ಗಾಂಧೀಜಿ ಅಂದಿಗೂ ಇಂದಿಗೂ ಎಂದೆಂದಿಗೂ ಪ್ರಸ್ತುತವೇ

ಲೋಕದರ್ಶನ ವರದಿ 

ಬಳ್ಳಾರಿ 09: ಬ್ರಿಟೀಷ್ ವಸಾಹತುಶಾಹಿಯ ಸಂದರ್ಭದಲ್ಲಿ, ಸ್ವತಂತ್ರ ಪೂರ್ವ ಭಾರತದಲ್ಲಿ ಬಾಳಿ ಬದುಕಿದ ಹಲವು ಹಿರಿಯ ತಲೆಮಾರಿನ ಮನೆತನಗಳು ಬ್ರಿಟೀಷ್ ಜೀವನ ಶೈಲಿಯನ್ನು ಅನುಕರಿಸಿದ್ದವು. ಹೀಗಾಗಿ ಆಹಾರ, ಉಡುಗೆ ತೊಡುಗೆಗಳು, ಮನೆಯ ಪರಿಕರಗಳು ಆಧುನಿಕ ಶಿಕ್ಷಣ ಪದ್ಧತಿಗೆ ರೂಢಿಸಿಕೊಂಡಿದ್ದ ಭಾರತೀಯ ಮನಸ್ಸಗಳು ವಿಭಿನ್ನವಾದ ಸಾಂಸ್ಕೃತಿಕ ಪಲ್ಲಟಕ್ಕೆ ತಮ್ಮನ್ನು ತೆರೆದುಕೊಂಡು ಭಾರತೀಯತೆ ಮತ್ತು ಆಂಗ್ಲವಿದೇಶಿಯತೆಯ ಸಂಘರ್ಷದ ನಡುವೆ ಅನೇಕ ಬಗೆಯ ತೊಳಲಾಟಗಳನ್ನು ಅನುಭವಿಸುತ್ತಿದ್ದ ಕಾಲಮಾನ. ಆ ಸಂದರ್ಭದಲ್ಲಿ ದೂರದ ಇಂಗ್ಲೇಡಿನಿಂದ ಬ್ಯಾರಿಸ್ಟರ್ ಪದವಿಯನ್ನು ಹೊತ್ತುತಂದ ಮೋಹನ್ದಾಸ್ ಕರಮಚಂದ ಗಾಂಧೀಜಿ ದಕಿಣಾಫ್ರಿಕಾದಲ್ಲಿ ನೆಲೆಸಿರುವ ದಿನಗಳಲ್ಲಿ ಆಂಗ್ಲರ ದೌರ್ಜನ್ಯ, ಅಮಾನವೀಯತೆ, ದಪರ್ಾಂಧ ಕಾನೂನುಗಳನ್ನು ಪ್ರತಿಭಟಿಸುವ ಸಂದರ್ಭದಲ್ಲಿ ಭಾರತೀಯ ಸಂಸ್ಕೃತಿಯ ಆಳವಾದ ಅಧ್ಯಯನ ಮತ್ತು ಅದರ ಪ್ರಯೋಗಾತ್ಮಕ ಜೀವನ ವಿಧಾನಗಳಫಲವಾಗಿ ರೂಪುಗೊಂಡ ಟಾಲ್ಸ್ಟಾಯ್ ಫಾರ್ಮನಲ್ಲಿ ಮೂಡಿ ಬಂದ ಸ್ವದೇಶಿ ಪ್ರಜ್ಞೆಯ ಹಿನ್ನಲೆಯಲ್ಲಿ ಅವಿಷ್ಕಾರಗೊಂಡದ್ದೇ ಗಾಂಧೀಜಿಯ 'ಖಾದಿ' ವಸ್ತ್ರ. ಹೀಗಾಗಿ ಗಾಂಧೀಜಿ ಎಂದರೆ ಖಾದಿ, ಖಾದಿ ಎಂದರೆ ಸ್ವದೇಶಿ, ರಾಷ್ಟ್ರಭಕ್ತಿ ರಾಷ್ಟ್ರ ಪ್ರೇಮಗಳನ್ನು ತನ್ನಾತ್ಮದಲ್ಲಿ ಹುದುಗಿಸಿಕೊಂಡಿದ್ದ ಗಾಂಧೀಜಿ ಜೀವನದುದ್ದಕ್ಕೂ ನಂಬಿದ್ದ ಸತ್ಯ ಅಹಿಂಸೆ ವಿಶ್ವಪ್ರೇಮಗಳಿಂದ ಗಾಂಧೀಜಿ ಅಂದಿಗೂ ಇಂದಿಗೂ ಎಂದೆಂದಿಗೂ ಪ್ರಸ್ತುತವೇ "ಎಂದು ಹಿರಿಯ ರಂಗಭೂಮಿ ಹಾಗೂ ಕಲಾವಿದ ನಾಡೋಜ  ಬೆಳಗಲ್ಲು ವೀರಣ್ಣ ಬಳ್ಳಾರಿಯ ಅಭಯಾಂಜನೇಯಸ್ವಾಮಿ ದೇವಸ್ಥಾನ ಆಡಳಿತ ಮಂಡಳಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಳ್ಳಾರಿ ಪ್ರಾಯೋಜಿತ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೆ.