ಲೋಕದರ್ಶನ ವರದಿ
ಶಿಗ್ಗಾವಿ 07: ಡಿ.ಕೆ.ಸಿ.ಸಿ ಬ್ಯಾಂಕ್ ಲಿ ಧಾರವಾಡ ಇದರ ನಿದರ್ೇಶಕ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ಗಂಗಣ್ಣ ಚ ಸಾತಣ್ಣವರ ಅವರಿಗೆ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಯುನಿಯನ್ ವತಿಯಿಂದ ಹಾಗೂ ಡಿ.ಕೆ.ಸಿ.ಸಿ ಬ್ಯಾಂಕ್ ಲಿ ಶಿಗ್ಗಾವಿ ಶಾಖೆಯ ಸಿಬ್ಬಂದಿಗಳ ವತಿಯಿಂದ ಸನ್ಮಾನಿಸಿ ಗೌರವಿಸಿದರು.
ನಿದರ್ೇಶಕ ಗಂಗಣ್ಣ ಸಾತಣ್ಣವರ ಸನ್ಮಾನ ಸ್ವೀಕರಿಸಿ ಮಾತನಾಡಿ, ಕೆಲಸ ಕಾರ್ಯಗಳಿಗೆ ಏನಾದರು ತೊಂದರೆಯಾದಲ್ಲಿ ಶೀಘ್ರವಾಗಿ ಪರಿಹರಿಸುವ ಪ್ರಯತ್ನ ಮಾಡುತ್ತೇನೆ, ಬ್ಯಾಂಕ್ ಹಾಗೂ ಸಹಕಾರ ಸಂಘಗಳಲ್ಲಿ ಪತ್ತೇತರ ಸಾಲ ನೀಡಿದಲ್ಲಿ ಅಭಿವೃದ್ದಿ ಹೊಂದಲು ಸಾದ್ಯ, ಸಿಬ್ಬಂದಿಗಳು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕು ಎಂದು ಸಲಹೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಎಸ್.ಬಿ.ಕಮಡೊಳ್ಳಿ ವಹಿಸಿ ಪ್ರಾಸ್ಥವಿಕವಾಗಿ ಮಾತನಾಡಿ, ಈ ಹಿಂದೆ ಬ್ಯಾಂಕ್ ಅಭಿವೃದ್ದಿಯಲ್ಲಿ ಗಂಗಣ್ಣ ಸಾತಣ್ಣವರ ವರ ಕಾರ್ಯ ಶ್ಲ್ಯಾಘನೀಯವಾದುದು, ಮುಂದೆಯೂ ಕೂಡ ಅವರು ಬ್ಯಾಂಕ್ ಅಭಿವೃದ್ದಿಯಲ್ಲಿ ಇನ್ನು ಹೆಚ್ಚಿನ ಸೇವೆ ಸಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬ್ಯಾಂಕ ವ್ಯವಸ್ಥಾಪಕರಾದ ಶ್ರೀಮತಿ ಎಸ್.ವ್ಹಿ ಪಾಟೀಲ, ಬ್ಯಾಂಕ್ ನಿರೀಶಕ್ಷಕರಾದ ಎ.ಎಚ್.ಕೊಡತಗೇರಿ, ಕಿರಿಯ ಬ್ಯಾಂಕ್ ನಿರೀಕ್ಷಕ ಸತೀಶ ಕೋಟೆಣ್ಣವರ ಹಾಗೂ ಇತರರು ಇದ್ದರು. ಈರಣ್ಣ ಸುಬರಗಟ್ಟಿ ನಿರೂಪಿಸಿದರು, ಎನ್.ಸಿ.ಸಿದ್ದಣ್ಣವರ ಸ್ವಾಗತಿಸಿದರು, ಈರಣ್ಣ ಗಡೆಣ್ಣವರ ವಂದಿಸಿದರು.