ಗದಗ: ಮತದಾನ ಜಾಗೃತಿ: ಬೀದಿ ನಾಟಕ ಪ್ರದರ್ಶನ

ಗದಗ 05:  ಲೋಕಸಭಾ ಸಾರ್ವತ್ರಿಕ ಚುನಾವಣೆ-2019ರ ಪ್ರಯುಕ್ತ  ಮತದಾನದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ  ಗದಗ ಜಿಲ್ಲಾ ಸ್ವೀಪ್ ಸಮಿತಿ ವಿವಿಧ ರೀತಿಯ ಮತದಾರ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಇದರ ಅಂಗವಾಗಿ ಶಿರಹಟ್ಟಿ ನಗರದ ಒಡವಿ ಮತ್ತು ಬೆಳಗಟ್ಟೆ  ಗ್ರಾಮಗಳಲ್ಲಿ   ದಿ.4 ರಂದು ಮತದಾನ ಜಾಗೃತಿ ಮೂಡಿಸುವ ಬೀದಿ ನಾಟಕಗಳನ್ನು ಪ್ರದಶರ್ಿಸಲಾಯಿತು. 

     ಮತದಾರರ ಪಟ್ಟಿಯಲ್ಲಿರುವ ಎಲ್ಲ ಅರ್ಹ ಮತದಾರರು ಆಮಿಷಕ್ಕೊಳಗಾಗದೇ ತಪ್ಪದೇ ಮತಚಲಾಯಿಸಲು ಪ್ರೇರೆಪಿಸುವ ಧ್ಯೇಯದೊಂದಿಗೆ ಈ ಬೀದಿ ನಾಟಕಗಳನ್ನು ಆಯೋಜಿಸಲಾಗಿದೆ. ಗ್ರಾ, ಪಂ ಅಧಿಕಾರಿ ಮಲ್ಲೇಶ ಮಾದರ್, ಎಚ್,ಎಫ್,ಕುಸಣ್ಣವರ, ಹಾಗೂ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  ಕೋತಬಾಳದ ಅರುಣೋದಯ ಕಲಾ ತಂಡದವರು ಮತದಾರರ ಜಾಗೃತಿಯ ಬೀದಿ ನಾಟಕ ಪ್ರದಶರ್ಿಸಿದರು.