ಗದಗ: ಎಸ್.ಎಸ್.ಎಲ್.ಸಿ. ಪರೀಕ್ಷೆ ಶಾಂತಿಯುತ, ವ್ಯವಸ್ಥಿತವಾಗಿ ಜರುಗಿಸಲು ಸೂಕ್ತ ಕ್ರಮಕೈಗೊಳ್ಳಿ: ಹಿರೇಮಠ ಹೇಳಿಕೆ

ಗದಗ 12:   ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಗಳು ಮಾರ್ಚ 21 ರಿಂದ  ಪ್ರಾರಂಭವಾಗುತ್ತಿದ್ದು, ಪರೀಕ್ಷೆಗಳು ಶಾಂತಿಯುತವಾಗಿ ಹಾಗೂ ವ್ಯವಸ್ಥಿತವಾಗಿ  ಜರುಗಲು  ಸೂಕ್ತ  ಕ್ರಮಕೈಗೊಳ್ಳಬೇಕೆಂದು  ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ತಿಳಿಸಿದರು.

        ಅವರಿಂದು ಗದಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ  ಎಸ್.ಎಸ್.ಎಲ್.ಸಿ. ಪರೀಕ್ಷೆ   ಪೂರ್ವ ಸಿದ್ಧತಾ ಸಭೆಯ   ಅಧ್ಯಕ್ಷತೆ ವಹಿಸಿ ಮಾತನಾಡಿದರು.   ಜಿಲ್ಲೆಯಲ್ಲಿನ 58 ಪರೀಕ್ಷಾ ಕೇಂದ್ರಗಳಲ್ಲಿ  ಮೂಲಭೂತ ಸೌಕರ್ಯಗಳು,    ಸಿ.ಸಿ. ಟಿವಿ   ವ್ಯವಸ್ಥೆ  ಕುರಿತು ಪರಿಶೀಲನೆ ನಡೆಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.    ಪರೀಕ್ಷಾ ಕೊಠಡಿಗಳಲ್ಲಿ  ಸ್ವಚ್ಛತೆಗೆ ಆದ್ಯತೆ ಕೊಟ್ಟು  ಪರೀಕ್ಷಾ ಸಂದರ್ಭದಲ್ಲಿ  ಯಾವುದೇ  ಅವ್ಯವಹಾರ ನಡೆಯದಂತೆ ಹಾಗೂ ಮಕ್ಕಳು ನಿಭರ್ಿತಿಯಿಂದ ಪರೀಕ್ಷೆ ಬರೆಯಲು ಮುಕ್ತ ವಾತಾವರಣ ನಿಮರ್ಿಸಿ   ಪರೀಕ್ಷಾ ಫಲಿತಾಂಶ ಉನ್ನತ ಮಟ್ಟಕ್ಕೆ  ತಲುಪುವಂತೆ    ಶಿಕ್ಷಣ ಇಲಾಖೆಯ ಮುಖ್ಯಸ್ಥರು  ಕ್ರಮ ವಹಿಸಬೇಕು  ಎಂದು  ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಚವ್ಹಾಣ ಅವರು ಮಾತನಾಡಿ  ಪರೀಕ್ಷಾ ಸಂದರ್ಭದಲ್ಲಿ   ಯಾವುದೇ ಅಕ್ರಮಗಳಿಗೆ ಎಡೆಮಾಡಿಕೊಡಬಾರದು.    ಪರೀಕ್ಷಾ ಕೇಂದ್ರಗಳಲ್ಲಿ  ಮೂಲಭೂತ ಸೌಕರ್ಯಗಳ ವ್ಯವಸ್ಥೆಯನ್ನು  ಬಿ ಇ ಓಗಳು ಪರಿಶೀಲಿಸಬೇಕೆಂದು ತಿಳಿಸಿದರು.

           ಸಾರ್ವಜನಿಕ ಶಿಕ್ಷಣ ಇಲಾಖೆಯ  ಉಪನಿದರ್ೇಶಕರಾದ ಎನ್.ಎಚ್. ನಾಗೂರ ಅವರು ಮಾತನಾಡಿ  ಜಿಲ್ಲೆಯಲ್ಲಿನ 14454  ರೆಗ್ಯುಲರ್ ಮ ಅಭ್ಯಥರ್ಿಗಳು ಹಾಗೂ 615 ಖಾಸಗಿ ಅಭ್ಯರ್ಥಿ ಸೇರಿದಂತೆ ಒಟ್ಟು 15069 ಮಕ್ಕಳು ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಹಾಜರಾಗಲಿದ್ದಾರೆ. 1 ಸೂಕ್ಷ್ಮ ಕೇಂದ್ರ ಹಾಗೂ 57 ಸಾಮಾನ್ಯ ಕೇಂದ್ರಗಳಿದ್ದು  ಒಟ್ಟಾರೆಯಾಗಿ ಜಲ್ಲೆಯಲ್ಲಿ 58 ಪರೀಕ್ಷಾ ಕೇಂದ್ರಗಳಿವೆ.    ಪರೀಕ್ಷೆ ಸುವ್ಯವಸ್ಥಿತವಾಗಿ ಜರುಗಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ  ಎಂದು ಎನ್.ಎಚ್. ನಾಗೂರ ತಿಳಿಸಿದರು.        

ಸಭೆಯಲ್ಲಿ  ವಾಹನಗಳ ನಿಯೋಜನೆ, ಸೂಕ್ತ  ಪೊಲೀಸ ಬಂದೋಬಸ್ತ್, ಪರೀಕ್ಷಾ ಕೇಂದ್ರಗಳಲ್ಲಿ  ಆಸನ ವ್ಯವಸ್ಥೆ, ವೈದ್ಯಕೀಯ ವ್ಯವಸ್ಥೆ,  ಪರೀಕ್ಷಾ ಕೇಂದ್ರಗಳಲ್ಲಿ  ಮೂಲ ಭೂತ ಸೌಕರ್ಯಗಳು,  ಪರೀಕ್ಷಾ ಕೇಂದ್ರಗಳಲ್ಲಿ    ಸಿಸಿ ಟಿವಿ ಅಳವಡಿಕೆ ಕುರಿತು ಚಚರ್ಿಸಲಾಯಿತು. ಸಭೆಯಲ್ಲಿ  ತಾಲೂಕಾ  ಕ್ಷೇತ್ರ ಶಿಕ್ಷಣಾಧಿಕಾರಿಗಳು,  ಮುಖ್ಯ ಅಧೀಕ್ಷಕರುಗಳು, ಶಿಕ್ಷಣ ಇಲಾಖೆಯ  ಅಧಿಕಾರಿಗಳು, ಶಾಲಾ ಮುಖ್ಯಸ್ಥರುಗಳು ಉಪಸ್ಥಿತರಿದ್ದರು.