ಲೋಕದರ್ಶನ ವರದಿ
ಗಂಗಾವತಿ 25: ಪ್ರಸಕ್ತ ವರ್ಷ ಆಗಸ್ಟ್ ತಿಂಗಳಿನಿಂದ ನೂತನ ಇಂಜಿನಿಯರಿಂಗ್ ಕಾಲೇಜ ಆರಂಭಗೊಳ್ಳಲಿದೆ ಎಂದು ಶಾಸಕ ಪರಣ್ಣ ಮುನವಳ್ಳಿ ತಿಳಿಸಿದರು.
ಶನಿವಾರ ನೂತನ ಕಾಲೇಜ ಕಟ್ಟಡವನ್ನು ವೀಕ್ಷಿಸಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಭತ್ತದ ನಾಡಿನ ಬಹು ದಿನಗಳ ಕನಸು ಇಂದು ನನಸಾಗುವ ಕಾಲ ಸನ್ನಿಹಿತವಾಗಿದೆ. ಕಳೆದ 7 ವರ್ಷಗಳಿಂದ ವಿದ್ಯಾಥರ್ಿಗಳು ಜಾತಕ ಪಕ್ಷಿಯಂತೆ ಕಾದು ಕುಳಿತಿದ್ದರು. 25 ಕೋ.ರು. ವೆಚ್ಚದಲ್ಲಿ ನಿಮರ್ಾಣಗೊಂಡಿರುವ ಕಾಲೇಜ ಆಗಸ್ಟ್ ತಿಂಗಳಿನಿಂದ ಪ್ರವೇಶ ಆರಂಭಗೊಳ್ಳುತ್ತದೆ. ಕಾಲೇಜ ಆರಂಭಕ್ಕೆ ಹೊಸ ದೆಹಲಿಯ ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಷನ್ ಕಾಲೇಜ ಆರಂಭಿಸಲು ಏ.30 ರಂದು ಆದೇಶ ಹೊರಡಿಸಿದ್ದಾರೆ ಎಂದು ಹೇಳಿದರು.
2012 ರಲ್ಲಿ ತಾವು ಶಾಸಕರಾಗಿದ್ದ ಸಂದರ್ಭದಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದರು. ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್.ಆಚಾರ್ ಅವರಿಗೆ ತಾವು ದುಂಬಾಲು ಬಿದ್ದು ಕಾಲೇಜ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದೇನೆ ಎಂದು ಹೇಳಿದರು.
ಲಭ್ಯ ಇರುವ ಕೋರ್ಸ್ :ಕಂಪ್ಯೂಟರ್ ಸೈನ್ಸ್, ಸಿವಿಲ್, ಎಲೆಕ್ಟ್ರಾನಿಕ್ಸ್ ಕಮ್ಯುನಿಕೇಶನ್, ಮೆಕಾನಿಕಲ್ ಮತ್ತು ಎಲೆಕ್ಟ್ರಿಕಲ್ ಎಲೆಕ್ಟ್ರಾನಿಕ್ಸ್ ಕೋರ್ಸ್ಗ ಳು ಆರಂಭಗೊಳ್ಳಲಿವೆ. ಪ್ರತಿಯೊಂದು ವಿಭಾಗದಲ್ಲಿ 60 ವಿದ್ಯಾರ್ಥಿ ಗಳಿಗೆ, ಒಟ್ಟು 300 ವಿದ್ಯಾಥರ್ಿಗಳಿಗೆ ಪ್ರವೇಶ ಅವಕಾಶ ಇದೆ ಎಂದು ಶಾಸಕ ಮುನವಳ್ಳಿ ಹೇಳಿದರು. ಈ ಸಂದರ್ಭದಲ್ಲಿ ಪ್ರಾಚಾರ್ಯ ಡಾ.ಬಿ.ನಾಗರಾಜ ಪಾಟೀಲ್, ಬಿಜೆಪಿ ಮುಖಂಡರಾದ ತಿಪ್ಪೇರುದ್ರಸ್ವಾಮಿ, ವೀರೇಶ ಬಲಕುಂದಿ, ಸಂತೋಷ ಕೆಲೋಜಿ, ನಗರಸಭೆ ಸದಸ್ಯ ರಾಘವೇಂದ್ರಶೆಟ್ಟಿ ಇದ್ದರು.