ಗದಗ 28: ಭಾರತ ಚುನಾವಣಾ ಆಯೋಗವು ದಿವ್ಯಾಂಗರಿಗೆ ಹಿರಿಯ ಮತದಾರರಿಗೆ ವಿಶೇಷ ಗಮನ ನೀಡಿ ಅವರು ಮತದಾನ ಮಾಡಲು ಮತಗಟ್ಟೆಗೆ ಬರಲು ಹಲವು ಸೌಲಭ್ಯಗಳನ್ನು ಒದಗಿಸಿದೆ. ಜಿಲ್ಲೆಯಲ್ಲಿ ಅವುಗಳು ಸಂಬಂಧಿತ ಎಲ್ಲ ಮತಗಟ್ಟೆಗಳಲ್ಲಿ ಇರುವಂತೆ ಕ್ರಮ ವಹಿಸಬೇಕು ಎಂದು ಬೆಳಗಾವಿ ಪ್ರಾದೇಶಿಕ ಆಯುಕ್ತ ತುಷಾರ ಗಿರಿನಾಥ ಸೂಚಿಸಿದರು. ಅವರು ಹುಲಕೋಟಿಯ ಕೆ.ಎಚ್.ಪಾಟೀಲ ಸರ್ಕಾರಿ ಪ್ರೌಢಶಾಲೆಯಲ್ಲಿ ಇರುವ ಮತಗಟ್ಟೆ ಸಂಖ್ಯೆ 142 ಹಾಗೂ 143 ಕ್ಕೆ ಭೇಟಿ ನೀಡಿ, ರ್ಯಾಂಪ್, ವೀಲ್ಚೇರ್ ಸೌಲಭ್ಯ ಇರುವ ಕುರಿತು ಪರಿಶೀಲಿಸಿದರು.
ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಜಿ.ಪಂ. ಸಿ.ಇ.ಓ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಮಂಜುನಾಥ ಚವ್ಹಾಣ, ದಿವ್ಯಾಂಗರಿಗೆ ಜಿಲ್ಲೆಯ ಮತಗಟ್ಟೆಗಳಲ್ಲಿ ಕಲ್ಪಿಸಿರುವ ಸೌಲಭ್ಯ ಮತದಾರರ ಸಂಖ್ಯೆ ಕುರಿತು ಪ್ರಾದೇಶಿಕ ಆಯುಕ್ತರಿಗೆ ವಿವರಣೆ ನೀಡಿದರು.
ಗದಗ ಜಿ.ಪಂ. ಉಪಕಾರ್ಯದಶರ್ಿ ಪ್ರಾಣೇಶ ರಾವ್ , ಜಿಲ್ಲಾ ಸ್ವೀಪ್ ಸಮಿತಿ ಸದಸ್ಯ ಕಾರ್ಯದಶರ್ಿ ಟಿ. ದಿನೇಶ, ಆಹಾರ ಇಲಾಖೆಯ ಜಂಟಿ ನಿದರ್ೇಶಕ ಸದಾಶಿವ ಮಜರ್ಿ, ಗದಗ ತಹಶೀಲ್ದಾರ ಶ್ರೀನಿವಾಸಮೂತರ್ಿ ಕುಲಕಣರ್ಿ , ವಿಕಲಚೇತನ ಹಾಗೂ ಹಿರಿಯ ನಾಗರಿಕರ ಇಲಾಖೆ ಅಧಿಕಾರಿ ಆಶು ನದಾಫ್ ಹಾಗೂ ಅಧಿಕಾರಿಗಳು ಜೊತೆಗಿದ್ದರು.