ಉಭಯ ತಾಲೂಕಿನಲ್ಲಿ ಒಂದೇ ತುರ್ತು ಅಗ್ನಿಶಾಮಕ ವಾಹನ ಗೌರೀಶ ನಾಗಶೆಟ್ಟಿ

Gaureesha Nagashetty is the only emergency fire engine in both taluks

ಉಭಯ ತಾಲೂಕಿನಲ್ಲಿ ಒಂದೇ ತುರ್ತು ಅಗ್ನಿಶಾಮಕ ವಾಹನ ಗೌರೀಶ ನಾಗಶೆಟ್ಟಿ 

ಶಿರಹಟ್ಟಿ, 03; ಅಗ್ನಿಶಾಮಕ ಠಾಣೆಗೆ ಪ್ರಸ್ತುತ ಕೇವಲ ಒಂದೇ ತುರ್ತು ಅಗ್ನಿಶಾಮಕ ವಾಹನವು ಲಭ್ಯವಿದೆ. ಈ ವಾಹನವನ್ನು ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲ್ಲೂಕುಗಳ ಅಗ್ನಿ ಅವಘಡಗಳನ್ನು ನಿಯಂತ್ರಿಸಲು ಬಳಸಲಾಗುತ್ತಿದೆ. ಇದರಿಂದಾಗಿ ತುರ್ತು ಪರಿಸ್ಥಿತಿಗಳಲ್ಲಿ ಶೀಘ್ರ ಪ್ರತಿಕ್ರಿಯೆ ನೀಡುವುದು ಕಷ್ಟವಾಗುತ್ತಿದ್ದು, ಸಾರ್ವಜನಿಕರ ಜೀವ, ಆಸ್ತಿಪಾಸ್ತಿಗಳಿಗೆ ಅಪಾಯ ಉಂಟಾಗುತ್ತಿದೆ. 

ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ಅಗ್ನಿಶಾಮಕ ಸೇವೆ 

ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲ್ಲೂಕುಗಳು ಕೃಷಿ ಪ್ರಧಾನ ಪ್ರದೇಶವಾಗಿದ್ದು, ಇಲ್ಲಿ ಮನೆಗಳು, ವ್ಯಾಪಾರ ವಹಿವಾಟು, ಮತ್ತು ಕಛೇರಿ ಕಟ್ಟಡಗಳ ಸಂಖ್ಯೆಯೂ ಹೆಚ್ಚಾಗಿದೆ. 54364 ಜನಸಂಖ್ಯೆ ಮತ್ತು 4656 ಚ.ಕಿಮೀ ವ್ಯಾಪ್ತಿಯನ್ನು ಗಮನಿಸಿದರೆ, ಅಗ್ನಿಶಾಮಕ ಸೇವೆಗಳ ಲಭ್ಯತೆ ಇಲ್ಲಿ ಅತ್ಯಂತ ಮುಖ್ಯವಾಗಿದೆ. ಒಂದು ವರ್ಷದಲ್ಲಿ ಕನಿಷ್ಠ 50 ಪ್ರಕರಣಗಳ ಕಂಡು ಬರುತ್ತಿದ್ದವು,ಅದರೆ ಕಳೆದ ಎರಡು ತಿಂಗಳಲ್ಲಿ 47 ಪ್ರಕರಣ ದಾಖಲೆ ಕಂಡು ಬಂದಿವೆ.ಪ್ರಸ್ತುತ ಸ್ಥಿತಿ ಶಿರಹಟ್ಟಿ ಅಗ್ನಿಶಾಮಕ ಠಾಣೆಯಲ್ಲಿ ಕೇವಲ ಒಂದೇ ತುರ್ತು ಅಗ್ನಿಶಾಮಕ ವಾಹನವಿದ್ದು, ಇದು ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ಎರಡೂ ತಾಲ್ಲೂಕುಗಳಿಗೆ ಸೇವೆ ನೀಡುತ್ತಿದೆ. ಇದರಿಂದ ತುರ್ತು ಪರಿಸ್ಥಿತಿಯಲ್ಲಿ ತಕ್ಷಣ ತಲುಪುವಿಕೆಗೆ ಅಡ್ಡಿಯಾಗುತ್ತಿದೆ. ಹೆಚ್ಚಾಗಿ ದೂರದ ಪ್ರದೇಶಗಳಿಗೆ ತಲುಪಲು ವಾಹನದ ದೊರೆಯ ಸಮಯವೂ ಹೆಚ್ಚಾಗಿದೆ.ಅಲ್ಲದೆ, ಅಗ್ನಿಶಾಮಕ ವಾಹನಗಳಿಗೆ ನೀರು ತುಂಬಲು ಸರಿಯಾದ ವ್ಯವಸ್ಥೆ ಇಲ್ಲದ ಕಾರಣ, ಅಗ್ನಿ ನಂದಿಸಲು ಅಗತ್ಯವಿರುವ ನೀರಿನ ಲಭ್ಯತೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಇದು ತರು​‍್ತ ಪರಿಸ್ಥಿತಿಯಲ್ಲಿ ಕಾರ‌್ಯಚರಣೆ ಮೇಲೆ ನೇರ ಪರಿಣಾಮ ಬೀರುತ್ತದೆ. 

