್ರಕಟವಾಗಿದ್ದು ಕಲಾ ವಿಭಾಗದಲ್ಲಿ ಆನಂದ ಕರಿಯಪ್ಪ 95.17 (571 ಅಂಕಗಳು), ವಾಣಿಜ್ಯ ವಿಭಾಗದಲ್ಲಿ ಗೌರಮ್ಮ ಬಸವರಾಜ ಶೇ 91.67 (550 ಅಂಕಗಳು), ವಿಜ್ಞಾನ ವಿಭಾಗದಲ್ಲಿ ಬಾಳಮ್ಮ ದುರಗಪ್ಪ ಶೇ 91.33 (548 ಅಂಕಗಳು) ಪಡೆದು ಆಯಾ ವಿಭಾಗದಲ್ಲಿ ಕಾಲೇಜಿಗೆ ಹೆಚ್ಚು  ಅಂಕಗಳನ್ನು ಪಡೆದುಕೊಂಡು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.  

ಅಲ್ಲದೆ ಕಲಾ ವಿಭಾಗದಲ್ಲಿ 24, ವಾಣಿಜ್ಯ ವಿಭಾಗದಲ್ಲಿ 07 ಹಾಗೂ ವಿಜ್ಞಾನ ವಿಭಾಗದಲ್ಲಿ 08 ಹೀಗೆ ಒಟ್ಟು 39 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 415 ಪ್ರಥಮ ಶ್ರೇಣಿ, 145 ದ್ವಿತೀಯ ಶ್ರೇಣಿಯಲ್ಲಿ ಉತ್ತಿರ್ಣರಾಗಿರುತ್ತಾರೆ. ಕಾಲೇಜಿನ ಒಟ್ಟಾರೆ ಶೇಕಡಾ 64.78ಅ ಪ್ರತಿಶತ ಫಲಿತಾಂಶ ಬಂದಿದೆ ಎಂದು ಪ್ರಾಚಾರ್ಯ ಡಾ.ವಿರೇಶಕುಮಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪರಮಪೂಜ್ಯ ಶ್ರೀಗವಿಸಿದ್ಧೇಶ್ವರ ಮಹಾಸ್ವಾಮಿಗಳು ಆಶೀರ್ವದಿಸಿದ್ದಾರೆ. ಶ್ರೀಗವಿಸಿದ್ಧೇಶ್ವರ ವಿದ್ಯಾವರ್ಧಕ ಟ್ರಸ್ಟಿನ ಆಡಳಿತ ಮಂಡಳಿಯವರು ಪ್ರಾಚಾರ್ಯರು ಹಾಗೂ ಸಕಲ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.