ಸ್ವಾಭಿಮಾನ ಕಳೆದುಕೊಳ್ಳದೇ ಸರಳತೆಯಿಂದ ಬದುಕು ಎನ್ನುವುದು ಗಾಂಧಿ

ಲೋಕದರ್ಶನ ಸುದ್ದಿ

ಯಲ್ಲಾಪುರ 16: ಸ್ವಾಭಿಮಾನ ಕಳೆದುಕೊಳ್ಳದೇ ಸರಳತೆಯಿಂದ ಬದುಕು ಎನ್ನುವುದು ಗಾಂಧಿ ಈ ನಾಡಿಗೆ ಕೊಟ್ಟುಹೋದ ತತ್ವ.  ರಾಜಕೀಯ ಭಾರತವನ್ನು ಗಾಂಧಿ, ಧಾಮರ್ಿಕ ಭಾರತವನ್ನು ವಿವೇಕಾನಂದ ಪರಿಚಯಿಸಿದರು. ಭಾರತದ ಕುರಿತಾದ ಅಧ್ಯಯನಕ್ಕೆ ವಿದೇಶಿಯರನ್ನು ಪ್ರೇರೆಪಿಸಿದರು. ಮನುಷ್ಯತ್ವದ ನೆಲೆಯಲ್ಲಿ ಇವರಿಬ್ಬರನ್ನು ನೋಡಿದಾಗ ಗಾಂಧಿ ನಿಜಕ್ಕೂ ಮಹಾ ಮಾನವ. ವಿವೇಕಾನಂದ ಸಾಟಿ ಇಲ್ಲದ ಒಬ್ಬ ಆದರ್ಶ ಪುರುಷ ಎಂದು ಡಾ. ಡಿ.ಕೆ. ಗಾಂವ್ಕರ ಹೇಳಿದರು. ಪಟ್ಟಣದ ಸರಕಾರಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಮ್ಮಿಕೊಂಡ ವಾಷರ್ಿಕ  ಶಿಬಿರದ 5ನೇ ದಿನದ ಕಾರ್ಯಕ್ರಮದಲ್ಲಿ  ಉಪನ್ಯಾಸ ನೀಡಿದರು. ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಎಂ. ಆರ್. ಹೆಗಡೆ, ಪ್ರಥಮ ದಜರ್ೆ ಗುತ್ತಿಗೆದಾರ ಎಸ್.ವಿ. ಭಟ್ಟ, ವರದಿಗಾರರಾದ  ಶ್ರೀಧರ ಅಣಲಗಾರ ಮತ್ತು   ಜಯರಾಜ ಗೋವಿ ಅತಿಥಿಗಳಾಗಿ ಪಾಲ್ಗೊಂಡರು. ಎನ್.ಎಸ್.ಎಸ್. ಸಂಯೋಜಕ ಜಿ.ಎಚ್. ನಾಯಕ ಅದ್ಯಕ್ಷತೆ ವಹಿಸಿದರು. ಎನ್.ಎಸ್.ಎಸ್. ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಪುಷ್ಪಾ ಮರಾಠೆ ಸ್ವಾಗತಿಸಿರು, ಜಯಶ್ರೀ ಚೌಕಳೇಕರ ಹಿನ್ನೋಟ ಓದಿದರು ಕುಮಾರ ಮಹೇಶ ಕಲ್ಯಾಣಕರ್ ನಿರೂಪಿಸಿದರು. ಅನಸೂಯಾ ತೊರವತ್ ವಂದಿಸಿದರು ತಿಲಕ್ ತಂಡದ ಸದಸ್ಯರು ದಿನದ ಎಲ್ಲ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.