ಗಾಂಧೀಜಿಯವರ 150ನೇ ಜನ್ಮ ವಷರ್ಾಚರಣೆ: ಶಾಂತಿ ಮಾರ್ಗ ಸ್ಥಬ್ದ ಚಿತ್ರಕ್ಕೆ ಸ್ವಾಗತ

ಕೊಪ್ಪಳ 13: ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಮಹಾತ್ಮ  ಗಾಂಧೀಜಿಯವರ 150 ನೇ ಜನ್ಮ ವಷರ್ಾಚರಣೆ ಅಂಗವಾಗಿ ಸತ್ಯ ಮಾರ್ಗ ಹಾಗೂ ಶಾಂತಿ ಮಾರ್ಗ ಎಂಬ ಎರಡು ಸ್ಥಬ್ದ ಚಿತ್ರವನ್ನು ಆಯೋಜಿಸಲಾಗಿದ್ದು ಶಾಂತಿ ಮಾರ್ಗ ಸ್ಥಬ್ದ ಚಿತ್ರವು  ಅಕ್ಟೋಬರ್ 13ರಂದು ಕೊಪ್ಪಳ ಜಿಲ್ಲೆ ಗಂಗಾವತಿಗೆ ಆಗಮಿಸಿತು.

                ಸ್ಥಬ್ದ ಚಿತ್ರದಲ್ಲಿ ಬಾಲಕ ಗಾಂಧಿ, ಬ್ಯಾರಿಸ್ಟರ್ ಗಾಂಧಿ, ಭಾರತೀಯ ಸೈನ್ಯ ಶುಶ್ರೂಷಾ ಪಥದಲ್ಲಿಗಾಂಧಿ, ದೇಶಿ ಉಡುಪಿನಲ್ಲಿಗಾಂಧಿ, ಸಮಾಜ ಪರಿಶೋಧಕ ಗಾಂಧಿ, ಮಗುವಿನ ಜೊತೆಗಾಂಧಿ, ಬರವಣಿಗೆಯಲ್ಲಿ ನಿರತಗಾಂಧಿ ಹಾಗೂ ಅನಂತದೆಡೆಗೆ ಗಾಂಧೀ ಕುರಿತ ಭಾವಚಿತ್ರಗಳು ಇದರಲ್ಲಿವೆ. ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಚಿತ್ರಣವನ್ನು ನಿಮರ್ಿಸಲಾಗಿದ್ದು ಗಾಂಧೀ ಯೊಂದಿಗೆ ಹೋರಾಟದಲ್ಲಿ ಭಾಗವಹಿಸಿದ ಜನರ ಗುಂಪಿನ ಚಿತ್ರಣವು ಇದರಲ್ಲಿ ನಿಜರೂಪದಂತಿರುವುದು ವಿಶೇಷವಾಗಿದೆ. ಮತ್ತು ಗಾಂಧೀ ಹೇಳಿದಂತಹ ಅನೇಕ ಘೋಷ ವಾಕ್ಯಗಳ ಎಲ್ಇಡಿ ಪ್ರದರ್ಶನವು ಇದರಲ್ಲಿ ಲಭ್ಯವಿದೆ. ಗಾಂಧೀ ಹೇಳಿದ ಘೋಷಣ ವಾಕ್ಯಗಳು ಇಂದಿಗೂ ಸತ್ಯವೆನಿಸಿದ್ದು ಸಾವಿರಾರು ಮಾತುಗಳಿಗಿಂತ ಒಂದುಚಿಕ್ಕ ಕೆಲಸವೇ ಮೇಲು, ಅಹಿಂಸೆ ಪರಮ ಶ್ರೇಷ್ಠವಾದದು, ನನ್ನ ಜೀವನವೇ ನನ್ನ ಸಂದೇಶ, ಅಹಿಂಸೆ ಧೈರ್ಯದ ಶಿಖರ, ಮನುಕುಲದದೊಡ್ಡಆಯುಧ ಶಾಂತಿ, ಸರಳತೆ ಎಂಬುದು ಜಾಗತಿಕ ಚಿಂತನೆಯ ಧಾತು ಎಂಬ ಘೋಷ ವಾಕ್ಯಗಳನ್ನು ಬಿತ್ತರಿಸಲಾಗುತ್ತದೆ.ಮತ್ತು ವಾಹರರ ಮೂಲಕ ಕೆಟ್ಟದ್ದನ್ನು ನೋಡಬಾರದು, ಕೆಟ್ಟದ್ದನ್ನು ಕೇಳಬಾರದು, ಕೆಟ್ಟದ್ದನ್ನು ಮಾತನಾಡಬಾರದು ಎಂಬ ಘೋಷಣೆಗಳು ಗಾಂಧೀಜಿಯವರು ಅನುಸರಿಸಿಕೊಂಡು ಬಂದಂತಹ ಮಾರ್ಗವಾಗಿದ್ದು ಇದರ ಉಲ್ಲೇಖವನ್ನು ಇಲ್ಲಿ ಕಾಣಬಹುದಾಗಿದೆ.

                ಸ್ಥಬ್ದ ಚಿತ್ರವು ಬಳ್ಳಾರಿ ಜಿಲ್ಲೆಯ ಕಂಪ್ಲಿ ಮೂಲಕ ಗಂಗಾವತಿಗೆ ಆಗಮಿಸಿತು. ಸಂಜೆ 5ಗಂಟೆಗೆ ಗಂಗಾವತಿ ಪಟ್ಟಣದ ಇಂದಿರಾ ಗಾಂಧೀ ವೃತ್ತದಲ್ಲಿ ಶಾಸಕರಾದ ಪರಣ್ಣ ಮುನವಳ್ಳಿಯವರು ಗಾಂಧೀಜಿಯವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಸ್ವಾಗತಿಸಿದರು. ನಂತರ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಯಿತು.

                ವೇಳೆ ತಹಶೀಲ್ದಾರ್ ವೀರೇಶ್ ಬಿರಾದಾರ್, ಕಾರ್ಯನಿವರ್ಾಹಕ ಅಧಿಕಾರಿ ಮಲ್ಲೇಶಪ್ಪ, ವೃತ್ತ ನಿರೀಕ್ಷಕರಾದ ಉದಯರವಿ, ವಾತರ್ಾ ಇಲಾಖೆ ಎಂ.ಅವಿನಾಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

                . 14ರಂದು ಮಧ್ಯಾಹ್ನ 12 ಕೊಪ್ಪಳ ನಗರ ತಲುಪಲಿದ್ದು ಇಲ್ಲಿ ಸ್ವಾಗತ ಹಾಗೂ ಮೆರವಣಿಗೆ ನಡೆಯಲಿದೆನಂತರ ಮಧ್ಯಾಹ್ನ 2ಗಂಟೆಗೆ ಯಲಬುಗರ್ಾ ಪಟ್ಟಣಕ್ಕೆ ಆಗಮಿಸಲಿದೆ. ಇಲ್ಲಿ ಸ್ವಾಗತ ಹಾಗೂ ಮೆರವಣಿಗೆ ನಡೆಯಲಿದೆ. ಗಾಂಧೀಜಿಯವರ ಕುರಿತ ಅಪರೂಪದ ರಥ ಇದಾಗಿದ್ದು ಶಾಲಾ, ಕಾಲೇಜು ವಿದ್ಯಾಥರ್ಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆ ಮಾಡಲು ವಾತರ್ಾಧಿಕಾರಿ ಧನಂಜಯ ಕೋರಿದ್ದಾರೆ.