ಬೇಸಿಗೆ ಸಮಯದಲ್ಲಿ ತಾಪಮಾನವು ಹೆಚ್ಚಾಗುವ ಕಾರಣದಿಂದಾಗಿ ಅಗ್ನಿಶಾಮಕದಳದ ಕೆಲಸವು ಹೆಚ್ಚಾಗುತ್ತದೆ. ಈ ಸಮಯದಲ್ಲಿ ಸುಡು ಬಿಸಿಲಿನ ಪರಿಣಾಮದಿಂದ ವಿವಿಧ ರೀತಿಯ ಅನಾಹುತಗಳು ಸಂಭವಿಸಬಹುದು. 

ಬೆಂಕಿ ಅವಘಡಗಳು: 

ಕೃಷಿ ಭೂಮಿಯಲ್ಲಿ ಬಣವೆ ಸುಡುವಾಗ ನಿಯಂತ್ರಣ ತಪ್ಪುವುದು.ಒಣ ಹುಲ್ಲು, ಬಣವೆ, ಕಸದ ಗುಡ್ಡೆಗಳಲ್ಲಿ ಬೆಂಕಿ ಹಚ್ಚುವಾಗ ಉಂಟಾಗುವ ಬೆಂಕಿ.ತಾಪಮಾನದಿಂದಾಗಿ ವಿದ್ಯುತ್ ತಂತಿಗಳು ತಾಪಗೊಂಡು ಶಾರ್ಟ್‌ ಸರ್ಕ್ಯೂಟ್ ಸಂಭವಿಸುವುದು.ಗ್ಯಾಸ್ ಸಿಲಿಂಡರ್ ಅಥವಾ ಇಂಧನ ಶೇಖರಣೆ ಸ್ಥಳಗಳಲ್ಲಿ ಬೆಂಕಿ ಹೊತ್ತಿಹೋಗುವುದು. 


ಅರಣ್ಯ ದಾಹ  

ಬೆಂಕಿಯ ಅಪರೂಪಾದ ಪರಿಸ್ಥಿತಿಗಳು ಕಾಡಿನಲ್ಲಿ ಉಂಟಾಗುವುದು. 

ಈದುಮಾರುತದಿಂದ ಬೆಂಕಿಯ ಹರಡುವಿಕೆ ಹೆಚ್ಚು ವೇಗವಾಗುವುದು. 

ಕೈಗಾರಿಕೆಗಳಲ್ಲಿ ತಾಪಮಾನದಿಂದ ರಾಸಾಯನಿಕಗಳ ಮೇಲೆ ಪರಿಣಾಮ ಬಿದ್ದು ಬೆಂಕಿ ಕಾಣಿಸಿಕೊಳ್ಳುವುದು. ಬಸ್ಸು, ಲಾರಿ ಅಥವಾ ಇತರ ವಾಹನಗಳಲ್ಲಿ ತಾಪದಿಂದಾಗಿ ಇಂಧನ ಸ್ಫೋಟ ಆಗುವುದು. 


ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ಎರಡೂ ಸ್ಥಳಗಳಲ್ಲಿ ಪ್ರತ್ಯೇಕ ಅಗ್ನಿಶಾಮಕ ವಾಹನಗಳ ನೇಮಕ.ಅಗ್ನಿಶಾಮಕ ವಾಹನಗಳಿಗೆ ನೀರು ತುಂಬಲು ಸಮರ​‍್ಕ ಟ್ಯಾಂಕ್ಗಳು ಮತ್ತು ಹೂಸ್ಪೈಪ್ಗಳ ವ್ಯವಸ್ಥೆ.ತುರ್ತು ಸ್ಥಿತಿಗಳಲ್ಲಿ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಅಗ್ನಿಶಾಮಕ ಸಿಬ್ಬಂದಿಗೆ ತರಬೇತಿ ನೀಡುವುದು.ಸ್ಥಳೀಯ ಆಡಳಿತ ಮತ್ತು ಅಗ್ನಿಶಾಮಕ ಇಲಾಖೆಯ ಸಹಯೋಗದೊಂದಿಗೆ ಮೂಲಸೌಕರ್ಯಗಳನ್ನು ಸುಧಾರಿಸಲು ಕ್ರಮಗಳ ಮುಖ್ಯವಾಗಿದೆ. 

ಸಮಸ್ಯೆಗಳ ವಿಶ್ಲೇಷಣೆ 

ಕೇವಲ ಒಂದು ವಾಹನದಿಂದಾಗಿಯೇ ತರು​‍್ತ ಪರಿಸ್ಥಿತಿಯನ್ನು ಹತೋಟಿಗೆ ತರುವುದು ಕಷ್ಟಕರ.ಎರಡು ತಾಲ್ಲೂಕುಗಳ ಅಗತ್ಯಗಳನ್ನು ಪೂರೈಸಲು ಅಗ್ನಿಶಾಮಕ ವಾಹನದ ಲಭ್ಯತೆ ಸೂಕ್ತವಿಲ್ಲ.ನೀರು ತುಂಬುವ ವ್ಯವಸ್ಥೆ ಇಲ್ಲದಿರುವುದರಿಂದ ಪ್ರತಿ ಬಾರಿ ದೂರದ ಸ್ಥಳದಿಂದ ನೀರು ತುಂಬಬೇಕಾಗುತ್ತಿದ್ದು, ಇದರಿಂದ ಸಮಯ ವಿಲಂಬವಾಗುತ್ತಿದೆ. ಎರಡು ಅಗ್ನಿಶಾಮಕ ವಾಹನ ಇದ್ದಲ್ಲಿ  ತುರ್ತು ಅಗ್ನಿ ಅವಘಡಗಳಲ್ಲಿ ಶೀಘ್ರ ಪ್ರತಿಕ್ರಿಯೆ ಸಿಗುತ್ತದೆ.ಜೀವಹಾನಿ ಮತ್ತು ಆಸ್ತಿ ಹಾನಿ ಕಡಿಮೆ ಅಗುತ್ತದೆ. ನೀರಿನ ಕೊರತೆಯಿಂದ ಉಂಟಾಗುವ ತೊಂದರೆ ನಿವಾರಣೆ ಮಾಡಬೇಕಾಗಿದೆ.ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ಎರಡೂ ತಾಲ್ಲೂಕುಗಳ ಜನರಿಗೆ ಸುರಕ್ಷತೆಯ ಭರವಸೆ ನಮ್ಮ ಮೇಲೆ ಇರಲಿ ನಮ್ಮ ಪ್ರಾಣ ನೀಡಿ ನಿಮ್ಮ ಪ್ರಾಣ ಕಾಪಾಡುತ್ತವೆ. ಎಸ್ ಬಿ ಶೇಗುಣಸಿ ಶಿರಹಟ್ಟಿ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ 

ತುರ್ತು ಪರಿಸ್ಥಿತಿಯಲ್ಲಿ ಅಗ್ನಿ ನಿಯಂತ್ರಿಸಲು ಆಗದಿರುವುದರಿಂದ ಜೀವಹಾನಿ ಮತ್ತು ಆಸ್ತಿ ಹಾನಿ ಸಂಭವಿಸುವ ಸಾಧ್ಯತೆಯಿದೆ.ಸ್ಥಳೀಯ ನಿವಾಸಿಗಳು ಮತ್ತು ವ್ಯಾಪಾರಸ್ಥರು ಭದ್ರತೆಗಿರುವ ಭರವಸೆ ಕಮ್ಮಿಯಾಗುತ್ತದೆ ಎಂಬುವುದು ಆಡಳಿತ ಸರ್ಕಾರ ಮೊದಲು ಗಮನ ನೀಡಿಬೇಕು ಜನರ ಜೀವಹಾನಿದೊಂದಿಗೆ ಚೆಲ್ಲಾಟ ಬೇಡ 

ಫಕ್ಕಿರೇಶ ರಟ್ಟಿಹಳ್ಳಿ ಪಪಂ ಸದ್ಯಸರ