ಚೆನ್ನಪ್ಪ ಅವರು ಮಾತನಾಡಿ ಪ್ರಾಚೀನ ತೊಗಲುಗೊಂಬೆಯಾಟ ಪ್ರದರ್ಶನದೊಂದಿಗೆ ಬೆಳಗಲ್ಲು ವೀರಣ್ಣನವರು ಈ ಕಲೆಯನ್ನು ಉಳಿಸುತ್ತಿದ್ದಾರೆ ಇವರ ಸೇವೆ ಶ್ಲಾಘನೀಯ ಎಂದು ನುಡಿದರು. ರವಿಚಂದ್ರ ರವರು ಮಾತನಾಡಿ "ತೊಗಲುಗೊಂಬೆ" ಪ್ರದರ್ಶನದ ಲಾಭವನ್ನು ಎಲ್ಲರೂ ಪಡೆದು ಕೊಳ್ಳಬೇಕೆಂದರು. ವಿ.ಗಾಂಧಿಯವರು ಮಾತನಾಡಿ "ತೊಗಲುಗೊಂಬೆಯಾಟವು ಒಂದು ಪ್ರಾಚೀನ ಕಲೆ ಇಂದಿನ ಆಧುನಿಕ ವಿದ್ಯುನ್ಮಾನ ಮಾಧ್ಯಮಗಳ ಆವಿಷ್ಕಾರವಾದ ಸಿನಿಮಾ ತಂತ್ರಜ್ಞಾನಕ್ಕೆ ಪ್ರೇರಣೆ ಈ ತೊಗಲುಗೊಂಬೆ ಕಲೆ. ಪರದೆಯ ಹಿಂದೆ ಚರ್ಮದ ಗೊಂಬೆಗಳನ್ನು ಆಡಿಸುತ್ತಾ ಪರದೆಯ ಹಿಂದಿನಿಂದ ಬೆಳಕನ್ನು ಹರಿಸಿ ಪರದೆ ಮೇಲೆ ತೊಗಲುಗೊಂಬೆಗಳು ಮೂಡುವಂತೆ ಮಾಡಿ ಅದು ಕೈಕಾಲುಗಳು ಆಡುವುದರಿಂದ ನೋಡುಗರ ಕಣ್ಣಿಗೆ ಜೀವಂತ ಗೊಂಬೆಗಳು ಮಾತನಾಡುತ್ತಾ ಹೊಸ ವಿಸ್ಮಯವನ್ನು ಸೃಷ್ಠಿಸುವುದರ ಜೊತೆಗೆ ಇಂದಿನ ಆಧುನಿಕ ಸಿನಿಮ ನೋಡುವಂತೆ ಮಾಡುವ ಈ ಕಲೆ ಸಾವಿರಾರು ವರ್ಷಗಳ ಹಳೆಯ ಕಾಲ"ೆ ಎಂದು   ಈ ಕಲೆಯ ಪ್ರಾಚೀನತೆ ಬಗ್ಗೆ ತಿಳಿಸಿದರು. ಬಾಪೂಜಿಯ ತೊಗಲುಗೊಂಬೆಯಾಟದ ಕಾರ್ಯಕ್ರಮಕ್ಕೆ ಅಪಾರ ಪ್ರಮಾಣದ ಪ್ರೇಕ್ಷಕರು ಸಾಕ್ಷಿಯಾಗಿದ್ದಲ್ಲದೆ ಕಾರ್ಯಕ್ರಮವನ್ನು ತುಂಬಾ ಸಂತಸದಿಂದ ವೀಕ್ಷಿಸಿ ಆಸ್ವಾದಿಸಿ ಕರತಾಡನಗಳ ಮೂಲಕ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದರು. ಮನುಕುಲ ಆಶ್ರಮದ ಬಿ.ವಿ.ಮಲ್ಲಿಕಾಜರ್ುನ ಕುಮಾರಿ ಮೇಘ ಹಾಜರಿದ್ದರಲ್ಲದೆ ರಾಮಾಂಜನೇಯ ತೊಗಲುಗೊಂಬೆ ಮೇಳದ ನಾಡೋಜ ಬೆಳಗಲ್ಲು ವೀರಣ್ಣ ನವರು, ಬೆಳಗಲ್ಲು ಪ್ರಕಾಶ್, ರುಕ್ಮಿಣಿ ಬಾಯಿ,ಬಿ.ಜಿ.ಸಾಯಿಕುಮಾರ್, ಕುಮಾರ ಸವರ್ೇಶ್, ಸತೀಶ್, ಕುಮಾರ ಅನಿರುದ್ಧ, ಮಂಜುನಾಥ, ಶ್ರೀನಿವಾಸ ಗೋಪಾಳ ಹಾಗು ತಬಲ ಕಲಾವಿದ ಸುರೇಂದ್ರರವರು ಹಾಗು ಮಹಾದೇವತಾತ ಕಲಾ ಸಂಘದ ಅಧ್ಯಕ್ಷರಾದ ಕಲಾವಿದ ಪುರುಷೋತ್ತಮ ಹಂದ್ಯಾಳ್ ಉಪಸ್ಥಿತರಿದ್ದು ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು.