ಗದಗ 20: ಮತದಾರ ಪಟ್ಟಿಯಲ್ಲಿ ಹೆಸರಿರುವ ಎಲ್ಲರೂ ಅಮಿಷಕ್ಕೊಳಗಾಗದೇ, ಮುಕ್ತವಾಗಿ ಉತ್ಸಾಹದಿಂದ ಎಪ್ರೀಲ್ 23ರಂದು ಜಿಲ್ಲೆಯಲ್ಲಿ ಜರುಗುವ ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡಲು ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಕರೆ ನೀಡಿದರು.
ಗದಗ ತಾಲೂಕಿನ ಕಳಸಾಪೂರ ತಾಂಡಾದಲ್ಲಿಂದು ಗದಗ ಜಿಲ್ಲಾಡಳಿತ, ಜಿಲ್ಲಾ ಪೊಲೀಸ ಜಂಟಿಯಾಗಿ ಮತದಾರರಲ್ಲಿ ಭೀತಿಮುಕ್ತ ಹಾಗೂ ನ್ಯಾಯ ಸಮ್ಮತ ಮತದಾನಕ್ಕೆ ಜನರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮತದಾರರಿಗೆ ಯಾರೂ ಯಾವುದೇ ರೀತಿ ಭೀತಿ ಉಂಟುಮಾಡುವದಾಗಲಿ, ಅಮಿಷ ತೋರಿಸುವುದಾಗಲಿ ಮಾಡುವಂತಿಲ್ಲ. ಚುನಾವಣಾ ಆಕ್ರಮಗಳ ಕುರಿತು ಜನರೇ ನೇರವಾಗಿ ಸಿ-ವಿಜಿಲ್ ಮೊಬೈಲ ಅಪ್ಲಿಕೇಶನ ಮೂಲಕ ದೂರು ನೇರವಾಗಿ ಸಲ್ಲಿಸಲು ಈಗ ಅವಕಾಶ ಕಲ್ಪಿಸಲಾಗಿದೆ. ಆದುದರಿಂದ ಯಾವುದೇ ವರ್ಗದ ಮತದಾರರು ಹಿಂಜರಿಯದೇ ಇಡೀ ವಾಡರ್ು, ಗ್ರಾಮಗಳು ಚುನಾವಣೆನೂರಕ್ಕೆ ನೂರರಷ್ಟು ಮತದಾನಕ್ಕೆ ಮುಂದಾಗಲು ಜಿಲ್ಲಾಧಿಕಾರಿಗಳು ಮನವಿ ಮಾಡಿದರು.
ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಶ್ರೀನಾಥ ಜೋಷಿ ಮಾತನಾಡಿ ಜಿಲ್ಲೆಯ ಯಾವುದೇ ವಾಡರ್ು ಅಥವಾ ಗ್ರಾಮಗಳಲ್ಲಿನ ಅರ್ಹ ಮತದಾರರು ಯಾವುದೇ ರೀತಿ ಭೀತಿಗೆ, ಒತ್ತಡಕ್ಕೆ ಒಳಗಾಗದೇ ಮುಕ್ತವಾಗಿ ಮತದಾನ ಮಾಡಲು ಭಾರತ ಚುನಾವಣಾ ಆಯೋಗದ ನಿದರ್ೇಶನದಂತೆ ಸಕಲ ಭದ್ರತಾ ಕ್ರಮಗಳನ್ನು ಜಿಲ್ಲಾ ಪೊಲೀಸ ಕೈಕೊಳ್ಳುತ್ತಿದೆ ಎಂದರು. ದೇಶದ ಒಳ್ಳೆಯದಕ್ಕಾಗಿ ಸರಿಯಾದ ರೀತಿಯಲ್ಲಿ ಮತ್ತು ಮುಕ್ತವಾಗಿ ತಪ್ಪದೇ ಮತದಾನ ಮಾಡುವದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಮನೆಯಲ್ಲಿ, ಓಣಿಯಲ್ಲಿ ಹಾಗೂ ಗ್ರಾಮ, ವಾಡರ್ುಗಳ ಎಲ್ಲ ಮತದಾರರು ತಪ್ಪದೇ ಮತ ಚಲಾಯಿಸಬೇಕು. ಮತದಾನ ಪ್ರಕ್ರಿಯೆಗೆ ಅಡಚನೆ, ಒತ್ತಡ ಹಾಕುವ, ಮತದಾನ ಮಾಡದಂತೆ ಹೆದರಿಸುವ ಮತ್ತು ಮುಕ್ತ ಮತದಾನಕ್ಕೆ ಅಡ್ಡಿಯುಂಟು ಮಾಡುವವರ ವಿರುದ್ದ ತ್ವರಿತ ಮತ್ತು ಕಠಿನ ಕ್ರಮವನ್ನು ಪೊಲೀಸ ಇಲಾಖೆ ಜರುಗಿಸಲಿದೆ ಎಂದು ತಿಳಿಸಿದ ಶ್ರೀನಾಥ ಜೋಷಿ ಯಾವುದೇ ಕಾರಣಕ್ಕೂ ತಮಗಿರುವ ಮತಾಧಿಕಾರವನ್ನು ತಪ್ಪದೇ ಚಲಾಯಿಸಬೇಕೆಂದು ಮನವಿ ಮಾಡಿದರು.
ತಾಂಡಾ ಜನರ ವಿಶ್ವಾಸ ವೃದ್ಧಿಸಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗಳು ತಾಂಡಾದಲ್ಲಿ ಪಾದಯಾತ್ರೆ ಮಾಡಿ ಮುಕ್ತ ಮತ್ತು ನಿಭರ್ೀತ ಮತದಾನಕ್ಕೆ ಜನರಲ್ಲಿ ಉತ್ಸಾಹ ಮೂಡಿಸಿದರು. ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ, ಡಿವೈಸ್ಪಿ ಟಿ. ವಿಜಯಕುಮಾರ, ತಹಶೀಲ್ದಾರ ಶ್ರೀನೀವಾಸ ಕುಲಕಣರ್ಿ, ಸಿಪಿಐ ಸಿದ್ದಲಿಂಗನಗೌಡಾ ಪಾಟೀಲ, ಗದಗ ಗ್ರಾಮೀಣ ಪಿ.ಎಸ್.ಐ ಮಲ್ಲಿಕಾಜರ್ುನ ಕುಲಕಣರ್ಿ,ಲಕ್ಸಪ್ಪ ಆರಿ, ಕಳಸಾಪೂರ ತಾಂಡಾದ ಮುಖಂಡರು, ಗುರುಹಿರಿಯರು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.